ಆ್ಯಪ್ನಗರ

ರೈತರಿಗೆ ಎಚ್ಡಿಕೆ ವಂಚನೆ: ಆರೋಪ

ಹಾವೇರಿ :ಚುನಾವಣೆ ಮುನ್ನಾ ರಾಜ್ಯದ ರೈತರ ಸಂಪೂರ್ಣ ಸಾಲ ಮನ್ನಾ ಮಾಡುತ್ತೇನೆ ಎಂದು ಮುಖ್ಯಮುಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹೇಳಿ ಇಂದು ಸಾಲ ಮನ್ನಾ ಮಾಡದೇ ವಚನ ಭ್ರಷ್ಟರಾಗಿದ್ದು ರೈತರಿಗೆ ವಂಚನೆ ಮಾಡುತ್ತಿದ್ದಾರೆ ಎಂದು ಬಿಜೆಪಿ ರಾಜ್ಯ ರೈತ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಈಶ್ವರಚಂದ್ರ ಹೊಸಮನಿ ಆರೋಪಿಸಿದರು.

Vijaya Karnataka 20 Jun 2018, 5:00 am
ಹಾವೇರಿ :ಚುನಾವಣೆ ಮುನ್ನಾ ರಾಜ್ಯದ ರೈತರ ಸಂಪೂರ್ಣ ಸಾಲ ಮನ್ನಾ ಮಾಡುತ್ತೇನೆ ಎಂದು ಮುಖ್ಯಮುಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹೇಳಿ ಇಂದು ಸಾಲ ಮನ್ನಾ ಮಾಡದೇ ವಚನ ಭ್ರಷ್ಟರಾಗಿದ್ದು ರೈತರಿಗೆ ವಂಚನೆ ಮಾಡುತ್ತಿದ್ದಾರೆ ಎಂದು ಬಿಜೆಪಿ ರಾಜ್ಯ ರೈತ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಈಶ್ವರಚಂದ್ರ ಹೊಸಮನಿ ಆರೋಪಿಸಿದರು.
Vijaya Karnataka Web hdk fraud farmers
ರೈತರಿಗೆ ಎಚ್ಡಿಕೆ ವಂಚನೆ: ಆರೋಪ


ನಗರದ ಪ್ರವಾಸಿ ಮಂದಿರದಲ್ಲಿ ಮಂಗಳವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ಮುಖ್ಯಮಂತ್ರಿಗಳು ಜೆಡಿಎಸ್‌ನ ಚುನಾವಣೆ ಪ್ರಣಾಳಿಕೆಯನ್ನು ಕಾಂಗ್ರೆಸ್‌ ಒಪ್ಪಿ ಸಮ್ಮಿಶ್ರ ಸರಕಾರಕ್ಕೆ ಒಪ್ಪಿಗೆ ನೀಡಿದ್ದಾರೆ ಎಂದು ಹೇಳಿ ಇಂದು ರೈತರ ಸಾಲ ಮನ್ನಾ ಮಾಡಲು ಕುಮಾರಸ್ವಾಮಿ ಮುಂದಾಗುತ್ತಿಲ್ಲ ಎಂದು ದೂರಿದರು.

ಬಿಜೆಪಿ ರಾಜ್ಯಾಧ್ಯಕ್ಷರು ನೇತೃತ್ವದಲ್ಲಿ 6 ತಂಡಗಳನ್ನು ರಚನೆ ಮಾಡಿ ರಾಜ್ಯದ ಪ್ರವಾಸ ಕೈಗೊಂಡಿದ್ದೇವೆ. ನನ್ನ ನೇತೃತ್ವದ 6 ಜನರ ಒಂದು ತಂಡ ಹಾವೇರಿ, ಗದಗ, ಉತ್ತರ ಕನ್ನಡ, ಹುಬ್ಬಳ್ಳಿ - ಧಾರವಾಡ, ಕೊಪ್ಪಳ ಪ್ರವಾಸ ಕೈಗೊಂಡು ಗ್ರಾಮೀಣ ಮಟ್ಟದಿಂದ ಜಿಲ್ಲಾಮಟ್ಟದವರೆಗೂ ರೈತರ ಸಮಸ್ಯೆಗಳನ್ನು ಪಟ್ಟಿ ಮಾಡಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪನವರು ಕಳಿಸುತ್ತೇವೆ. ಅವರು ವಿಧಾನಸಭಾ ಅಧಿವೇಶನದಲ್ಲಿ ಮುಖ್ಯಮಂತ್ರಿಗಳಿಗೆ ಒತ್ತಾಯಿಸುತ್ತಾರೆ ಎಂದರು.

ಅಧಿವೇಶನ ಮುಗಿಯುವುದರೊಳಗೆ ರೈತರ ಸಾಲ ಮನ್ನಾ ಮಾಡದಿದ್ದರೆ ಗ್ರಾಮೀಣ ಮಂಡಳದಿಂದ ಹೋರಾಟ ಆರಂಭಿಸಿ ರಾಜ್ಯಮಟ್ಟದವರೆಗೂ ರಸ್ತೆ ರೋಖೋ, ಚಳುವಳಿ, ಜೈಲ್‌ ಬರೋ ಚಳುವಳಿ, ನಾನಾ ರೀತಿಯ ಪ್ರತಿಭಟನೆ ಹಮ್ಮಿಕೊಳ್ಳಲಾಗುತ್ತದೆ ಎಂದರು.

ಪ್ರವಾಸ ಸಂದರ್ಭದಲ್ಲಿ ರಾಜ್ಯ ಬಿಜೆಪಿ ಹಿಂದಿನ ಆಡಳಿತ ಯೋಜನೆಗಳ, ಕೇಂದ್ರ ಸರಕಾರದ ರೈತ ಪರ ಯೋಜನೆಗಳು ಕುರಿತು ಜನರಿಗೆ ತಿಳಿ ಹೇಳಲಾಗುತ್ತದೆ. ಮಣ್ಣು ಪರೀಕ್ಷೆ ಆರೋಗ್ಯ ಕಾರ್ಡ್‌ ಮಾಡಿಸುವ ಕುರಿತು ತಿಳುವಳಿಕೆ, ಯಶಸ್ವಿ ಯೋಜನೆ ಅವಧಿ ಮುಗಿದಿದ್ದು, ಅದನ್ನು ಮುಂದುವರೆಸಬೇಕೆಂದು ಮುಖ್ಯಮಂತ್ರಿಗೆ ಒತ್ತಾಯಿಸಲಾಗುತ್ತದೆ ಎಂದರು.

ಬಿಜೆಪಿ ಜಿಲ್ಲಾಧ್ಯಕ್ಷ ಶಿವರಾಜ ಸಜ್ಜನ ಮಾತನಾಡಿ, ಜಿಲ್ಲೆಯಲ್ಲಿ ರೈತರು ತುಂಬಿದ ಬೆಳೆವಿಮೆ ನೀಡುವಂತೆ ನಾನಾ ರೀತಿಯ ಹೋರಾಟ ಮಾಡಿದರೂ ಇದುವರೆಗೂ ರೈತರಿಗೆ ಬೆಳೆವಿಮೆ ಹಣ ಜಮಾ ಆಗಿಲ್ಲ. 2016-17ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ 40,000 ರೈತರು ಬೆಳೆವಿಮೆ ತುಂಬಿದ್ದು, ಜಿಲ್ಲೆಗೆ 31.23 ಕೋಟಿ ರೂ., ಹಣ ಮುಂಜೂರಾಗಿದೆ. ಹಿಂಗಾರು ಬೆಳೆವಿಮೆ 23.23. ಕೋಟಿ ರೂ. ಹಣ ಬಿಡುಗಡೆಯಾಗಿದೆ. ಆದರೆ ಇದುವರೆಗೂ ರೈತರ ಖಾತೆಗೆ ಹಣ ಜಮಾ ಆಗಿಲ್ಲ. 2017-18ನೇ ಸಾಲಿನ ಮುಂಗಾರಿನಲ್ಲಿ 36 ಸಾವಿರ ರೈತರು ಬೆಳೆವಿಮೆ ತುಂಬಿದ್ದು, 31.24 ಕೋಟಿ ರೂ. ಹಣ ಮುಂಜೂರಾಗಿದೆ. ಅದನ್ನು ತಕ್ಷಣ ರೈತರ ಖಾತೆ ಹಣ ಜಮಾ ಮಾಡಿಸಬೇಕೆಂದು ಒತ್ತಾಯಿಸಿದರು.

ಜಿಂಕೆ ಹಾವಳಿ ತಡೆಗಟ್ಟಿ:

ಜಿಲ್ಲೆಯಲ್ಲಿ ಮುಂಗಾರು ಮಳೆ ಚೆನ್ನಾಗಿ ಆಗಿದ್ದು, ಬಿತ್ತನೆ ಕಾರ್ಯಯೂ ಚುರುಕುಗೊಂಡಿದೆ. ಆದರೆ ಬಿತ್ತನೆ ಮಾಡಿದ ಹೆಸರು ಶೇಂಗಾ, ಸೋಯಾಬಿನ್‌ ಜಿಂಕೆ ದಾಳಿ ಮಾಡಿ ಬೆಳೆ ನಾಶ ಮಾಡುತ್ತಿದ್ದು ರೈತರು ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ. ಜಿಂಕೆಯನ್ನು ತಡೆಗಟ್ಟಲು, ಜಿಂಕೆ ಹಾವಳಿಯಿಂದ ಬೆಳೆ ನಾಶವಾದ ರೈತರಿಗೆ ಅರಣ್ಯ ಇಲಾಖೆ ಸಚಿವರು ಜಿಲ್ಲಾ ಉಸ್ತುವಾರಿ ಸಚಿವರು ರೈತರ ಕಾಳಜಿ ವಹಿಸಿ ಪರಿಹಾರ ಒದಗಿಸಬೇಕು ಎಂದರು.

ಸಿದ್ಧಲಿಂಗಪ್ಪ ಕಾರಡಗಿ, ಶಿವರಾಜ ಸಜ್ಜನ, ಬಸವರಾಜ ಕುಂಬಾರ, ಮುತ್ತಣ್ಣ ಎಲಿಗಾರ, ಪ್ರಕಾಶ ಶ್ರೀಗೇರಿ, ನೀರಲಗಿ ಪಾಟೀಲ, ಗೋವಿಂದಪ್ಪ ಕೊಪ್ಪದ, ಜಿ.ಕೆ.ದೇಸಾಯಿ, ವಿಜಯಕುಮಾರ ಚಿನ್ನಿಕಟ್ಟಿ, ಸುರೇಶ ಹೊಸಮನಿ ಸುದ್ದಿಗೋಷ್ಟಿಯಲ್ಲಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ