ಆ್ಯಪ್ನಗರ

ಹಾವೇರಿ ಕಾ ರಾಜಾ: ಅನ್ನ ಸಂತರ್ಪಣೆ

ಹಾವೇರಿ: ನಗರದ ಸುಭಾಸ್‌ ಸರ್ಕಲ್‌ನಲ್ಲಿ18 ಅಡಿ ಎತ್ತರ ಹಾವೇರಿ ಕಾ ರಾಜಾ ಗಣೇಶ ಪ್ರತಿಷ್ಠಾಪನೆಯ ಹಿನ್ನೆಲೆಯಲ್ಲಿಗಣೇಶ ಉತ್ಸವ ಕಮೀಟಿ ವತಿಯಿಂದ ಶುಕ್ರವಾರ ವಿಶೇಷ ಪೂಜೆ ಮತ್ತು ಅನ್ನ ಸಂತರ್ಪಣೆ ಜರುಗಿತು.

Vijaya Karnataka 14 Sep 2019, 5:00 am
ಹಾವೇರಿ: ನಗರದ ಸುಭಾಸ್‌ ಸರ್ಕಲ್‌ನಲ್ಲಿ18 ಅಡಿ ಎತ್ತರ ಹಾವೇರಿ ಕಾ ರಾಜಾ ಗಣೇಶ ಪ್ರತಿಷ್ಠಾಪನೆಯ ಹಿನ್ನೆಲೆಯಲ್ಲಿಗಣೇಶ ಉತ್ಸವ ಕಮೀಟಿ ವತಿಯಿಂದ ಶುಕ್ರವಾರ ವಿಶೇಷ ಪೂಜೆ ಮತ್ತು ಅನ್ನ ಸಂತರ್ಪಣೆ ಜರುಗಿತು.
Vijaya Karnataka Web haveri ka raja anna dedication
ಹಾವೇರಿ ಕಾ ರಾಜಾ: ಅನ್ನ ಸಂತರ್ಪಣೆ


ಪ್ರತಿ ವರ್ಷದಂತೆ ಈ ವರ್ಷವೂ ಗಣೇಶ ವಿಸರ್ಜನೆಯ ಒಂದು ದಿನ ಮುಂಚೆಯೇ ಅನ್ನ ಸಂತರ್ಪಣೆ ನಡೆಯಿತು. ಈ ಅನ್ನ ಸಂತರ್ಪಣೆಯಲ್ಲಿಗೋದಿ ಹುಗ್ಗಿ, ಬದನೆಕಾಯಿ ಪಲ್ಲೆ, ಅನ್ನ ಸಾಂಬರ್‌, ಉಪ್ಪಿನಕಾಯಿ, ಬಜಿ ವ್ಯವಸ್ಥೆ ಮಾಡಲಾಗಿತ್ತು.

ಶನಿವಾರ ಮಧ್ಯಾಹ್ನ 12 ಗಂಟೆಯಿಂದ ಪ್ರಾರಂಭವಾಗಿ ಸಂಜೆ 4 ಗಂಟೆಯವರೆಗೂ ಅನ್ನ ಸಂತರ್ಪಣೆ ಜರುಗಿತು. ನಗರದ ಜನರು ಎಲ್ಲರೂ ಗಣೇಶನ ಪ್ರಸಾದ ಸ್ವೀಕರಿಸಿದರು. ಈ ವೇಳೆ 30 ಕೆಜಿ ಗೋದಿ, 40 ಕೆಜಿ. ಬೆಲ್ಲ, 60 ಕ್ಕಿಂತೂ ಅಧಿಕ ಅಕ್ಕಿ ಬಾಕೇಟ್‌ ಸಂತರ್ಪಣೆ ಖರ್ಚು ಮಾಡಲಾಗಿದೆ.

ಹಾವೇರಿ ಕಾ ರಾಜಾ ವಿಸರ್ಜನೆ ಇಂದು: ಸೆ.14 ರಂದು ಸುಭಾಸ್‌ ಸರ್ಕಲ್‌ನಲ್ಲಿಪ್ರತಿಷ್ಠಾಪಿಸಿರುವ 18 ಅಡಿ ಎತ್ತರದ ಹಾವೇರಿ ಕಾ ರಾಜಾ ಗಣೇಶ ವಿರ್ಸಜನೆ ನಡೆಯಲಿದೆ. ಅಂದು ಬೆಳಗ್ಗೆ ವಿಶೇಷ ಪೂಜೆ, ನಂತರ ಗಣೇಶನ ವಸ್ತುಗಳು ಪೂಜಾ ಸಮಾಗ್ರಿಗಳು ಹರಾಜು ಪ್ರಕ್ರಿಯೆ ಜರುಗಲಿದೆ. ನಂತರ ಮಧ್ಯಾಹ್ನ 2 ಗಂಟೆಗೆ ಹಾವೇರಿ ಕಾ ರಾಜಾ ನಗರದಲ್ಲಿ ಪ್ರಮುಖ ರಸ್ತೆಗಳಲ್ಲಿಮೆರವಣಿಗೆ ನಡೆಸಿ, ತುಂಗಾಭದ್ರಾ ನದಿಯಲ್ಲಿವಿಸರ್ಜನೆ ಮಾಡಲಾಗುತ್ತದೆ ಎಂದು ಗಣೇಶ ಉತ್ಸವ ಕಮೀಟಿ ಮುಖಂಡ ಮಲ್ಲಿಕಾರ್ಜುನ ಸಾತೇನಹಳ್ಳಿ ತಿಳಿಸಿದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ