ಆ್ಯಪ್ನಗರ

ಬರವಣಿಗೆ ಕೌಶಲ್ಯ ಬೆಳೆಸಿಕೊಂಡರೆ ಉತ್ತಮ ಭವಿಷ್ಯ

ರಾಣೇಬೆನ್ನೂರ: ತಂತ್ರಜ್ಞಾನದ ಬೆಳವಣಿಗೆಯಿಂದಾಗಿ ಮಾಧ್ಯಮ ಕ್ಷೇತ್ರ ಪ್ರಬುದ್ಧತೆಯನ್ನು ಹೊಂದಿದೆ ಎಂದು ದಾವಣಗೆರಿ ವಿಶ್ವವಿದ್ಯಾಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಅಧ್ಯಕ್ಷ ಡಾ.ಶಿವಕುಮಾರ ಕಣಸೋಗಿ ಹೇಳಿದರು.

Vijaya Karnataka 21 Jul 2019, 5:00 am
ರಾಣೇಬೆನ್ನೂರ: ತಂತ್ರಜ್ಞಾನದ ಬೆಳವಣಿಗೆಯಿಂದಾಗಿ ಮಾಧ್ಯಮ ಕ್ಷೇತ್ರ ಪ್ರಬುದ್ಧತೆಯನ್ನು ಹೊಂದಿದೆ ಎಂದು ದಾವಣಗೆರಿ ವಿಶ್ವವಿದ್ಯಾಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಅಧ್ಯಕ್ಷ ಡಾ.ಶಿವಕುಮಾರ ಕಣಸೋಗಿ ಹೇಳಿದರು.
Vijaya Karnataka Web good future if writing skills are developed
ಬರವಣಿಗೆ ಕೌಶಲ್ಯ ಬೆಳೆಸಿಕೊಂಡರೆ ಉತ್ತಮ ಭವಿಷ್ಯ


ನಗರದ ನಾಗಶಾಂತಿ ಉನ್ನತಿ ಪದವಿ ಪೂರ್ವ ಕಾಲೇಜಿನಲ್ಲಿ ಶನಿವಾರ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕು ಘಟಕದ ವತಿಯಿಂದ ಏರ್ಪಡಿಸಲಾಗಿದ್ದ ಪತ್ರಿಕಾ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು. ಪತ್ರಿಕೋದ್ಯಮದ ಪದವಿ ಮಾತ್ರವಲ್ಲದೆ ಎಲ್ಲ ಪದವೀಧರರಿಗೂ ಪತ್ರಿಕಾ ಕ್ಷೇತ್ರದಲ್ಲಿ ಉದ್ಯೋಗ ಅವಕಾಶಗಳಿವೆ. ವಿದ್ಯಾರ್ಥಿಗಳು ಪುಸ್ತಕಗಳನ್ನು ಓದುವ ಹಾಗೂ ಬರವಣಿಗೆ ಕೌಶಲ್ಯ ಬೆಳೆಸಿಕೊಂಡಲ್ಲಿ ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಸಾಧ್ಯ. ಇಂದಿನ ಸ್ಪರ್ಧಾತ್ಮಕ ದಿನಗಳಲ್ಲಿ ಪತ್ರಕರ್ತರು ಹಲವಾರು ಸವಾಲುಗಳನ್ನು ಎದುರಿಸಿ ಕೆಲಸ ಮಾಡಬೇಕಾದ ಅನಿವಾರ್ಯತೆಯಿದೆ. ಪತ್ರಕರ್ತರು ತಮ್ಮ ಬರವಣಿಗೆಯಲ್ಲಿ ಅಭಿವೃದ್ಧಿ ಪರ ವಿಚಾರಗಳಿಗೆ ಒತ್ತು ನೀಡಬೇಕು. ವೃತ್ತಿಯಲ್ಲಿ ಬದ್ಧತೆ ಮತ್ತು ಪ್ರಾಮಾಣಿಕತೆಯಿದ್ದಲ್ಲಿ ಸಮಾಜದಲ್ಲಿ ಮನ್ನಣೆ ಪ್ರಾಪ್ತಿಯಾಗುತ್ತದೆ ಎಂದರು.

ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಕಾರ್ಯಕಾರಿಣಿ ಸದಸ್ಯ ನಿಂಗಪ್ಪ ಚಾವಡಿ, ಜಿಲ್ಲಾಧ್ಯಕ್ಷ ಎಸ್‌.ಟಿ.ವೇದಮೂರ್ತಿ, ಪ್ರಧಾನ ಕಾರ್ಯದರ್ಶಿ ರಾಮು ಮುದಿಗೌಡ್ರ, ರೈತ ಮುಖಂಡ ರವೀಂದ್ರಗೌಡ ಪಾಟೀಲ, ಉಪನ್ಯಾಸಕ ರವೀಂದ್ರ ಬಣಕಾರ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.

ತಾಲೂಕ ಕಾನಿಪ ಸಂಘದ ಅಧ್ಯಕ್ಷ ಬಸವರಾಜ ಸರೂರ ಅಧ್ಯಕ್ಷ ತೆ ವಹಿಸಿದ್ದರು.

ಗುರುರಾಜ ನಾಡಿಗೇರ, ಜಿ.ವಿ.ದೀಪಾವಳಿ, ಕೆ.ಎಸ್‌.ನಾಗರಾಜ, ಮನೋಹರ ಮಲ್ಲಾಡದ, ಎಂ.ಚಿರಂಜೀವಿ, ಎಸ್‌.ಜಿ. ಮಹಾನುಭಾವಿಮಠ, ಮಂಜುನಾಥ ಕುಂಬಳೂರ, ಮಂಜುನಾಥ ಹೊಸಪೇಟೆ, ಸಂತೋಷ ಮಹಾಂತಶೆಟ್ಟರ, ಮುಕ್ತೇಶ ಕೂರಗುಂದಮಠ, ನಾಗರಾಜ ಹಾವನೂರ, ಗಣೇಶ ನಂದಿಗಾವಿ, ಹಾಲೇಶ ಶಿವಪ್ಪನವರ, ಜಿ.ಎಚ್‌.ನೇಶ್ವಿ, ಮಾಲತೇಶ ಪೂಜಾರ, ವಡೇಯರಹಳ್ಳಿ ಮತ್ತು ಇತರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ