Please enable javascript.ಗುದ್ದಲೀಶ್ವರ ಮಠದ 4ನೇ ಪೀಠಾಧಿಪತಿ,ಗದಿಗೆಪ್ಪಜ್ಜನವರ ಅಡ್ಡಪಲ್ಲಕ್ಕಿ ಮಹೋತ್ಸವ - gadigippappajan's cross-country jubilee - Vijay Karnataka

ಗದಿಗೆಪ್ಪಜ್ಜನವರ ಅಡ್ಡಪಲ್ಲಕ್ಕಿ ಮಹೋತ್ಸವ

Vijaya Karnataka 20 Aug 2019, 5:00 am
Subscribe

ಗುತ್ತಲ: ಗುದ್ದಲೀಶ್ವರ ಮಠದ 4ನೇ ಪೀಠಾಧಿಪತಿ ಲಿಂ.ಶ್ರೀ ಗದಿಗೆಪ್ಪಜ್ಜನವರ ಅಡ್ಡಪಲ್ಲಕ್ಕಿ ಮಹೋತ್ಸವ ರವಿವಾರ ಹೊಸರಿತ್ತಿಯಲ್ಲಿ ಜರುಗಿತು.

HVR-19GTL 2
ಗುತ್ತಲ: ಗುದ್ದಲೀಶ್ವರ ಮಠದ 4ನೇ ಪೀಠಾಧಿಪತಿ ಲಿಂ.ಶ್ರೀ ಗದಿಗೆಪ್ಪಜ್ಜನವರ ಅಡ್ಡಪಲ್ಲಕ್ಕಿ ಮಹೋತ್ಸವ ರವಿವಾರ ಹೊಸರಿತ್ತಿಯಲ್ಲಿ ಜರುಗಿತು.

ಕರ್ತೃ ಗದ್ದುಗೆ ಸೇರಿದಂತೆ ಹಿಂದಿನ ಎಲ್ಲ ಶ್ರೀಗಳ ಗದ್ದುಗೆಗೆ ರುದ್ರಾಭಿಷೇಕ, ವಿವಿಧ ಪೂಜೆ ಕೈಕಂರ್ಯಗಳು ನೆರವೇರಿದವು. ನಂತರ ಗುದ್ದಲೀಶ್ವರ ಮಠದಿಂದ 108 ಸುಮಂಗಲೆಯರ ಪೂರ್ಣ ಕುಂಭ, ಸಂಬಾಳ, ನಂದಿಕೋಲು ವಿವಿಧ ವಾದ್ಯಗಳ ಮೂಲಕ ಅಡ್ಡಪಲ್ಲಕ್ಕಿ ಊರಿನ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು.

ಮಠದ 5ನೇ ಪೀಠಾಧಿಪತಿ ಗುದ್ದಲೀಶ್ವರ ಸ್ವಾಮೀಜಿ, ಗುಡ್ಡದ ಆನ್ವೇರಿಯ ಶಿವಯೋಗೀಶ್ವರ ಸ್ವಾಮೀಜಿ, ಹತ್ತಿಮತ್ತೂರ ನಿಜಗುಣ ಸ್ವಾಮೀಜಿ, ಹೂವಿನ ಶಿಗ್ಲಿಯ ಚನ್ನವೀರ ಸ್ವಾಮೀಜಿ, ಗುತ್ತಲದ ಗುರುಸಿದ್ದ ಸ್ವಾಮಿಗಳು, ಅಗಡಿಯ ಗುರುಲಿಂಗಸ್ವಾಮಿಗಳು ಉಪಸ್ಥಿತರಿದ್ದರು.

ಜಿಪಂ ಸದಸ್ಯ ಸಿದ್ದರಾಜ ಕಲಕೋಟಿ, ಐ.ಜೆ ಕೋರಿ, ಶಂಕ್ರಣ್ಣ ಅಂಬಿಗೇರ, ನರೇಶ ಮಂತಟ್ಟಿ, ಮಲ್ಲೇಶಪ್ಪ ದೀಪಾಳಿ, ಗುಡದಯ್ಯ ಭರಡಿ, ಚನ್ನಪ್ಪ ಹಳ್ಳಿಕೇರಿ, ಮುತ್ತಣ್ಣ ಮಠದ, ಅರುಣಕುಮಾರ ಶೆಟ್ಟರ್‌, ಸಿದ್ದಣ್ಣ ಹಳ್ಳಿಕೇರಿ, ಪರಶುರಾಮ ಚಂದ್ರಗಿರಿ, ಚನ್ನವೀರಯ್ಯ ಹಾವೇರಿಮಠ, ಶಂಕ್ರಣ್ಣ ಗಾಣಗೇರ, ಗಿರೀಶ ಅಂಕಲಕೋಟಿ, ಶಂಭಣ್ಣ ಅರಳಿ, ತಿಪಟೂರ, ಕುರಬರಹಳ್ಳಿ, ನೆಗಳೂರ, ಚನ್ನೂರ, ಕೊರಡುರ, ಹಳೇರಿತ್ತಿ ಸೇರಿದಂತೆ ಸುತ್ತಮುತ್ತಲಿನ ಸಾವಿರಾರು ಭಾಗವಹಿಸಿದರು.
ಕಾಮೆಂಟ್‌ ಮಾಡಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ