ಆ್ಯಪ್ನಗರ

ಹಾವೇರಿಯಲ್ಲಿ ಧಾರಾಕಾರ ಮಳೆ

ಹಾವೇರಿ :ಜಿಲ್ಲೆಯಲ್ಲಿ ಶನಿವಾರ ರಾತ್ರಿ ಭರ್ಜರಿ ಮಳೆಯಾಗಿದ್ದು, ತಾಲೂಕಿನಲ್ಲಿ 52.2 ಮಿ.ಮೀ. ಮಳೆಯಾಗಿದೆ. ನಗರದಲ್ಲಿ ಶನಿವಾರ ರಾತ್ರಿ 3 ಗಂಟೆಗೆ ಆರಂಭವಾದ ಮಳೆ ಸತತ 2 ತಾಸು ಸುರಿದಿದೆ. ನಂತರ ಬೆಳಗಿನವರೆಗೂ ಜಿಟಿ ಜಿಟಿ ಮಳೆ ಇತ್ತು. ನಗರದ ಪಿಬಿ ರಸ್ತೆ ಬಳಿಯ ಪೊಲೀಸ್‌ ಸಿಬ್ಬಂದಿ ವಸತಿಗೃಹ, ಗೂಗಿಕಟ್ಟಿ ಕಾಂಪ್ಲೆಕ್ಸ್‌, ಹಾನಗಲ್ಲ ರಸ್ತೆಯಲ್ಲಿರುವ ಬಸ್‌ ನಿಲ್ದಾಣ ಕೊಳಕು ನೀರಿನಿಂದ ಜಲಾವೃತವಾಗಿದ್ದವು.

Vijaya Karnataka 21 May 2018, 5:00 am
ಹಾವೇರಿ :ಜಿಲ್ಲೆಯಲ್ಲಿ ಶನಿವಾರ ರಾತ್ರಿ ಭರ್ಜರಿ ಮಳೆಯಾಗಿದ್ದು, ತಾಲೂಕಿನಲ್ಲಿ 52.2 ಮಿ.ಮೀ. ಮಳೆಯಾಗಿದೆ. ನಗರದಲ್ಲಿ ಶನಿವಾರ ರಾತ್ರಿ 3 ಗಂಟೆಗೆ ಆರಂಭವಾದ ಮಳೆ ಸತತ 2 ತಾಸು ಸುರಿದಿದೆ. ನಂತರ ಬೆಳಗಿನವರೆಗೂ ಜಿಟಿ ಜಿಟಿ ಮಳೆ ಇತ್ತು. ನಗರದ ಪಿಬಿ ರಸ್ತೆ ಬಳಿಯ ಪೊಲೀಸ್‌ ಸಿಬ್ಬಂದಿ ವಸತಿಗೃಹ, ಗೂಗಿಕಟ್ಟಿ ಕಾಂಪ್ಲೆಕ್ಸ್‌, ಹಾನಗಲ್ಲ ರಸ್ತೆಯಲ್ಲಿರುವ ಬಸ್‌ ನಿಲ್ದಾಣ ಕೊಳಕು ನೀರಿನಿಂದ ಜಲಾವೃತವಾಗಿದ್ದವು. ರಾಮಕೃಷ್ಣನಗರ, ನಾಗೇಂದ್ರನಮಟ್ಟಿಯ ಹಾಗೂ ಪುರದ ಹರಿಜನ ಕೇರಿಯ ತಗ್ಗು ಪ್ರದೇಶದಲ್ಲಿನ ಮನೆಗಳಿಗೆ ನೀರು ನುಗ್ಗಿತ್ತು.
Vijaya Karnataka Web heavy rain in haveri
ಹಾವೇರಿಯಲ್ಲಿ ಧಾರಾಕಾರ ಮಳೆ


ಲೋಕೋಪಯೋಗಿ ಇಲಾಖೆ, ಕೇಂದ್ರ ಬಸ್‌ ನಿಲ್ದಾಣ ಸ್ಥಳಗಳು ಪ್ರವಾಸಿ ಮಂದಿರದ ರಾಷ್ಟ್ರೀಯ ಹೆದ್ದಾರಿಯಲ್ಲಿ ನದಿಯ ಪ್ರವಾಹದಂತೆ ನೀರು ಕಾಣಿಸಿತ್ತು.

ರೈಲ್ವೆ ಕಳೆಸೇತುವೆಯಲ್ಲಿ ದೊಡ್ಡ ಪ್ರಮಾಣದಲ್ಲಿ ನೀರು ನಿಂತಿತ್ತು, ನಾಗೇಂದ್ರನಮಟ್ಟಿಯ ಕೆಳಸೇತುವೆಯಲ್ಲಿ ಕೊಳಕು ನೀರು ಹರಿದು ಜನರ ಓಡಾಟಕ್ಕೆ ತೊಂದರೆ ಆಯಿತು.

ಸ್ವಚ್ಛಗೊಂಡ ಚರಂಡಿಗಳು: ನಗರದ ಬಹುತೇಕ ಚರಂಡಿಗಳು ಶನಿವಾರ ಸುರಿದ ಭರ್ಜರಿ ಮಳೆಗೆ ಸ್ವಚ್ಛಗೊಂಡಿವೆ. ದುರ್ವಾಸನೆಯೂ ಕಡಿಮೆಯಾಗಿದೆ.

ಎಲ್ಲೆಲ್ಲಿ ಎಷ್ಟು ಮಳೆ:

ಶನಿವಾರ ರಾತ್ರಿಯಾದ ಮಳೆಯ ಪ್ರಮಾಣ

ತಾಲೂಕು ಮಳೆಯ ಪ್ರಮಾಣ

ಹಾವೇರಿ 52.2 ಮಿ.ಮೀ.

ಹಾನಗಲ್‌ 40.4 ಮಿ.ಮೀ.

ಶಿಗ್ಗಾವಿ 29.2 ಮಿ.ಮೀ.

ಸವಣೂರ 00.5 ಮಿ.ಮೀ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ