ಆ್ಯಪ್ನಗರ

ಹಾವೇರಿ ದ್ಯಾಮವ್ವ ದೇವಿ ಮೆರವಣಿಗೆ ಇಂದು

ಹಾವೇರಿ: ನಗರದಲ್ಲಿಐತಿಹಾಸಿಕ ಪ್ರಸಿದ್ಧ ಗ್ರಾಮ ದೇವತೆ ಶ್ರೀ ದ್ಯಾಮವ್ವ ದೇವಿಯ ಮೆರವಣಿಗೆ ಫೆ.25ರಂದು ಅದ್ಧೂರಿಯಾಗಿ ನಡೆಯಲಿದೆ. ಅಂದು ಬೆಳಗ್ಗೆ ಶ್ರೀ ದ್ಯಾಮವ್ವ ದೇವಿಗೆ ವಿಶೇಷ ಪೂಜೆ ಜರುಗಲಿದೆ. ಮಧ್ಯಾಹ್ನ 2 ಘಂಟೆಗೆಶ್ರೀ ದ್ಯಾಮವ್ವ ದೇವಿ ದೇವಸ್ಥಾನದಿಂದ ಶ್ರೀ ದ್ಯಾಮವ್ವ ದೇವಿ ಮೆರವಣಿಗೆ ಪ್ರಾರಂಭವಾಗಿ

Vijaya Karnataka 25 Feb 2020, 5:00 am
ಹಾವೇರಿ: ನಗರದಲ್ಲಿಐತಿಹಾಸಿಕ ಪ್ರಸಿದ್ಧ ಗ್ರಾಮ ದೇವತೆ ಶ್ರೀ ದ್ಯಾಮವ್ವ ದೇವಿಯ ಮೆರವಣಿಗೆ ಫೆ.25ರಂದು ಅದ್ಧೂರಿಯಾಗಿ ನಡೆಯಲಿದೆ. ಅಂದು ಬೆಳಗ್ಗೆ ಶ್ರೀ ದ್ಯಾಮವ್ವ ದೇವಿಗೆ ವಿಶೇಷ ಪೂಜೆ ಜರುಗಲಿದೆ. ಮಧ್ಯಾಹ್ನ 2 ಘಂಟೆಗೆಶ್ರೀ ದ್ಯಾಮವ್ವ ದೇವಿ ದೇವಸ್ಥಾನದಿಂದ ಶ್ರೀ ದ್ಯಾಮವ್ವ ದೇವಿ ಮೆರವಣಿಗೆ ಪ್ರಾರಂಭವಾಗಿ ನಗರದ ಪ್ರಮುಖ ಬೀದಿಗಳಲ್ಲಿಸಂಚರಿಸಿ ಚೌತಮನಿ ಕಟ್ಟೆ ಸ್ಥಳಕ್ಕೆ ಆಗಮಿಸಲಿದೆ. ಫೆ.26, 27 ರಂದು ಜಿಲ್ಲೆಯ ಜನತೆ ದೇವಿ ದರ್ಶನ ಪಡೆಯಬಹುದು.
Vijaya Karnataka Web haveri dammav devi parade today
ಹಾವೇರಿ ದ್ಯಾಮವ್ವ ದೇವಿ ಮೆರವಣಿಗೆ ಇಂದು


ಶ್ರೀದೇವಿ ಉತ್ಸವದ ಮಾರ್ಗಸೂಚಿ:
ನಗರದ ಶ್ರೀ ದ್ಯಾಮವ್ವ ದೇವಿ ದೇವಸ್ಥಾನದಿಂದ ಶ್ರೀದೇವಿ ಉತ್ಸವ ಮೆರವಣಿಗೆ ಪ್ರಾರಂಭವಾಗಿ ದ್ಯಾಮವ್ವನ ಗುಡಿ ಓಣಿ, ನಾಯ್ಕರ ಚಾಳ, ಹಳೇ ಅಂಚೇ ಕಛೇರಿ ರಸ್ತೆ, ಕಮಲ ಕಲ್ಯಾಣ ಮಂಟಪ ರಸ್ತೆ , ಜೈನರ ಓಣಿ, ಹಳೇ ಊರಿನ ಓಣಿ, ಶ್ರೀ ರಾಮ ದೇವರ ಗುಡಿ, ಗಾಂಧಿ ಸರ್ಕಲ್‌ ತಲುಪುತ್ತದೆ.

ನಂತರ ಗಾಂಧಿ ಸರ್ಕಲ್‌ನಿಂದ ಕಲ್ಲುಮಂಟಪ ರಸ್ತೆ, ಬಸ್ತಿ ಓಣಿ, ತರಕಾರಿ ಮಾರ್ಕೆಟ್‌, ಗೌಳಿಗಲ್ಲಿ, ಯಾಲಕ್ಕಿ ಓಣಿ, ಗುಜ್ಜರ ಗುಡಿ, ಪುರದ ಓಣಿ, ಚೌಡೇಶ್ವರಿ ಸರ್ಕಲ್‌, ಅಂಬೇಡ್ಕರ ಸರ್ಕಲ್‌, ಸುಭಾಸ ಸರ್ಕಲ್‌, ಮೇಲಿನ ಪೇಟೆ, ಹಳೇ ಚಾವಡಿ ಮೂಲಕ ಶ್ರೀದೇವಿ ಮೆರವಣಿಗೆ ಫೆ.26ರಂದು ಬ್ರಾಹ್ಮೀ ಮೂಹೂರ್ತ ನಸುಕಿನ 4 ಗಂಟೆಗೆ ಚೌತಮನಿ ಕಟ್ಟಿಯಲ್ಲಿಶ್ರೀ ದೇವಿ ಪ್ರತಿಷ್ಠಾಪನೆಗೊಳಿಸಲಾಗುತ್ತದೆ.

ಭಕ್ತರಿಗೆ ಪ್ರಸಾದ ವ್ಯವಸ್ಥೆ:
ಶ್ರೀ ದೇವಿಯ ಜಾತ್ರೆಗೆ ಆಗಮಿಸುವ ಭಕ್ತರಿಗೆ ನಗರದ ಶಿವಬಸವ ಕಲ್ಯಾಣ ಮಂಟಪದಲ್ಲಿಫೆ.25 ರಿಂದ 28ರವರಗೆ ಪ್ರಸಾದ ವ್ಯವಸ್ಥೆ ಮಾಡಲಾಗಿದೆ. ಸುಮಾರು 2 ಲಕ್ಷಕ್ಕೂ ಅಧಿಕ ಜನರಿಗೆ ಪ್ರಸಾದ ವ್ಯವಸ್ಥೆ ಮಾಡಲಾಗಿದೆ ಎಂದರು ಸಮಿತಿ ಕಾರ್ಯದರ್ಶಿ ಅಶೋಕ ಮುದಗಲ್‌ ತಿಳಿಸಿದ್ದಾರೆ.

ಹುಕ್ಕೇರಿಮಠದ ಸದಾಶಿವ ಸ್ವಾಮೀಜಿ, ಹೊಸಮಠದ ಬಸವ ಶಾಂತಲಿಂಗ ಸ್ವಾಮೀಜಿ, ಬಣ್ಣದಮಠದ ಅಭಿನವ ರುದ್ರ ಚನ್ನಮಲ್ಲಿಕಾರ್ಜನ ಶಿವಾಚಾರ್ಯ ಸ್ವಾಮೀಜಿ, ಗೌರಿಮಠದ ಶಿವಯೋಗಿ ಸ್ವಾಮೀಜಿ, ಜಿಲ್ಲೆಯ ಎಲ್ಲರಾಜಕೀಯ ಪಕ್ಷದ ನಾಯಕರು, ಮುಖಂಡರು, ಸಮಾಜದ ಮುಖಂಡರಿಗೆ, ಚುನಾಯಿತ ಪ್ರತಿನಿಧಿಗಳಿಗೆ ಭಾಗವಹಿಸುವರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ