ಆ್ಯಪ್ನಗರ

ಸೇನೆಗೆ ಆಯ್ಕೆಯಾದ ಗಾಜಿಗೆ ಸನ್ಮಾನ

ಹಾವೇರಿ: ಸತತ 4 ವರ್ಷಗಳ ಪ್ರಯತ್ನದ ನಂತರ ಭಾರತೀಯ ಸೇನೆಗೆ ಆಯ್ಕೆಯಾಗಿರುವ ಹಾವೇರಿಯ ಶಿವಾಜಿ ನಗರದ ಯುವಕ ಚನ್ನಬಸಪ್ಪ ಗಾಜಿಗೆ ಶ್ರೀ ಶಿವಲಿಂಗೇಶ್ವರ ಕಂಪ್ಯೂಟರ್‌ ಸೆಂಟರ್‌ ವತಿಯಿಂದ ಸನ್ಮಾನಿಸಿ ಬಿಳ್ಕೋಡಲಾಯಿತು.

Vijaya Karnataka 27 Dec 2019, 5:00 am
ಹಾವೇರಿ: ಸತತ 4 ವರ್ಷಗಳ ಪ್ರಯತ್ನದ ನಂತರ ಭಾರತೀಯ ಸೇನೆಗೆ ಆಯ್ಕೆಯಾಗಿರುವ ಹಾವೇರಿಯ ಶಿವಾಜಿ ನಗರದ ಯುವಕ ಚನ್ನಬಸಪ್ಪ ಗಾಜಿಗೆ ಶ್ರೀ ಶಿವಲಿಂಗೇಶ್ವರ ಕಂಪ್ಯೂಟರ್‌ ಸೆಂಟರ್‌ ವತಿಯಿಂದ ಸನ್ಮಾನಿಸಿ ಬಿಳ್ಕೋಡಲಾಯಿತು.
Vijaya Karnataka Web gazi honored for his selection for the army
ಸೇನೆಗೆ ಆಯ್ಕೆಯಾದ ಗಾಜಿಗೆ ಸನ್ಮಾನ


ಚನ್ನಬಸಪ್ಪ ಗಾಜಿ ಬಡ ಕುಟುಂಬದಲ್ಲಿಜನಿಸಿದರೂ ಸಾಧನೆಗೆ ಬಡತನ ಅಡ್ಡಿಯಾಗಲಿಲ್ಲಎಂಬುವುದನ್ನು ಸಾಧಿಸಿ ತೋರಿಸಿದ್ದಾರೆ. ಕುಟುಂಬ ನಿರ್ವಹಣೆಗಾಗಿ ತನ್ನ ವಿದ್ಯಾಭ್ಯಾಸಕ್ಕಾಗಿ ಬೇರೆ ಕಡೆ ಉದ್ಯೋಗ ಮಾಡುತ್ತಾ ಈ ಸಾಧನೆ ಮಾಡಿದ್ದಾರೆ.

ಭಾರತೀಯ ಸೇನೆಗೆ ಸೇರಬೇಕೆಂದು ಪಿಯುಸಿ ನಂತರ ಬೆಳಗಾವಿ, ವಿಜಾಪುರ, ದಾವಣಗೆರೆ, ಧಾರವಾಡದಲ್ಲಿರಾರ‍ಯಲಿಗೆ ಭಾಗವಹಿಸಿ ಎತ್ತರದಲ್ಲಿ, ರನ್ನಿಂಗ್‌ ಸೇರಿ ಇತರೆ ದೈಹಿಕ ಸಾಮರ್ಥ್ಯದಲ್ಲಿಪೇಲಾಗಿ ಹೊರ ಬರುತ್ತಿದ್ದೇ, ಆದರೆ ನಾನು ಸೇನೆಗೆ ಸೇರಬೇಕೆಂದು ಪಣತೊಟ್ಟು 5ನೇ ಬಾರಿಗೆ ಗದಗದಲ್ಲಿನಡೆದ ರಾರ‍ಯಲಿಯಲ್ಲಿಪಾಸಾಗಿ ಈಗ ಮಂಗಳೂರು ಇಂಡಿಯನ್‌ ಆರ್ಮಿಯ ಕ್ಲರ್ಕ್ ಆಗಿ ಆಯ್ಕೆಯಾಗಿ ಇದೇ ಡಿಸೆಂಬರ್‌ 28 ರಂದು ಕರ್ತವ್ಯಕ್ಕೆ ಹಾಜರಾಗಲಿದ್ದೇನೆ ಎಂದು ತಿಳಿಸಿದರು.

ಸುಮಾರು 15 ವರ್ಷಗಳಿಂದ ನಗರದ ಶಿವಲಿಂಗೇಶ್ವರ ಕಂಪ್ಯೂಟರ್‌ನಲ್ಲಿಕೆಲಸ ಮಾಡುತ್ತಾ ಪಿಯು ಮತ್ತು ಡಿಗ್ರಿ ಪೂರೈಸುವ ಮೂಲಕ ಈಗ ಭಾರತೀಯ ಸೇನೆಗೆ ಸೇರಿರುವುದು ಹೆಮ್ಮೆಯ ಸಂಗತಿಯಾಗಿದೆ.

ಚನ್ನಬಸಪ್ಪ ಗಾಜಿ ಸಾಧನೆ ಮೆಚ್ಚಿ ಶ್ರೀ ಶಿವಲಿಂಗೇಶ್ವರ ಕಂಪ್ಯೂಟರ್‌ ಸಂಸ್ಥೆ ವತಿಯಿಂದ ಹುಕ್ಕೇರಿಮಠದ ಸದಾಶಿವ ಸ್ವಾಮೀಜಿ ಸಮ್ಮುಖದಲ್ಲಿಸನ್ಮಾನಿಸಿ ಬೀಳ್ಕೊಟ್ಟರು. ಈ ಸಂದರ್ಭದಲ್ಲಿಶ್ರೀ ಶಿವಲಿಂಗೇಶ್ವರ ಕಂಪ್ಯೂಟರ್‌ ಸಂಸ್ಥೆಯ ಮುಖ್ಯಸ್ಥ ಸುರೇಶ ಮುರಡೂರ, ಸಿಬ್ಬಂದಿಗಳು, ಹುಕ್ಕೇರಿಮಠದ ಭಕ್ತರು ಸೇರಿದಂತೆ ಇತರರು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ