ಆ್ಯಪ್ನಗರ

ಅಕ್ರಮ ಸಾಗುವಳಿ ಮಾಡುವವರು ವಿರುದ್ಧ ಕ್ರಮಕ್ಕೆ ಆಗ್ರಹ

ಹಾವೇರಿ : ಸರಕಾರಿ ಭೂಮಿಯಲ್ಲಿಅಕ್ರಮವಾಗಿ ಸಾಗುವಳಿ ಮಾಡಲು ಪ್ರಯತ್ನಿಸುತ್ತಿರುವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಆಗ್ರಹಿಸಿ ತಾಲೂಕಿನ ಹೊಸರಿತ್ತಿ ಸೇರಿದಂತೆ ಸುತ್ತಲಿನ ಗ್ರಾಮಸ್ಥರು ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ ಅವರಿಗೆ ಮನವಿ ಸಲ್ಲಿಸಿದರು.

Vijaya Karnataka 31 May 2020, 5:00 am
ಹಾವೇರಿ : ಸರಕಾರಿ ಭೂಮಿಯಲ್ಲಿಅಕ್ರಮವಾಗಿ ಸಾಗುವಳಿ ಮಾಡಲು ಪ್ರಯತ್ನಿಸುತ್ತಿರುವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಆಗ್ರಹಿಸಿ ತಾಲೂಕಿನ ಹೊಸರಿತ್ತಿ ಸೇರಿದಂತೆ ಸುತ್ತಲಿನ ಗ್ರಾಮಸ್ಥರು ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ ಅವರಿಗೆ ಮನವಿ ಸಲ್ಲಿಸಿದರು.
Vijaya Karnataka Web illegal cultivators demand action against them
ಅಕ್ರಮ ಸಾಗುವಳಿ ಮಾಡುವವರು ವಿರುದ್ಧ ಕ್ರಮಕ್ಕೆ ಆಗ್ರಹ

ಹೊಸರಿತ್ತಿ ಹಾಗೂ ಬೊಮ್ಮನಕಟ್ಟಿ ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂ. 98/11 ರಲ್ಲಿಇವರು ನೂರಾರು ಎಕರೆ ಸರಕಾರಿ ಭೂಮಿಯಲ್ಲಿಅಕ್ರಮವಾಗಿ ಸಾಗುವಳಿಗೆ ಕೆಲವರು ಪ್ರಯತ್ನಿಸುತ್ತಿದ್ದಾರೆ. ಈ ಕುರಿತು ಅಧಿಕಾರಿಗಳ ಗಮನ ಸಹ ಸೆಳೆಯಲಾಗಿದೆ. ಸಾರ್ವಜನಿಕರಿಗೆ ಶಿಕ್ಷಣ, ಉದ್ಯೋಗ, ವಸತಿ ಸೇರಿದಂತೆ ಇನ್ನಿತರ ಸೌಲಭ್ಯ ಒದಗಿಸಲು ಸರಕಾರ ಬಳಕೆ ಮಾಡಬಹುದಾದ ಭೂಮಿಯಲ್ಲಿಸಾಗುವಳಿ ಅಪರಾಧ ಎಂದು ಅರಿವಿದ್ದರೂ ಕೆಲವರು ಅಕ್ರಮ ಸಾಗುವಳಿಗೆ ಪ್ರಯತ್ನಿಸುತ್ತಿದ್ದಾರೆ. ಕೂಡಲೇ ಸೂಕ್ತ ವಿಚಾರಣೆ ನಡೆಸಿ, ಕಾನೂನು ಕ್ರಮ ಜರುಗಿಸುವಂತೆ ಮನವಿಯಲ್ಲಿಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಜಿಲ್ಲಾಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ, ಸಂಸದ ಶಿವಕುಮಾರ ಉದಾಸಿ, ಶಾಸಕ ನೆಹರೂ ಓಲೇಕಾರ ಅವರಿಗೂ ಗ್ರಾಮಸ್ಥರು ಮನವಿ ಸಲ್ಲಿಸಿದ್ದಾರೆ. ಕೆ.ಸಿ.ಕೋರಿ, ಐ.ಜಿ.ಕೋರಿ, ಚನ್ನವೀರಯ್ಯ ಹಾವೇರಿಮಠ, ಪರಸಪ್ಪ ಚಂದ್ರಗಿರಿ, ಫಕ್ಕೀರಪ್ಪ ಚನ್ನಣ್ಣನವರ, ಗಂಗಣ್ಣ ಕಟ್ಟಿ, ಮುರುಗೇಶ್‌ ಅಂಗಡಿ, ಅನುಪ ಜಂಗಳಿ, ವಿಜಯಲಕ್ಷಿತ್ರ್ಮೕ ಪಾಟೀಲ, ನಿರ್ಮಲಾ ಹಿರೇಮಠ, ಶಾರದಾ ಅಳ್ಳಕೇರಿ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ