ಆ್ಯಪ್ನಗರ

ಜೆಡಿಎಸ್‌ನಿಂದ ಶಿವಲಿಂಗ ಶ್ರೀಗಳು ಕಣಕ್ಕೆ

ಹಿರೇಕೆರೂರ: ಜೆಡಿಎಸ್‌ ಪಕ್ಷದ ಅಭ್ಯರ್ಥಿಯಾಗಿ ರಟ್ಟೀಹಳ್ಳಿ ಪಟ್ಟಣದ ಕಬ್ಬಿಣಕಂತಿ ಮಠದ ಶ್ರೀಶಿವಲಿಂಗ ಶಿವಾಚಾರ್ಯ ಸ್ವಾಮೀಜಿ ಸೋಮವಾರ ಕೆಲವೇ ಕೆಲವು ಭಕ್ತರೊಂದಿಗೆ ಪಟ್ಟಣದ ತಹಸೀಲ್ದಾರ್‌ ಕಚೇರಿಗೆ ಆಗಮಿಸಿ ಚುನಾವಣಾಧಿಕಾರಿ ವಿನೋದಕುಮಾರ ಹೆಗ್ಗಳಿಕೆ ಅವರಿಗೆ ನಾಮಪತ್ರ ಸಲ್ಲಿಸಿದರು.

Vijaya Karnataka 19 Nov 2019, 5:00 am
ಹಿರೇಕೆರೂರ: ಜೆಡಿಎಸ್‌ ಪಕ್ಷದ ಅಭ್ಯರ್ಥಿಯಾಗಿ ರಟ್ಟೀಹಳ್ಳಿ ಪಟ್ಟಣದ ಕಬ್ಬಿಣಕಂತಿ ಮಠದ ಶ್ರೀಶಿವಲಿಂಗ ಶಿವಾಚಾರ್ಯ ಸ್ವಾಮೀಜಿ ಸೋಮವಾರ ಕೆಲವೇ ಕೆಲವು ಭಕ್ತರೊಂದಿಗೆ ಪಟ್ಟಣದ ತಹಸೀಲ್ದಾರ್‌ ಕಚೇರಿಗೆ ಆಗಮಿಸಿ ಚುನಾವಣಾಧಿಕಾರಿ ವಿನೋದಕುಮಾರ ಹೆಗ್ಗಳಿಕೆ ಅವರಿಗೆ ನಾಮಪತ್ರ ಸಲ್ಲಿಸಿದರು.
Vijaya Karnataka Web from jds to shivalinga shri
ಜೆಡಿಎಸ್‌ನಿಂದ ಶಿವಲಿಂಗ ಶ್ರೀಗಳು ಕಣಕ್ಕೆ


ನಾಮಪತ್ರ ಸಲ್ಲಿಸಿದ ನಂತರ ಶಿವಲಿಂಗ ಶ್ರೀಗಳು ಮಾತನಾಡಿ, ಭಕ್ತರ ಒತ್ತಡದಿಂದ ನಾನು ಜೆಡಿಎಸ್‌ ಪಕ್ಷದ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿ ಚುನಾವಣೆಗೆ ಸ್ಪರ್ಧಿಸಿದ್ದೇನೆ. ನಾನಾಗಿಯೇ ಟಿಕೇಟ್‌ ಕೇಳಿಲ್ಲ. ನಮ್ಮ ಸೇವಾಭಾವ ನೋಡಿ ಜೆಡಿಎಸ್‌ನವರು ಒತ್ತಡ ಹೇರಿ ಟಿಕೆಟ್‌ ನೀಡಿ ನಿಲ್ಲಿಸಿದ್ದಾರೆ. ಸೋಲಿನ ಭಯದಿಂದ ಕೆಲವರು ನಾನು ಸ್ಪರ್ಧೆ ಮಾಡದಂತೆ ನಮ್ಮ ಮನವೊಲಿಸುವ ಕೆಲಸ ಮಾಡಿದ್ದರು. ಯಾವುದೇ ಆಮಿಷಕ್ಕೊಳಗಾಗದೆ ಸ್ಪರ್ಧೆ ಮಾಡಿದ್ದೇನೆ. ಕಣದಿಂದ ಯಾವುದೇ ಕಾರಣಕ್ಕೆ ಹಿಂದೆ ಸರಿಯುವ ಮಾತೆ ಇಲ್ಲಎಂದರು. ನಮ್ಮ ಸೇವೆ ಅವಶ್ಯಕತೆ ಇದ್ದರೆ ಭಕ್ತರು ನನ್ನನ್ನು ಬಳಸಿಕೊಳ್ಳಲಿ ಎಂದು ಜನರಿಗೆ ಹೇಳುವ ಮೂಲಕ ಮತಯಾಚನೆ ಮಾಡುತ್ತೇನೆ. ಮಠದ ಜವಾಬ್ದಾರಿ ಜತೆಗೆ ರಾಜಕೀಯ ಜವಾಬ್ದಾರಿಯನ್ನು ನಿಭಾಯಿಸುತ್ತೇನೆ ಎಂದು ಹೇಳಿದರು.

ಜಿಲ್ಲಾಜೆಡಿಎಸ್‌ ಘಟಕದ ಅಧ್ಯಕ್ಷ ಅಶೋಕ ಬೇವಿನಮರದ, ಹಿರಿಯ ಮುಖಂಡ ನಿಂಗಪ್ಪ ಚಳಗೇರಿ, ಮಂಜಪ್ಪ ಮುದಿಯಪ್ಪನವರ, ತಾಲೂಕ ಘಟಕದ ಅಧ್ಯಕ್ಷ ಬಸನಗೌಡ ಸಿದ್ದಪ್ಪಗೌಡ್ರ, ಜಿಲ್ಲಾಪ್ರಧಾನ ಕಾರ್ಯದರ್ಶಿ ಉಮೇಶ ತಳವಾರ, ಎಂ.ಬಿ.ಸಾವಜ್ಜಿಯವರ, ಮೂಕೇಶ ಅಗಸಿಬಾಗಿಲ, ಮನೋಹರ ಗಿರಣಿ, ಸಮೀರ್‌ ಪ್ಯಾಟಿ, ಶಿವಾನಂದ ಹಳ್ಳೇರ್‌, ಶೋಭಾ ಚಕ್ರಸಾಲಿ, ದನಂಜಯ ಲಮಾಣಿ, ನಾಗರಾಜ ಮತ್ತೀಹಳ್ಳಿ, ಬಸವರಾಜ ನಡುವಿನಕೇರಿ, ಮೆಹಬೂಬಿ ರಟ್ಟೀಹಳ್ಳಿ, ಆತಾವುಲ್ಲಾಕಮದೊಡ, ಜಿಕ್ರಿಯಾ ನವಲಗುಂದ ಹಾಗೂ ಮತ್ತಿತರರು ಉಪಸ್ಥಿತರಿದ್ದರು.

ಒಬ್ಬರೇ ಕುಳಿತ ಸ್ವಾಮೀಜಿ : ನಾಮಪತ್ರ ಸಲ್ಲಿಸಲು ತಹಸೀಲ್ದಾರ್‌ ಕಚೇರಿಗೆ ಆಗಮಿಸಿದ್ದ ಶ್ರೀಗಳ ಜತೆಗೆ ಬಂದಿದ್ದ ಬೆಂಬಲಿಗರೊಬ್ಬರು ನಾಮಪತ್ರಗಳನ್ನು ಝರಾಕ್ಸ್‌ ಮಾಡಿಸಲು ಹೋದ ಸಂದರ್ಭದಲ್ಲಿಕೆಲಹೊತ್ತು ಚುನಾವಣಾಧಿಕಾರಿ ಎದುರು ಶ್ರೀಗಳು ಒಬ್ಬರೆ ಕುಳಿತುಕೊಂಡ ಪ್ರಸಂಗ ಜರುಗಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ