ಆ್ಯಪ್ನಗರ

ರೈತರ ಸಂಕಷ್ಟ ಪರಿಹಾರಕ್ಕೆ ಸರಕಾರ ಬದ್ಧ

ಹಾವೇರಿ : ಬೆಳೆ ವಿಮೆ, ಬೆಳೆ ನಷ್ಟ ಪರಿಹಾರ, ಪ್ರಧಾನ ಮಂತ್ರಿ ಕಿಸಾನ್‌ ಸಮ್ಮಾನ್‌, ಬೀಜ-ಗೊಬ್ಬರ ಪೂರೈಕೆ, ಕೃಷಿ ಹೊಂಡ, ಯಂತ್ರೋಪಕರಣ ಸಬ್ಸಿಡಿ ಸೇರಿದಂತೆ ರೈತರ ಹತ್ತು ಹಲವು ಸಮಸ್ಯೆಗಳಿಗೆ ವಿಜಯ ಕರ್ನಾಟಕ ಆಯೋಜಿಸಿದ್ದ ಫೋನ್‌ ಇನ್‌ ಕಾರ್ಯಕ್ರಮ ಧ್ವನಿಯಾಯಿತು. ಜಿಲ್ಲೆಯ ರೈತರ ಆತಂಕ, ಅನುಮಾನಗಳಿಗೆ ಕೃಷಿ ಇಲಾಖೆ ಜಂಟಿ ಕೃಷಿ ನಿರ್ದೇಶಕ ಬಿ. ಮಂಜುನಾಥ ಅವರು ಪರಿಹಾರ ಕಲ್ಪಿಸಿದ್ದು, ನೊಂದವರಿಗೆ ಸಾಂತ್ವನ ನೀಡಿತು.

Vijaya Karnataka 10 Jun 2020, 5:00 am
ಹಾವೇರಿ : ಬೆಳೆ ವಿಮೆ, ಬೆಳೆ ನಷ್ಟ ಪರಿಹಾರ, ಪ್ರಧಾನ ಮಂತ್ರಿ ಕಿಸಾನ್‌ ಸಮ್ಮಾನ್‌, ಬೀಜ-ಗೊಬ್ಬರ ಪೂರೈಕೆ, ಕೃಷಿ ಹೊಂಡ, ಯಂತ್ರೋಪಕರಣ ಸಬ್ಸಿಡಿ ಸೇರಿದಂತೆ ರೈತರ ಹತ್ತು ಹಲವು ಸಮಸ್ಯೆಗಳಿಗೆ ವಿಜಯ ಕರ್ನಾಟಕ ಆಯೋಜಿಸಿದ್ದ ಫೋನ್‌ ಇನ್‌ ಕಾರ್ಯಕ್ರಮ ಧ್ವನಿಯಾಯಿತು. ಜಿಲ್ಲೆಯ ರೈತರ ಆತಂಕ, ಅನುಮಾನಗಳಿಗೆ ಕೃಷಿ ಇಲಾಖೆ ಜಂಟಿ ಕೃಷಿ ನಿರ್ದೇಶಕ ಬಿ. ಮಂಜುನಾಥ ಅವರು ಪರಿಹಾರ ಕಲ್ಪಿಸಿದ್ದು, ನೊಂದವರಿಗೆ ಸಾಂತ್ವನ ನೀಡಿತು.
Vijaya Karnataka Web government committed to relief of farmers
ರೈತರ ಸಂಕಷ್ಟ ಪರಿಹಾರಕ್ಕೆ ಸರಕಾರ ಬದ್ಧ


ಬೆಳೆ ವಿಮೆ ಪರಿಹಾರ ವಿತರಣೆ : ಬ್ಯಾಡಗಿ ತಾಲೂಕಿನ ರೈತರ 2015-16 ನೇ ಸಾಲಿನ ಬೆಳೆ ವಿಮೆ ಪರಿಹಾರ ಮೊತ್ತ 5.43 ಕೋಟಿ ರೂ. ಮೊತ್ತವನ್ನು ಕೃಷಿ ಸಚಿವ ಬಿ.ಸಿ. ಪಾಟೀಲ ಬಿಡುಗಡೆ ಮಾಡಿಸಿದ್ದಾರೆ. ಅತಿ ಶೀಘ್ರದಲ್ಲೇ ವಿತರಿಸಲಾಗುವುದು. ಮೋಟೆಬೆನ್ನೂರ ಭಾಗದ 924 ರೈತರ ಮುಂಗಾರು ಹಂಗಾಮು ಬಾಕಿ 1.92 ಕೋಟಿ ಸಹ ಬಿಡುಗಡೆಯಾಗಿದೆ. ವಿತರಿಸಲು ಸಿದ್ಧತೆ ನಡೆದಿದೆ. 2018-19 ನೇ ಸಾಲಿನ ಪರಿಹಾರ ಮೊತ್ತ 6.09 ಕೋಟಿ ಬಾಕಿ ಇದೆ. 2019-20 ನೇ ಸಾಲಿನ ಬೆಳೆ ವಿಮೆ ಪರಿಹಾರದ ಶೇ. 25 ರಷ್ಟು ಮೊತ್ತವನ್ನು ಮಧ್ಯಂತರ ಪರಿಹಾರವಾಗಿ ಸುಮಾರು 86 ಸಾವಿರ ರೈತರ ಖಾತೆಗೆ 48 ಕೋಟಿ ಮೊತ್ತ ಪಾವತಿಸಲಾಗಿದೆ. ಜುಲೈ ನಂತರ ಉಳಿದ ಮೊತ್ತ ಜಮೆಯಾಗಲಿದೆ. ಪರಿಹಾರ ವಂಚಿತರು ಆಧಾರ್‌ ಸೇರಿದಂತೆ ಅಗತ್ಯ ದಾಖಲೆಗಳ ಸಮೇತ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ ಅರ್ಜಿ ಸಲ್ಲಿಸಬೇಕು. ಪರಿಶೀಲಿಸಿ ಪರಿಹಾರ ವಿತರಣೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು.

ಕೃಷಿ ಸಮ್ಮಾನ : ಈಗಾಗಲೇ ರಾಜ್ಯ ಸರಕಾರ 600 ಕೋಟಿ ರೂ. ಬಿಡುಗಡೆ ಮಾಡಿದೆ. ಇದೇ ವೇಳೆ ಮೆಕ್ಕೆಜೋಳ ಪರಿಹಾರ ಮೊತ್ತ ವಿತರಣೆಗೆ ಸಮೀಕ್ಷೆ ಕೈಗೊಂಡ ಪಟ್ಟಿ ಕೂಡ ಸಿದ್ಧವಿದೆ. ಇನ್ನೆರಡು ದಿನಗಳಲ್ಲಿಪ್ರತಿ ರೈತ ಸಂಪರ್ಕ ಕೇಂದ್ರದಲ್ಲಿಫಲಾನುಭವಿಗಳ ಪಟ್ಟಿ ಲಗತ್ತಿಸಲಾಗುವುದು. ವಂಚಿತರಿಗೆ ಮತ್ತು ಜಂಟಿ ಖಾತೆ ಇರುವ ವಂಚಿತರು ಅರ್ಜಿ ಸಲ್ಲಿಸಿದಲ್ಲಿಅವರಿಗೂ ಪರಿಹಾರ ವಿತರಣೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಬೀಜ, ಗೊಬ್ಬರ : ಈಗಾಗಲೇ ಸರಕಾರ ಸಣ್ಣ ಮತ್ತು ಅತಿ ಸಣ್ಣ ಹಿಡುವಳಿದಾರರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿಪ್ರತಿ ಎಕರೆಗೆ ಗೊಂಜಾಳ ಬಿತ್ತನೆಗೆ 5 ಕೆಜಿ ಬೀಜ ವಿತರಿಸಲು ನಿರ್ಧರಿಸಿತ್ತು. ಬೇಡಿಕೆ ಹಿನ್ನೆಲೆಯಲ್ಲಿ8 ಕೆಜಿಗೆ ಹೆಚ್ಚಿಸಿದೆ. ಆದರೆ ದೊಡ್ಡ ಹಿಡುವಳಿದಾರರ ಬೇಡಿಕೆಗೆ ಅನುಗುಣವಾಗಿ ಬೀಜ ವಿತರಿಸಲು ಸಾಧ್ಯವಿಲ್ಲ. ಈ ಹಿನ್ನೆಲೆಯಲ್ಲಿಗರಿಷ್ಠ 5 ಎಕರೆವರೆಗೆ ಮಾತ್ರ ಬೀಜ ವಿತರಣೆಗೆ ನಿರ್ಧರಿಸಲಾಗಿದೆ ಎಂದು ತಿಳಿಸಿದರು.

ನಕಲಿ ಬೀಜಕ್ಕೆ ಕಡಿವಾಣ : ಈವರೆಗೂ ಜಿಲ್ಲೆಯ ವಿವಿಧ ಭಾಗಗಳಲ್ಲಿ11 ಸಾವಿರ ಕ್ವಿಂಟಲ್‌ಗೂ ಅಧಿಕ ನಕಲಿ ಬೀಜ ವಶಪಡಿಸಿಕೊಳ್ಳಲಾಗಿದೆ. ಭಾಗಿಯಾದವರ ಮೇಲೆ 420 ಮತ್ತು 120 ಬಿ. ಅಡಿ ಕೇಸ್‌ ದಾಖಲಿಸಿದ್ದು, ಕೋರ್ಟ್‌ ಕಲಾಪ ಆರಂಭಗೊಳ್ಳುತ್ತಿದ್ದಂತೆಯೇ ವಿಚಾರಣೆ ಆರಂಭಗೊಳ್ಳಲಿದೆ. ಜಿಲ್ಲೆಯಲ್ಲಿಈ ನಕಲಿ ಬೀಜಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿರೈತರ ಸಹಕಾರ ಮುಖ್ಯವಾಗಿದೆ. ಇಂತಹ ಪ್ರಕರಣಗಳು ಕಂಡುಬಂದಲ್ಲಿತಕ್ಷಣ ಇಲಾಖೆಗೆ ಮಾಹಿತಿ ನೀಡಬೇಕು. ಅಧಿಕೃತ ಬಿತ್ತನೆ ಬೀಜಗಳನ್ನೇ ಖರೀದಿಸುವ ಜತೆಗೆ ರಸೀದಿ ಸಹ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.

ಸೋಯಾಬೀನ್‌ಗೆ ಪರಿಹಾರಕ್ಕೆ ಚಿಂತನೆ : ತೇವಾಂಶ ಕೊರತೆ ಕಾರಣಕ್ಕೆ ಸೋಯಾಬೀನ್‌ ಮೊಳಕೆ ಒಡೆದಿಲ್ಲ. ಬಿತ್ತನೆ ಮಾಡಿ ನಷ್ಟ ಅನುಭವಿಸಿರುವ ರೈತರಿಗೆ ಪರಿಹಾರ ಕೊಡಿಸುವ ನಿಟ್ಟಿನಲ್ಲಿಸರಕಾರ ಚಿಂತನೆ ನಡೆಸಿದೆ. ಜಿಲ್ಲೆಯಲ್ಲಿಈ ಬಾರಿ 1.05 ಲಕ್ಷ ಮೆಟ್ರಿಕ್‌ ಟನ್‌ ಯೂರಿಯಾ ಸೇರಿದಂತೆ ವಿವಿಧ ರಸಗೊಬ್ಬರ ಪ್ರಮಾಣದ ಗುರಿ ಇದೆ. ಈಗಾಗಲೇ 26636 ಮೆ.ಟನ್‌ ವಿತರಿಸಲಾಗಿದೆ. 48077 ಮೆ.ಟನ್‌ ದಾಸ್ತಾನು ಲಭ್ಯವಿದೆ. ಪ್ರತಿಷ್ಠಿತ ಕಂಪನಿಗಳು ಸಹ ಬೀಜ ಪೊರೈಕೆಗೆ ಟೆಂಡರ್‌ನಲ್ಲಿಭಾಗವಹಿಸಲು ಅವಕಾಶ ಇದೆ ಎಂದು ಹೇಳಿದರು.

ಬಾಡಿಗೆ ಯಂತ್ರೋಪಕರಣ : ಕೃಷಿ ಯಂತ್ರೋಪಕರಣ ಖರೀದಿಗೆ ಸಹಾಯಧನ ನೀಡುವ ಯೋಜನೆ ಸ್ಥಗಿತಗೊಳಿಸಿ ಬಾಡಿಗೆ ಮೂಲಕ ಕೃಷಿ ಯಂತ್ರೋಪಕರಣ ಪೂರೈಕೆಗೆ ಯಂತ್ರಧಾರಾ ಯೋಜನೆ ಜಾರಿಗೊಳಿಸಲಾಗಿದೆ ಎಂದು ಮಾಹಿತಿ ನೀಡಿದರು.

ತಪ್ಪು ಪದ್ಧತಿ : ಬಿತ್ತನೆ ನಂತರ ಕಳೆನಾಶಕ ಜತೆಗೆ ಯೂರಿಯಾ ಗೊಬ್ಬರ ಬಳಸುವ ಪದ್ಧತಿ ತಪ್ಪು. ಮರಳಿನ ಜತೆಗೆ ರಸಗೊಬ್ಬರ ಬಳಕೆ ಸೂಕ್ತಎಂದು ತಿಳಿಸಿದರು.

ಸ್ಟ್ರಿಂಕ್ಲರ್‌ ಪೂರೈಕೆ : ಕೃಷಿ ಸಚಿವ ಬಿ.ಸಿ.ಪಾಟೀಲ ಮುತುವರ್ಜಿ ವಹಿಸಿದ ಹಿನ್ನೆಲೆಯಲ್ಲಿಜಿಲ್ಲೆಯ ರೈತರಿಗೆ 18 ಸಾವಿರಕ್ಕೂ ಅಧಿಕ ಸ್ಟ್ರಿಂಕ್ಲರ್‌ ಸೆಟ್‌ ವಿತರಿಸಲಾಗಿದೆ. ಈ ವರ್ಷ 1429 ಸೆಟ್‌ ವಿತರಿಸಲು ಕ್ರಮ ಕೈಗೊಳ್ಳಲಾಗುವುದು. ವಂಚಿತರು ಅರ್ಜಿ ಸಲ್ಲಿಸಿದಲ್ಲಿಪರಿಶೀಲಿಸಿ ಸ್ಟ್ರಿಂಕ್ಲರ್‌ ಪೂರೈಕೆಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು.

ವಿಶೇಷ ಕರೆ : ರೈತರಿಗೆ ತಾಂತ್ರಿಕ ಸಲಹೆ, ಮಣ್ಣಿನ ಫಲವತ್ತತೆ, ಬಿತ್ತನೆ ಬೀಜ, ಸಾವಯವ ಕೃಷಿ ಪದ್ಧತಿ ಸೇರಿದಂತೆ ಹತ್ತು ಹಲವು ಅನುಮಾನಗಳಿಗೆ ಪರಿಹಾರ ಸೂಚಿಸುವ ನಿಟ್ಟಿನಲ್ಲಿರೈತರ ಜತೆ ಸಂವಾದ ಕಾರ್ಯಕ್ರಮ ಆಯೋಜಿಸುವ ಚಿಂತನೆ ಇದೆ. ಹೋಬಳಿ ಮತ್ತು ತಾಲೂಕ ಮಟ್ಟದಲ್ಲಿರೈತರ ಸಮಸ್ಯೆಗೆ ಪರಿಹಾರ ನೀಡಲು ಇದು ಸಹಕಾರಿಯಾಗಲಿದೆ.

ಪರಿಹಾರಕ್ಕೆ ಸಹಾಯವಾಣಿ : ತಾಂತ್ರಿಕ ಸಲಹೆಗೆ ಹನುಮನಮಟ್ಟಿ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ.ಅಶೋಕ ಪಿ ಅವರ ದೂರವಾಣಿ ಸಂಖ್ಯೆ 9686609363 ಕರೆ ಮಾಡಬಹುದು. ನಕಲಿ ಬೀಜ ಕುರಿತು ಜಾಗೃತ ದಳದ ಕೃಷಿ ಸಹಾಯಕ ನಿರ್ದೇಶಕ ಪ್ರಾಣೇಶ ದೂರವಾಣಿ ಸಂಖ್ಯೆ 8722891908. ಎಲ್ಲರೀತಿಯ ದೂರುಗಳಿಗೆ ಹತ್ತಿರದ ರೈತ ಸಂಪರ್ಕ ಕೇಂದ್ರಕ್ಕೆ ಸಂಪರ್ಕಿಸಬಹುದು. ಹೆಚ್ಚಿನ ಮಾಹಿತಿಗೆ ಕೃಷಿ ಸಹಾಯಕ ನಿರ್ದೇಶಕ ಸುನೀಲ ನಾಯಕ್‌ ಮೊ.ಸಂಖ್ಯೆ 8277931803 ಸಂಪರ್ಕಿಸಬಹುದು.

ಹಾವೇರಿಯಲ್ಲಿಮಂಗಳವಾರ ನಡೆದ ವಿಕ ಫೋನ್‌ ಇನ್‌ ಕಾರ್ಯಕ್ರಮದಲ್ಲಿಕೃಷಿ ಇಲಾಖೆ ಜಂಟಿ ಕೃಷಿ ನಿರ್ದೇಶಕ ಬಿ. ಮಂಜುನಾಥ ಅವರು ಓದುಗರಿಗೆ ಕರೆಗಳಿಗೆ ಸ್ಪಂದಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ