ಆ್ಯಪ್ನಗರ

ಸಿಸಿ ಕ್ಯಾಮರಾ ಕಾವಲಿನಲ್ಲಿ ಗಣೇಶ ವಿಸರ್ಜನೆ

ಅಕ್ಕಿಆಲೂರು :ಸಮೀಪದ ಹಿರೂರು ಗ್ರಾಮದಲ್ಲಿ ಭಾನುವಾರ ಮಧ್ಯಾಹ್ನ ಪೊಲೀಸ್‌ ಹಾಗೂ ಸಿಸಿ ಕ್ಯಾಮರಾ ಕಣ್ಗಾವಲಿನ ಮಧ್ಯೆ ನೂರಾರು ಸಂಖ್ಯೆಯ ಯುವಕರ ಹರ್ಷೋದ್ಘಾರದೊಂದಿಗೆ ಸಾರ್ವಜನಿಕ ಗಣೇಶ ಮೂರ್ತಿಗಳ ವಿಸರ್ಜನೆ ಸಡಗರದಿಂದ ನೆರವೇರಿತು.

Vijaya Karnataka 24 Sep 2018, 5:00 am
ಅಕ್ಕಿಆಲೂರು :ಸಮೀಪದ ಹಿರೂರು ಗ್ರಾಮದಲ್ಲಿ ಭಾನುವಾರ ಮಧ್ಯಾಹ್ನ ಪೊಲೀಸ್‌ ಹಾಗೂ ಸಿಸಿ ಕ್ಯಾಮರಾ ಕಣ್ಗಾವಲಿನ ಮಧ್ಯೆ ನೂರಾರು ಸಂಖ್ಯೆಯ ಯುವಕರ ಹರ್ಷೋದ್ಘಾರದೊಂದಿಗೆ ಸಾರ್ವಜನಿಕ ಗಣೇಶ ಮೂರ್ತಿಗಳ ವಿಸರ್ಜನೆ ಸಡಗರದಿಂದ ನೆರವೇರಿತು.
Vijaya Karnataka Web ganesh discharges in cc camera watch
ಸಿಸಿ ಕ್ಯಾಮರಾ ಕಾವಲಿನಲ್ಲಿ ಗಣೇಶ ವಿಸರ್ಜನೆ


ಇತ್ತೀಚಿಗೆ ಗಣೇಶ ಮೂರ್ತಿಗಳ ವಿಸರ್ಜನೆ ಮೆರವಣಿಗೆ ಸಂದರ್ಭದಲ್ಲಿ ಕಲ್ಲು ತೂರಾಟ ನಡೆದಿದ್ದರಿಂದ ಮುಂಜಾಗ್ರತಾ ಕ್ರಮವಾಗಿ ಬಿಗಿ ಪೊಲೀಸ್‌ ಬಂದೋಬಸ್ತ್‌ ಕೈಗೊಳ್ಳಲಾಗಿತ್ತು. ಮೆರವಣಿಗೆ ಮಾರ್ಗದಲ್ಲಿ ಸಿಸಿ ಕ್ಯಾಮರಾ ಅಳವಡಿಸಲಾಗಿತ್ತು. ಗ್ರಾಮ ಪ್ರವೇಶಿಸುವ ಸ್ಥಳಗಳಲ್ಲಿ ಬ್ಯಾರಿಕೇಡ್‌ ಅಳವಡಿಸಿ, ಬೇರೆ ಊರುಗಳಿಂದ ಯುವಕರು ಬರದಂತೆ ತಡೆಯಲಾಯಿತು. ಆದರೂ ಯುವಕರು ಪೊಲೀಸರ ಕಣ್ತಪ್ಪಿಸಿ ಕಾಲುವೆ ಏರಿ, ಹೊಲ-ಗದ್ದೆಗಳ ದಾರಿ ಹಿಡಿದು ಹಿರೂರು ತಲುಪಿದ್ದರು.

ವಿಶೇಷ ಪೂಜೆ ಬಳಿಕ ಸಂಸದ ಶಿವಕುಮಾರ ಉದಾಸಿ, ಶಾಸಕ ಸಿ.ಎಂ.ಉದಾಸಿ ಮೆರವಣಿಗೆಗೆ ಚಾಲನೆ ನೀಡಿ ಮಾತನಾಡಿ, ಸ್ವಾತಂತ್ರ್ಯ ಹೋರಾಟಕ್ಕೆ ಬಲ ತುಂಬಲು ಜನರನ್ನು ಒಂದೆಡೆ ಸೇರಿಸುವ ನಿಟ್ಟಿನಲ್ಲಿ ಆರಂಭಗೊಂಡ ಗಣೇಶೋತ್ಸವ ಇಂದು ತನ್ನ ಮೂಲ ಉದ್ದೇಶ ಕಳೆದುಕೊಳ್ಳುತ್ತಿದೆ. ಉತ್ಸವ, ಹಬ್ಬ, ಹರಿದಿನ, ಆಚರಣೆಗಳು ಅರ್ಥಪೂರ್ಣವಾಗಬೇಕಿದ್ದು, ಈ ನಿಟ್ಟಿನಲ್ಲಿ ಯುವ ಸಮೂಹ ಕಳಕಳಿ ಪ್ರದರ್ಶಿಸಬೇಕಿದೆ ಎಂದರು.

ಬ್ಯಾಡಗಿ ಶಾಸಕ ವಿರುಪಾಕ್ಷ ಪ್ಪ ಬಳ್ಳಾರಿ ಸೇರಿದಂತೆ ತಾಲೂಕಿನ ವಿವಿಧ ಮುಖಂಡರು, ನೂರಾರು ಸಂಖ್ಯೆಯ ಯುವಕರು, ಗ್ರಾಮದ ಸಾರ್ವಜನಿಕ ಗಣೇಶೋತ್ಸವ ಸಮಿತಿಯ ಸದಸ್ಯರು, ಗ್ರಾಮಸ್ಥರು ಪಾಲ್ಗೊಂಡಿದ್ದರು. ಎಸ್‌ಪಿ ಕೆ.ಪರಶುರಾಮ್‌, ಶಿಗ್ಗಾಂವಿ ಡಿವೈಎಸ್‌ಪಿ ಎನ್‌.ಸಿ.ಭರಮನಿ, ಹಾನಗಲ್‌ ಸಿಪಿಐ ರೇವಪ್ಪ ಕಟ್ಟಿಮನಿ, ಪಿಎಸ್‌ಐ ಗುರುರಾಜ್‌ ಮೈಲಾರ, ಆಡೂರು ಪಿಎಸ್‌ಐ ಮುರುಗೇಶ ಬಂದೋಬಸ್ತ್‌ ನೇತೃತ್ವ ವಹಿಸಿದ್ದರು. 150 ಕ್ಕೂ ಹೆಚ್ಚು ಪೊಲೀಸ್‌ ಸಿಬ್ಬಂದಿ ಬಂದೋಬಸ್ತ್‌ಗೆ ನಿಯೋಜನೆಗೊಂಡಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ