ಆ್ಯಪ್ನಗರ

ನಕಲಿ ವೈದ್ಯರು ಕಂಡುಬಂದರೆ ಕ್ರಮ

ಹಾವೇರಿ: ನಕಲಿ ವೈದ್ಯರು ಚಿಕಿತ್ಸೆ ನೀಡುತ್ತಿದ್ದರೆ ಹಾಗೂ ಖಾಸಗಿ ಆಸ್ಪತ್ರೆಯವರು ಹೆಚ್ಚಿನ ದರ ವಿಧಿಸಿದ ಬಗ್ಗೆ ಯಾವುದೇ ಪ್ರಕರಣಗಳು ಕಂಡುಬಂದಲ್ಲಿ ಜಿಲ್ಲಾ ನೋಂದಣಿ ಮತ್ತು ಕುಂದುಕೊರತೆ ಪ್ರಾಧಿಕಾರಕ್ಕೆ ದೂರು ಸಲ್ಲಿಸಲು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಎಚ್‌.ಎಸ್‌. ರಾಘವೇಂದ್ರಸ್ವಾಮಿ ಸಾರ್ವಜನಿಕರಿಗೆ ಮನವಿ ಮಾಡಿದರು.

Vijaya Karnataka 15 May 2019, 5:00 am
ಹಾವೇರಿ: ನಕಲಿ ವೈದ್ಯರು ಚಿಕಿತ್ಸೆ ನೀಡುತ್ತಿದ್ದರೆ ಹಾಗೂ ಖಾಸಗಿ ಆಸ್ಪತ್ರೆಯವರು ಹೆಚ್ಚಿನ ದರ ವಿಧಿಸಿದ ಬಗ್ಗೆ ಯಾವುದೇ ಪ್ರಕರಣಗಳು ಕಂಡುಬಂದಲ್ಲಿ ಜಿಲ್ಲಾ ನೋಂದಣಿ ಮತ್ತು ಕುಂದುಕೊರತೆ ಪ್ರಾಧಿಕಾರಕ್ಕೆ ದೂರು ಸಲ್ಲಿಸಲು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಎಚ್‌.ಎಸ್‌. ರಾಘವೇಂದ್ರಸ್ವಾಮಿ ಸಾರ್ವಜನಿಕರಿಗೆ ಮನವಿ ಮಾಡಿದರು.
Vijaya Karnataka Web if fake doctor finds action
ನಕಲಿ ವೈದ್ಯರು ಕಂಡುಬಂದರೆ ಕ್ರಮ


ಪತ್ರಿಕಾ ಪ್ರಕಟಣೆಗೆ ನೀಡಿರುವ ಅವರು, ಸಾರ್ವಜನಿಕರು ಸರ್ಕಾರಿ ಆಸ್ಪತ್ರೆಗಳಲ್ಲೇ ಚಿಕಿತ್ಸೆ ಪಡೆಯಬೇಕು ಅಥವಾ ನೋಂದಾಯಿತ ಅರ್ಹ ವೈದ್ಯರಲ್ಲಿ ಮಾತ್ರ ಚಿಕಿತ್ಸೆ ಪಡೆಯುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದ್ದಾರೆ.

'ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ಅಧಿನಿಯಮ 2007 ತಿದ್ದುಪಡಿ ಆದೇಶ ಹಾಗೂ 2009 ಹಾಗೂ 2018ರ ನಿಯಮದನ್ವಯ ಈಗಾಗಲೇ ಜಿಲ್ಲೆಯಲ್ಲಿ ಖಾಸಗಿ ವೈದ್ಯಕೀಯ ಸಂಸ್ಥೆಗಳಾದ ಕ್ಲಿನಿಕ್‌ಗಳು, ಲ್ಯಾಬೋರೇಟರಿಗಳು, ನರ್ಸಿಂಗ್‌ ಹೋಂಗಳು ನೋಂದಣಿ ಪಡೆದು ಖಾಸಗಿ ವೈದ್ಯ ವೃತ್ತಿ ನಡೆಸುತ್ತಿದ್ದಾರೆ. ಆದರಂತೆ ಕೆಪಿಎಂ.ಇ ನೋಂದಣಿ ಪ್ರಮಾಣಪತ್ರ ಇಲ್ಲದೇ ನಕಲಿ ವೈದ್ಯರು ಖಾಸಗಿ ವೈದ್ಯ ವೃತ್ತಿ ನಡೆಸುತ್ತಿರುವುದು ಕಂಡುಬರುತ್ತದೆ. ಅನುಮತಿ ಇಲ್ಲದೇ ನಕಲಿ ವೈದ್ಯರು ವೈದ್ಯ ವೃತ್ತಿ ನಡೆಸುವುದು ಕಾನೂನಿನನ್ವಯ ಅಪರಾಧವಾಗಿದ್ದು, ನಕಲಿ ವೈದ್ಯರು ಈ ತಕ್ಷ ಣವೇ ತಮ್ಮ ಅನಧೀಕೃತ ಕ್ಲಿನಿಕಗಳನ್ನು ಬಂದ ಮಾಡಲು ಆದೇಶಿಸಿದೆ ಎಂದು ತಿಳಿಸಿದ್ದಾರೆ.

ನಕಲಿ ವೈದ್ಯ ವೃತ್ತಿ ನಡೆಸಲು ಮನೆ, ಕಟ್ಟಡಗಳನ್ನು ಬಾಡಿಗೆ ನೀಡಿದ ಮಾಲೀಕರು ಗಮನಹರಿಸಿ ಸದರಿ ವೈದ್ಯರು ನಕಲಿ ಎಂದು ಕಂಡುಬಂದಲ್ಲಿ ಕೂಡಲೇ ಅವರನ್ನು ತಮ್ಮ ಬಾಡಿಗೆ ಕಟ್ಟಡದಿಂದ ತೆರವುಗೊಳಿಸಬೇಕು. ತಪ್ಪಿದ್ದಲ್ಲಿ ಕಟ್ಟಡ ಮಾಲಿಕರ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಅರ್ಹತೆ ಪದವಿ, ನೋಂದಣಿ ಹಾಗೂ ಅನುಮತಿ ಇಲ್ಲದೇ ವೈದ್ಯ ವೃತ್ತಿ ನಡೆಸುತ್ತಿರುವ ನಕಲಿ ವೈದ್ಯರಿಗೆ ಈ ಹಿಂದೆ ಅನೇಕ ಬಾರಿ ನೋಟೀಸ್‌ ಜಾರಿ ಮಾಡಿ, ಎಚ್ಚರಿಕೆ ನೀಡಿ ತಮ್ಮ ವೈದ್ಯ ವೃತ್ತಿಯನ್ನು ನಡೆಸದಂತೆ ಆದೇಶಿಸಲಾಗಿತ್ತು. ಅಂತಹ ನಕಲಿ ವೈದ್ಯರು ಪುನಃ ತಮ್ಮ ವೈದ್ಯ ವೃತ್ತಿ ಮುಂದುವರೆಸುತ್ತಿರುವುದು ಜಿಲ್ಲಾಡಳಿತ ಗಮನಕ್ಕೆ ಬಂದಿರುತ್ತದೆ. ನ್ಯಾಯಾಲಯದಲ್ಲಿ ಪ್ರಕರಣವಿದೆ ಎಂದು ಗುರುತಿಸಿಕೊಂಡು ನಕಲಿ ವೈದ್ಯ ವೃತ್ತಿ ನಡೆಸಿ ಸಾರ್ವಜನಿಕರಿಗೆ ಮೋಸ ಮಾಡುತ್ತಿರುವುದು ಕಂಡು ಬಂದಿದೆ.

ಸಾರ್ವಜನಿಕರು ಆಸ್ಪತ್ರೆಗೆ ತೆರಳಿದ ಸಂದರ್ಭದಲ್ಲಿ ಸಾರ್ವಜನಿಕರಿಗೆ ತಿಳಿಯುವಂತೆ ದಪ್ಪ ಅಕ್ಷ ರಗಳಲ್ಲಿ ತಮ್ಮ ಆಸ್ಪತ್ರೆಯಲ್ಲಿಯ ಸೇವಾ ಶುಲ್ಕಗಳ ಕುರಿತು ಪಟ್ಟಿ ಪ್ರಕಟಿಸಬೇಕು. ಈ ಕುರಿತು ಯಾವುದೇ ಆಸ್ಪತ್ರೆಯಿಂದ ಸಾರ್ವಜನಿಕ ದೂರು ಬಂದಲ್ಲಿ ಅಂತಹ ಆಸ್ಪತ್ರೆಯ ವಿರುದ್ಧ ಕೆ.ಪಿಎಂಇ ಕಾನೂನು ಅಡಿಯಲ್ಲಿ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ