ಆ್ಯಪ್ನಗರ

ಅಗ್ನಿ ದುರಂತ: ಯುವಕನಿಗೆ ಗಾಯ

ಹಾನಗಲ್ಲ: ಶಾಲೆಯ ಪಕ್ಕದಲ್ಲಿನ ಭತ್ತದ ಹುಲ್ಲಿನ ಬಣವೆಗೆ ಬೆಂಕಿ ಹತ್ತಿಕೊಂಡು ಶಾಲೆ ಕಟ್ಟಡಕ್ಕೆ ವ್ಯಾಪಿಸುವುದನ್ನು ತಪ್ಪಿಸಲು ಹೋಗಿ ಯುವಕನೊಬ್ಬ ಅದೇ ಬೆಂಕಿ ಬಣವೆಗೆ ಬಿದ್ದು ತೀವ್ರವಾಗಿ ಗಾಯಗೊಂಡ ಘಟನೆ ತಾಲೂಕಿನ ಯಲಿವಾಳ ಗ್ರಾಮದಲ್ಲಿ ಸಂಭವಿಸಿದೆ.

Vijaya Karnataka 20 May 2019, 5:00 am
ಹಾನಗಲ್ಲ: ಶಾಲೆಯ ಪಕ್ಕದಲ್ಲಿನ ಭತ್ತದ ಹುಲ್ಲಿನ ಬಣವೆಗೆ ಬೆಂಕಿ ಹತ್ತಿಕೊಂಡು ಶಾಲೆ ಕಟ್ಟಡಕ್ಕೆ ವ್ಯಾಪಿಸುವುದನ್ನು ತಪ್ಪಿಸಲು ಹೋಗಿ ಯುವಕನೊಬ್ಬ ಅದೇ ಬೆಂಕಿ ಬಣವೆಗೆ ಬಿದ್ದು ತೀವ್ರವಾಗಿ ಗಾಯಗೊಂಡ ಘಟನೆ ತಾಲೂಕಿನ ಯಲಿವಾಳ ಗ್ರಾಮದಲ್ಲಿ ಸಂಭವಿಸಿದೆ.
Vijaya Karnataka Web HVR-19HGL2


ಶನಿವಾರ ಸಂಜೆ ಯಲಿವಾಳ ಗ್ರಾಮದ ಯಲ್ಲಪ್ಪ ಕುರುಬರ ಅವರಿಗೆ ಸೇರಿದ ಸುಮಾರು 7 ಎಕರೆ ಭತ್ತದ ಹುಲ್ಲಿನ ಬಣವೆಗೆ ಬೆಂಕಿ ಹತ್ತಿತ್ತು. ಬಣವೆಗೆ ಹೊಂದಿಕೊಂಡ ಶಾಲೆಗೆ ಬೆಂಕಿ ಆವರಿಸುತ್ತಿರುವುದನ್ನು ಗಮನಿಸಿದ ಯುವಕರು, ಶಾಲೆಗೆ ಬೆಂಕಿ ಬಿಳುವುದನ್ನು ತಪ್ಪಿಸಲು ಶಾಲೆಯ ಛಾವಣಿ ಮೇಲೆ ಹತ್ತಿ ಬೆಂಕಿ ನಂದಿಸಲು ಮುಂದಾಗಿದ್ದಾರೆ.

ಈ ಧಾವಂತದಲ್ಲಿ ಮಾರುತಿ ದೇವೇಂದ್ರಪ್ಪ ರಂಗಣ್ಣನವರ (23) ಎಂಬ ಯುವಕ ಆಯತಪ್ಪಿ ಬೆಂಕಿಯಿಂದ ಆವೃತವಾಗಿದ್ದ ಬಣವೆಗೆ ಬಿದ್ದು ಗಂಭೀರವಾದ ಸುಟ್ಟ ಗಾಯಗಳಾಗಿವೆ. ತಕ್ಷ ಣ ಗ್ರಾಮಸ್ಥರು ಆತನನ್ನು ಶಿಗ್ಗಾಂವಿ ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ದೇಹದ ಅರ್ದಕ್ಕೂ ಹೆಚ್ಚು ಭಾಗ ಸುಟ್ಟಿದ್ದರಿಂದ ಗಾಯಾಳು ಮಾರುತಿಯನ್ನು ಹುಬ್ಬಳ್ಳಿ ಕಿಮ್ಸಗೆ ದಾಖಲಿಸಿದ್ದಾರೆ. ಹಾನಗಲ್ಲನ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಅಗ್ನಿಯನ್ನು ನಿಯಂತ್ರಿಸಿದ್ದಾರೆ.

ಗಾಯಾಳುವಿನ ಸೋದರ ಸಂಬಂಧಿ ಅಣ್ಣಪ್ಪ ರಂಗಣ್ಣನವರ ಹಾನಗಲ್ಲ ಪೋಲೀಸ್‌ ಠಾಣೆಯಲ್ಲಿ ಈ ಬಗ್ಗೆ ದೂರು ನೀಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ