ಆ್ಯಪ್ನಗರ

ಹಾನಗಲ್ಲ ರಸ್ತೆ ಈಗ ಸೂಪರ್‌

ಹಾನಗಲ್ಲ: ಕೆಶಿಫ್‌ನಿಂದ ಹಾನಗಲ್ಲಪಟ್ಟಣ ವ್ಯಾಪ್ತಿಯಲ್ಲಿನಡೆದ ರಸ್ತೆ ನಿರ್ಮಾಣದ ಕಾಮಗಾರಿ ಕಳಪೆಯಾಗಿದೆ ಎಂಬ ವಿಕ ವರದಿಯ ಪರಿಣಾಮವಾಗಿ ಮರು ಡಾಂಬರೀಕಣ ಆರಂಭವಾಗಿದೆ.

Vijaya Karnataka 10 Jun 2020, 5:00 am
ಹಾನಗಲ್ಲ: ಕೆಶಿಫ್‌ನಿಂದ ಹಾನಗಲ್ಲಪಟ್ಟಣ ವ್ಯಾಪ್ತಿಯಲ್ಲಿನಡೆದ ರಸ್ತೆ ನಿರ್ಮಾಣದ ಕಾಮಗಾರಿ ಕಳಪೆಯಾಗಿದೆ ಎಂಬ ವಿಕ ವರದಿಯ ಪರಿಣಾಮವಾಗಿ ಮರು ಡಾಂಬರೀಕಣ ಆರಂಭವಾಗಿದೆ.
Vijaya Karnataka Web hanagalla road is now super
ಹಾನಗಲ್ಲ ರಸ್ತೆ ಈಗ ಸೂಪರ್‌


ಪಟ್ಟಣದ ಸಾರಿಗೆ ಘಟಕದಿಂದ ಗಾಂಧಿ ವೃತ್ತದ ತನಕ 2 ವರ್ಷಗಳ ಹಿಂದೆ ಪೂರ್ಣಗೊಂಡ ರೀತಿಯಲ್ಲಿಗಾಂಧಿವೃತ್ತದಿಂದ ಆನಿಕೆರೆ ತನಕದ ರಸ್ತೆ ನಿರ್ಮಾಣ ವ್ಯವಸ್ಥಿತವಾಗಿ ಆಗಿಲ್ಲ. ಅಲ್ಲಲ್ಲಿಡಾಂಬರ್‌ ಕೆದರಿಕೊಂಡಿದೆ. ತಗ್ಗು ಬಿದ್ದಿವೆ ಎಂಬ ಸ್ಥಳೀಯರ ಆರೋಪಗಳನ್ನು ಒಳಗೊಂಡ ವರದಿಗೆ ಸ್ಪಂದಿಸಿದ ಕೆಶಿಫ್‌ನಿಂದ ಮತ್ತೆ ಡಾಂಬರ್‌ ಮಾಡುವ ಕಾರ್ಯವು ಸೋಮವಾರದಿಂದ ಶುರುವಾಗಿದೆ.

ಇದ್ದ ರಸ್ತೆಯನ್ನು ಕೆದರಿ ಡಾಂಬರ್‌ ಹಾಕಲಾಗಿದೆ. ಕಾಮಗಾರಿ ಕಳಪೆಯಾಗಿದೆ ಎಂಬ ಆರೋಪಗಳಿಗೆ ಪ್ರತಿಕ್ರಿಯಿಸಿದ್ದ ಕೆಶಿಫ್‌ ಎಇಇ ವಾಸುದೇವ, ಡ್ಯಾಮೇಜ್‌ ಆಗಿರುವ ಸ್ಥಳದಲ್ಲಿಮಾತ್ರ ಕಾಮಗಾರಿ ಮಾಡಿಸುವುದಾಗಿ ಹೇಳಿದ್ದರು. ವಿಕ ವರದಿ ಬಳಿಕ ಈಗ ಪಟ್ಟಣ ವ್ಯಾಪ್ತಿಯ ಪೂರ್ತಿ ರಸ್ತೆಗೆ ಮರುಡಾಂಬರೀಕರಣ ನಡೆಯುತ್ತಿದೆ.

ರಸ್ತೆ ವಿಭಜಕಕ್ಕೆ ಕಾಮಗಾರಿಗೂ ಮುನ್ನ ತೆರವು ಮಾಡಿದ್ದ ಹಳೆಯ ವಿಭಜಕದ ಸಿಮೆಂಟ್‌ ಕಲ್ಲುಗಳನ್ನು ಬಳಸಲಾಗುತ್ತಿದೆ. ಇದರಿಂದ ವಿಭಜಕ ನಿರ್ಮಾಣ ಗುಣಮಟ್ಟದಿಂದ ಕೂಡಿರಲು ಸಾಧ್ಯವಿಲ್ಲಎಂಬ ಅಂಶವನ್ನು ಪತ್ರಿಕೆ ಬೆಳಕಿಗೆ ತಂದಿತ್ತು. ಹೀಗಾಗಿ ಈಗ ನಿರ್ಮಾಣವಾಗುತ್ತಿರುವ ರಸ್ತೆ ವಿಭಜಕಕ್ಕೆ ಹೊಸ ಸಿಮೆಂಟ್‌ ಕಲ್ಲುಗಳನ್ನು ಜೋಡಿಸಲಾಗುತ್ತಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ