ಆ್ಯಪ್ನಗರ

ಶೀಘ್ರವೇ 2500 ಚಾಲಕರ ನೇಮಕ

ಬ್ಯಾಡಗಿ: ಸಾರಿಗೆ ಸಂಸ್ಥೆಗೆ ಜನೆವರಿಯಲ್ಲಿ650 ನೂತನ ಬಸ್‌ಗಳ ಖರೀದಿ ಸೇರಿದಂತೆ 2500 ಚಾಲಕರ ನೇಮಕ ಮಾಡಿಕೊಳ್ಳಲಾಗುವುದು ಎಂದು ವಾಯುವ್ಯ ರಸ್ತೆ ಸಾರಿಗೆ ಸಂಸ್ಥೆಯ ನೂತನ ಅಧ್ಯಕ್ಷ ವಿ.ಎಸ್‌.ಪಾಟೀಲ ಭರವಸೆ ನೀಡಿದರು.

Vijaya Karnataka 7 Nov 2019, 5:00 am
ಬ್ಯಾಡಗಿ: ಸಾರಿಗೆ ಸಂಸ್ಥೆಗೆ ಜನೆವರಿಯಲ್ಲಿ650 ನೂತನ ಬಸ್‌ಗಳ ಖರೀದಿ ಸೇರಿದಂತೆ 2500 ಚಾಲಕರ ನೇಮಕ ಮಾಡಿಕೊಳ್ಳಲಾಗುವುದು ಎಂದು ವಾಯುವ್ಯ ರಸ್ತೆ ಸಾರಿಗೆ ಸಂಸ್ಥೆಯ ನೂತನ ಅಧ್ಯಕ್ಷ ವಿ.ಎಸ್‌.ಪಾಟೀಲ ಭರವಸೆ ನೀಡಿದರು.
Vijaya Karnataka Web hire 2500 drivers soon
ಶೀಘ್ರವೇ 2500 ಚಾಲಕರ ನೇಮಕ


ಮಂಗಳವಾರ ಪಟ್ಟಣದ ತಾಪಂ ಸಭಾಭವನದಲ್ಲಿ ನಡೆದ ಸಾರಿಗೆ ಇಲಾಖೆ ಹಾಗೂ ಸಾರ್ವಜನಿಕರ ಕುಂದುಕೊರತೆ ಸಭೆಯಲ್ಲಿಮಾತನಾಡಿದ ಅವರು, ಇಲಾಖೆ ಸಾಕಷ್ಟು ನಷ್ಟದಲ್ಲಿದ್ದರೂ ಸಾರ್ವಜನಿಕ ಸೇವೆಯೇ ನಮ್ಮ ಪರಮೋಚ್ಛ ಕಾಯಕವಾಗಿದೆ. ಈ ನಿಟ್ಟಿನಲ್ಲಿನೂತನ ಬಸ್‌ ಖರೀದಿ ಹಾಗೂ ಚಾಲಕರ ನೇಮಕಾತಿ ಮಾಡಿಕೊಳ್ಳಲಾಗುವುದು. ಆಸಕ್ತ ಯುವಕರಿಗೆ ಹುಬ್ಬಳ್ಳಿಯಲ್ಲಿಊಟ ವಸತಿಯೊಂದಿಗೆ ತರಬೇತಿ ನೀಡಿ ವಾಹನ ಚಾಲನಾ ಪರವಾನಗಿ ಹಾಗೂ ಬ್ಯಾಡ್ಜ್‌ ಮಾಡಿಸಿಕೊಡಲಾಗುವುದು ತಿಳಿಸಿದರು.

ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಮಾತನಾಡಿ, ಬ್ಯಾಡಗಿಯಿಂದ ಬೆಂಗಳೂರಿಗೆ ನೇರ ಬಸ್‌ ಇಲ್ಲ. ಮೋಟೆಬೆನ್ನೂರ, ಹಾವೇರಿ, ರಾಣೇಬೆನ್ನೂರನಿಂದ ದುಬಾರಿ ಹಣ ತೆತ್ತು ಖಾಸಗಿ ಬಸ್‌ಗಳಲ್ಲಿಸಂಚರಿಸುವ ಅನಿವಾರ‍್ಯತೆ ಎದುರಾಗಿದೆ. ಆದ್ದರಿಂದ ಬೆಂಗಳೂರಗೆ ಸ್ಲೀಪರ್‌ ಕೋಚ ಬಸ್‌ ಸಂಚಾರಕ್ಕೆ ಗ್ರೀನ್‌ ಸಿಗ್ನಲ್‌ ನೀಡುವಂತೆ ಕೋರಿದರು.

ಶಾಸಕರ ಪ್ರಶ್ನೆ ಕುರಿತಂತೆ ಸಾರಿಗೆ ಅಧಿಕಾರಿ ಜಗದೀಶ ಅವರನ್ನು ತರಾಟೆಗೆ ತೆಗೆದುಕೊಂಡ ಪಾಟೀಲ, ಯಾಕ್ರೀ ಬ್ಯಾಡಗಿಯಿಂದ ಬೆಂಗಳೂರಿಗೆ ಬಸ್‌ ಬಿಟ್ಟಿಲ್ಲ? ಏನು ಸಮಸ್ಯೆ ಹೇಳಿ ಎಂದರು.

ಉತ್ತರಿಸಿದ ಅಧಿಕಾರಿ ಜಗದೀಶ, ಬಸ್‌ ಕೊರತೆಯಿರುವ ಕಾರಣ ಹಾವೇರಿಯಿಂದ ಬೆಂಗಳೂರಿಗೆ ಬಸ್‌ ತೆರಳುತ್ತಿದೆ ಎಂದಾಗ ಆ ಬಸ್‌ನ್ನೆ ಬ್ಯಾಡಗಿ ವಾಯಾವಾಗಿ ಬೆಂಗಳೂರಿಗೆ ಸಂಚರಿಸಲು ಸೂಚಿಸಿ ಎಂದರು. ಇದಕ್ಕೆ ದನಿಗೂಡಿಸಿದ ವಿರೇಂದ್ರ ಶೆಟ್ಟರ್‌, ಯಾವಾಗಿಂದ ಬಸ್‌ ಆರಂಭ ಮಾಡುತ್ತೀರಿ ತಿಳಿಸಿ ಎಂದು ಕೇಳಿದಾಗ ಮುಂದಿನ 7 ದಿನಗಳೊಳಗಾಗಿ ಬಸ್‌ ಬಿಡುವುದಾಗಿ ಅಧಿಕಾರಿ ತಿಳಿಸಿದರು.

ಬ್ಯಾಡಗಿಗೆ 6 ಮಿನಿ ಬಸ್‌: ಬಸ್‌ ನಿಲ್ದಾಣದ ಕ್ಯಾಂಟೀನ್‌ ಹರಾಜು ಮಾಡುವುದು, ಗ್ರಾಮೀಣ ಭಾಗದಲ್ಲಿಸಮಯಕ್ಕೆ ಸರಿಯಾಗಿ ಬಸ್‌ ಬಿಡುವ ಮೂಲಕ ವಿದ್ಯಾರ್ಥಿಗಳಿಗೆ ಅನುಕೂಲ ಮಾಡುವಂತೆ ಅಧಿಕಾರಿಗಳಿಗೆ ಪಾಟೀಲ ಸೂಚಿಸಿದರಲ್ಲದೇ ನಿಲ್ದಾಣದಲ್ಲಿಸಿಸಿ ಟಿವಿ ಕ್ಯಾಮರಾ ಅಳವಡಿಸುವುದು ಮತ್ತು 6 ಮಿನಿ ಬಸ್‌ಗಳನ್ನು ಬ್ಯಾಡಗಿಗೆ ನೀಡುವುದಾಗಿ ಪಾಟೀಲ ಭರವಸೆ ನೀಡಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ