ಆ್ಯಪ್ನಗರ

ಜನತೆಗೆ ವಚನ ತಲುಪಿಸಲು ಪ್ರಾಮಾಣಿಕ ಪ್ರಯತ್ನ ಅವಶ್ಯ

ಹಾವೇರಿ: ಸಾರ್ಥಕ ಜೀವನದ ಸದುವಿನಯದ ವಚನಗಳ ಸಂದೇಶಗಳು ನಮ್ಮ ಬದುಕಿನ ಮಂತ್ರಗಳಾಗಬೇಕು. ಜನರ ಮನೆ, ಮನಗಳಿಗೆ ವಚನ ತಲುಪಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ನಾವೆಲ್ಲರೂ ಮಾಡಬೇಕಾಗಿದೆ ಎಂದು ಹೊಸಮಠದ ಬಸವ ಶಾಂತಲಿಂಗ ಸ್ವಾಮೀಜಿ ಹೇಳಿದರು.

Vijaya Karnataka 28 Aug 2019, 5:00 am
ಹಾವೇರಿ: ಸಾರ್ಥಕ ಜೀವನದ ಸದುವಿನಯದ ವಚನಗಳ ಸಂದೇಶಗಳು ನಮ್ಮ ಬದುಕಿನ ಮಂತ್ರಗಳಾಗಬೇಕು. ಜನರ ಮನೆ, ಮನಗಳಿಗೆ ವಚನ ತಲುಪಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ನಾವೆಲ್ಲರೂ ಮಾಡಬೇಕಾಗಿದೆ ಎಂದು ಹೊಸಮಠದ ಬಸವ ಶಾಂತಲಿಂಗ ಸ್ವಾಮೀಜಿ ಹೇಳಿದರು.
Vijaya Karnataka Web HVR-26 HAVERI 6


ಹಾವೇರಿಯ ವಿನಾಯಕ ನಗರದ ಮಲ್ಲಿಕಾರ್ಜುನ ಹಿಂಚಿಗೇರಿ ಅವರ ಮನೆಯಂಗಳದಲ್ಲಿ ಬಸವ ಬಳಗ ಹಾಗೂ ಹಾವೇರಿ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಆಶ್ರಯದಲ್ಲಿ ಶ್ರಾವಣ ಮಾಸದ ಅಂಗವಾಗಿ ಆಯೋಜಿಸಿದ ಕಲ್ಯಾಣ ದರ್ಶನ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದರು.

ಮೌಢ್ಯಗಳ ಮೇಲೆ ಸವಾರಿ ಮಾಡುವ ಮೂಢತನಕ್ಕೆ ತಡೆ ಒಡ್ಡಲೇಬೇಕು. ನಮ್ಮ ಸುತ್ತಲೂ ವಚನ ಸಂಸ್ಕೃತಿ ಬದುಕನ್ನು ಅನಾವರಣಗೊಳಿಸುವುದೇ ಕಲ್ಯಾಣ ದರ್ಶನ ಕಾರ್ಯಕ್ರಮದ ಉದ್ದೇಶ ಎಂದರು. ಜಿಲ್ಲಾ ಶರಣ ಸಾಹಿತ್ಯ ಪರಿಷತ್‌ ಅಧ್ಯಕ್ಷ ಪ್ರೊ.ಮಾರುತಿ ಶಿಡ್ಲಾಪುರ ಮಾತನಾಡಿ, ಜಡ ಸಮಾಜವನ್ನು ಬಡಿದೆಬ್ಬಿಸುವ, ದುಡಿದುಣ್ಣುವುದನ್ನು ಕಲಿಸಿದ, ಬತ್ತದ ಜಲಮೂಲವಾದ ಶರಣ ಸಂಸ್ಕೃತಿಯ ಸಂದೇಶಗಳು ಸದಾ ಕಾಲಕ್ಕೂ ಆರದ ಬೆಳಕು, ಮನುಷ್ಯನ ಜೀವನದ ಶಿಸ್ತನ್ನು ಕಲಿಸುತ್ತಿದೆ ಎಂದು ಹೇಳಿದರು.

ಶೋಭಾತಾಯಿ ಮಾಗಾವಿ ಮಾತನಾಡಿ, ವಚನಕಾರರ ಸಂದೇಶಗಳು ನಮ್ಮೊಳಗಿನ ಕಳೆ ಕಳೆದು ಒಳಿತನ್ನು ಅನಾವರಣಗೊಳಿಸುವ ಶಕ್ತಿ ಹೊಂದಿವೆ. ಶಾಲೆ- ಕಾಲೇಜುಗಳಲ್ಲಿ, ಸಾರ್ವಜನಿಕ ಸಮಾರಂಭಗಳಲ್ಲಿ ವಚನಗಳು ಮೊಳಗಬೇಕು ಎಂದರು. ಗುರುಶಾಂತಪ್ಪ ಹಿಂಚಿಗೇರಿ, ಎನ್‌.ಬಿ. ಕಾಳೆ ಮಾತನಾಡಿದರು. ಈ ವೇಳೆ ಸಮಾಜ ಸೇವೆ ಮಾಡುತ್ತಿರುವ ಸ್ನೇಕ ರಮೇಶ ಅವರನ್ನು ಸನ್ಮಾನಿಸಲಾಯಿತು.

ನಾಗೇಶ ಅಕ್ಕಿ, ಚನ್ನವೀರಪ್ಪ, ಶಿವಯೋಗಿ ಅಂಗಡಿ, ಚಂದ್ರಶೇಖರ ಮಾಳಗಿ, ಶಿವಯೋಗಿ, ನವೀನ ಹಿಂಚಿಗೇರಿ, ಬೆನ್ನೂರ, ಶಿವಬಸಪ್ಪ ಮುದ್ದಿ, ಮುರಿಗೆಪ್ಪ ಕಡೇಕೊಪ್ಪ, ಶಿವಲಿಂಗ ಹೊಸಮನಿ, ನಾಗೇಂದ್ರಪ್ಪ ಮಂಡಕ್ಕಿ, ಮಂಜುನಾಥ ಅಂಗಡಿ, ಚನ್ನಬಸವ ರೊಡ್ಡನವರ, ಜಗದೀಶ ನಾಗನೂರು, ಚಂದ್ರಪ್ಪ ಬ್ಯಾತನಾಳ, ರವೀಂದ್ರ ಅಂಗಡಿ, ಶಿವಬಸಪ್ಪ ಕಪ್ಪರದ, ಜಗದೀಶ ಅಂಕಲಕೋಟಿ, ಮಹಾಂತೇಶ ಯಡ್ರಾಮಿ, ಜಯಶ್ರೀ ಶಿವಪೂರ, ದ್ರಾಕ್ಷಾಯಿಣಿ ಗಾಣಿಗೇರ, ಅನಿತಾ ಹಿಂಚಿಗೇರಿ, ಶಾಂತಕ್ಕ ಉಳ್ಳಾಗಡಿ, ರೇಣುಕಾ ಹೊಸಮನಿ, ಸುಜಾತಾ ತೆಪ್ಪದ, ವåಹದೇವಕ್ಕಾ ಉಪಸ್ಥಿತರಿದ್ದರು. ದಾನಮ್ಮ ಅಂಗಡಿ ಪ್ರಾರ್ಥಿಸಿದರು. ದಿವ್ಯಾ ಹಿಂಚಿಗೇರಿ ಪ್ರಸ್ತಾವಿಕವಾಗಿ ಮಾತನಾಡಿದರು. ಮಲ್ಲಿಕಾರ್ಜುನ ಹಿಂಚಿಗೇರಿ ಸ್ವಾಗತಿಸಿದರು. ಇಂದೂಧರ ಯರೇಸಿಮಿ ನಿರ್ವಹಿಸಿದರು. ಸಿದ್ದಲಿಂಗೇಶ ನಾಶಿ ವಂದಿಸಿದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ