ಆ್ಯಪ್ನಗರ

ಹೆಸರೂರಲ್ಲಿ ಹೆಸರುಕಾಳಿಗೆ ಬರ

ರಾಜು ನದಾಫ ಹಾವೇರಿ: ಅತ್ಯಧಿಕ ಪ್ರಮಾಣದಲ್ಲಿಹೆಸರುಕಾಳು ಬೆಳೆಯುವ ಜಿಲ್ಲೆಯ ಸವಣೂರ ತಾಲೂಕಿನ ಈ ಹಳ್ಳಿ ಹೆಸರೂರು ಎಂದೇ ಪ್ರಸಿದ್ಧಿ ಪಡೆದಿದೆ. ಆದರೆ, ಈ ಊರಿನ ಜನರು ಈಗ ಊಟಕ್ಕೂ ಹೆಸರು ಕಾಳು ಇಲ್ಲದೇ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ!

Vijaya Karnataka 27 Nov 2019, 5:00 am
ರಾಜು ನದಾಫ ಹಾವೇರಿ: ಅತ್ಯಧಿಕ ಪ್ರಮಾಣದಲ್ಲಿಹೆಸರುಕಾಳು ಬೆಳೆಯುವ ಜಿಲ್ಲೆಯ ಸವಣೂರ ತಾಲೂಕಿನ ಈ ಹಳ್ಳಿ ಹೆಸರೂರು ಎಂದೇ ಪ್ರಸಿದ್ಧಿ ಪಡೆದಿದೆ. ಆದರೆ, ಈ ಊರಿನ ಜನರು ಈಗ ಊಟಕ್ಕೂ ಹೆಸರು ಕಾಳು ಇಲ್ಲದೇ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ!
Vijaya Karnataka Web green gram drought
ಹೆಸರೂರಲ್ಲಿ ಹೆಸರುಕಾಳಿಗೆ ಬರ


ಹೆಸರು ಕಾಳಿನ ತವರೂರು ಎನ್ನಲಾಗುವ ಈ ಊರಲ್ಲಿಮುಂಗಾರು ಹಂಗಾಮಿಗೆ ಭರ್ಜರಿ ಹೆಸರು ಕಾಳು ಬೆಳೆಯಲಾಗುತ್ತದೆ. ಪ್ರತಿ ಮನೆಯಲ್ಲೂಕನಿಷ್ಠ ಏಳೆಂಟು ಕ್ವಿಂಟಲ್‌ ಹೆಸರು ಕಾಳು ಬೆಳೆದು ಲಕ್ಷಾಂತರ ರೂ. ಆದಾಯ ಗಳಿಸುವ ಇಲ್ಲಿನ ರೈತರು ಈ ಬಾರಿ ಮುಂಗಾರು ಬಿತ್ತನೆಗೂ ಗುಣಮಟ್ಟದ ಹೆಸರು ಕಾಳು ಬೀಜಕ್ಕೆ ಹುಡುಕಾಟ ನಡೆಸುವಂತಾಗಿದೆ.

ಪರದಾಟ ಏಕೆ?:
ಅತೀವೃಷ್ಟಿ ಮತ್ತು ಪ್ರವಾಹಕ್ಕೆ ಹೆಸರು ಕಾಳು ಬೆಳೆ ನೀರುಪಾಲಾಯ್ತು. ಕೈಗೆ ಬಂದಿದ್ದ ಹೆಸರು ಪೈರು ಬಾಯಿಗೆ ಬರದಂತಾಯಿತು. ಪ್ರಕೃತಿಯ ಈ ದಾಳಿ ಹೆಸರೂರು ಜನತೆ ಪರದಾಡುವಂತಾಯಿತು.

ಮಾರಾಟ?: ದಾಖಲೆ ಪತ್ರಗಳಿಗೆ ಸವಣೂರ ತಾಲೂಕನ್ನೇ ನೆಚ್ಚಿಕೊಂಡಿರುವ ಹೆಸರೂರು ಜನರು ವ್ಯವಹಾರ ನಡೆಸುವುದು ಪಕ್ಕದ ಗದಗ ಜಿಲ್ಲೆಯ ಲಕ್ಷೇಶ್ವರ ಎನ್ನುವುದು ವಿಶೇಷ. ಕಳೆದ ವರ್ಷ ಕ್ವಿಂಟಲ್‌ಗೆ 3 ಸಾವಿರ ಪಡೆದುಕೊಂಡಿದ್ದನ್ನೇ ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದರು. ಪ್ರವಾಹ ಕಾರಣಕ್ಕೆ ಲಕ್ಷ್ಮೇಶ್ವರ ಮಾರುಕಟ್ಟೆಗೆ ಈ ಬಾರಿ ಹೆಸರುಕಾಳು ಕಡಿಮೆ ಪ್ರಮಾಣದಲ್ಲಿಆವಕ ಆಗಿರುವುದರಿಂದ ಕ್ವಿಂಟಲ್‌ಗೆ 13 ಸಾವಿರ ರೂ. ದರದಂತೆ ಮಾರಾಟವಾಗುತ್ತಿದೆ.

ಈ ದರ ಹೆಚ್ಚಳ ಹೆಸರೂರ ರೈತರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಪ್ರತಿ ಮುಂಗಾರಿಗೆ ಮನೆಯ ಗುಣಮಟ್ಟದ ಹೆಸರು ಕಾಳು ಬೀಜವನ್ನೇ ಬಿತ್ತನೆಗೆ ಬಳಕೆ ಮಾಡಿಕೊಳ್ಳುವುದು ರೂಢಿಯಾಗಿರುವ ಕಾರಣಕ್ಕೆ ಈ ಬಾರಿ ರೈತ ಸಂಪರ್ಕ ಕೇಂದ್ರವನ್ನೇ ನೆಚ್ಚಿಕೊಳ್ಳುವುದು ಇಲ್ಲಿನ ರೈತರಿಗೆ ಅನಿವಾರ್ಯವಾಗಿದೆ.

ಮುಂಗಾರು ಹಂಗಾಮು ಬಿತ್ತನೆಗೆ ಜಿಲ್ಲೆಯ ಸವಣೂರ ತಾಲೂಕ ಕೃಷಿ ಇಲಾಖೆ ಈ ಭಾಗದ ರೈತರಿಗೆ ಗುಣಮಟ್ಟದ ಹೆಸರು ಕಾಳು ಬಿತ್ತನೆ ಬೀಜದ ಪಾಕೀಟ್‌ ವಿತರಿಸಲು ಕ್ರಮ ಕೈಗೊಳ್ಳಬೇಕಿದೆ.

ಹೆಸರು ಕಾಳು ತವರೂರು!: ಗ್ರಾಮ ಪಂಚಾಯಿತಿ ಅಧಿಪತ್ಯ ಇರುವ ಹೆಸರೂರು 1200 ಕ್ಕೂ ಅಧಿಕ ಕುಟುಂಬ ಮತ್ತು 4500 ಕ್ಕೂ ಹೆಚ್ಚು ಜನಸಂಖ್ಯೆ ಹೊಂದಿರುವ ಊರಿನ ಜಮೀನುಗಳು ಸುತ್ತಮುತ್ತಲಿನ ಬಸನಕೊಪ್ಪ, ಸಿದ್ಧಾಪುರ, ಕಲಿವಾಳ, ಕಡಕೋಳ ಸೇರಿದಂತೆ ಮೂರ್ನಾಲ್ಕು ಹಳ್ಳಿಗಳ ಗಡಿ ಪ್ರದೇಶಕ್ಕೂ ವ್ಯಾಪಿಸಿಕೊಂಡಿವೆ. 2500 ಕ್ಕೂ ಹೆಚ್ಚು ಎಕರೆಯಲ್ಲಿಹೆಸರು ಬೆಳೆಯುವ ಕಾರಣಕ್ಕೆ ಹೆಸರೂರಿಗೆ ಹೆಸರು ಕಾಳಿನ ತವರೂರು ಎನ್ನುವುದು ರೂಢಿಯಲ್ಲಿದೆ.

ಹೆಸರುಕಾಳು ಪ್ರಧಾನ ಏಕೆ?: ಹೆಸರೂರಿನ ಮಸಾರಿ ಹೊಲಗಳಲ್ಲಿಹೆಸರು ಕಾಳಿನ ಸಮೃದ್ಧವಾಗಿ ಬೆಳೆಯುತ್ತದೆ. ಮುಂಗಾರು ಹಂಗಾಮಿಗೆ ಧಾರಾಕಾರ ಮಳೆ ಇಲ್ಲಿನೋಡುವುದೇ ಅಪರೂಪ. ಈ ಕಾರಣಕ್ಕೆ ಸಾಧಾರಣ ಮಳೆಗೆ ಅಧಿಕ ಇಳುವರಿ ಬರುವ ಹೆಸರು ಕಾಳು ಈ ಭಾಗದ ಸಾಂಪ್ರದಾಯಿಕ ಬೆಳೆ. ಮುಂಗಾರು ಹಂಗಾಮು ವೇಳೆಗೆ ಊರಿನ ಪ್ರತಿ ಮನೆಯಲ್ಲೂಹೆಸರು ಕಾಳಿನ ಮೂಟೆಗಳು ಕಣ್ಣಿಗೆ ಕಟ್ಟುವಂತಿರುತ್ತವೆ.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ