ಆ್ಯಪ್ನಗರ

ಮಹಿಳೆ ಜತೆ ಅನುಚಿತ ವರ್ತನೆ:ದೂರು

ಶಿಗ್ಗಾವಿ : ಮಹಿಳೆಯೊಬ್ಬಳ ಜತೆಗೆ ಸಾರ್ವಜನಿಕವಾಗಿ ಅನುಚಿತವಾಗಿ ವರ್ತಿಸಿ ಎಳೆದಾಡಿ, ಮಾರಣಾಂತಿಕವಾಗಿ ಹಲ್ಲೆ ನಡೆಸಿ ಅವಾಚ್ಯ ಶಬ್ದಗಳಿಂದ ನಿಂದಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ತಡಸ ಪೊಲೀಸ್‌ ಠಾಣೆಯಲ್ಲಿ ವ್ಯಕ್ತಿಯೊಬ್ಬರ ವಿರುದ್ಧ ದೂರು ದಾಖಲಾಗಿದೆ.

Vijaya Karnataka 7 Mar 2019, 5:00 am
ಶಿಗ್ಗಾವಿ : ಮಹಿಳೆಯೊಬ್ಬಳ ಜತೆಗೆ ಸಾರ್ವಜನಿಕವಾಗಿ ಅನುಚಿತವಾಗಿ ವರ್ತಿಸಿ ಎಳೆದಾಡಿ, ಮಾರಣಾಂತಿಕವಾಗಿ ಹಲ್ಲೆ ನಡೆಸಿ ಅವಾಚ್ಯ ಶಬ್ದಗಳಿಂದ ನಿಂದಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ತಡಸ ಪೊಲೀಸ್‌ ಠಾಣೆಯಲ್ಲಿ ವ್ಯಕ್ತಿಯೊಬ್ಬರ ವಿರುದ್ಧ ದೂರು ದಾಖಲಾಗಿದೆ.
Vijaya Karnataka Web inappropriate behavior with woman complaint
ಮಹಿಳೆ ಜತೆ ಅನುಚಿತ ವರ್ತನೆ:ದೂರು


ತಾಲೂಕಿನ ಹೊಸೂರು ಗ್ರಾ.ಪಂ. ವ್ಯಾಪ್ತಿಯ ಯತ್ನಳ್ಳಿ ಗ್ರಾಮದ ಮಮತಾಜ ಬಾಷಾಸಾಬ ತಹಸೀಲ್ದಾರ ಎಂಬ ಮಹಿಳೆ ತನ್ನ ಗಂಡನೊಂದಿಗೆ ದುಂಡಶಿ ಗ್ರಾಮದ ಬ್ಯಾಂಕ್‌ ವ್ಯವಹಾರ ಸಂಬಂಧಿತ ಕೆಲಸಕ್ಕೆ ತೆರಳಿದ್ದರು. ಅಲ್ಪಸಂಖ್ಯಾತ ಇಲಾಖೆ ಪ್ರಾಯೋಜಿತ ಮಹಿಳೆಯರಿಗೆ ಅಲ್ಲಿನ ಕೆವಿಜಿ ಬ್ಯಾಂಕಿನಲ್ಲಿ ಸಬ್ಸಿಡಿ ಲೋನ್‌ ಕೊಡಿಸುವುದಾಗಿ ನಂಬಿಸಿ ಸುಳ್ಳು ಹೇಳಿಕೊಂಡು ಹೊಸೂರು ಗ್ರಾಮದ ಹನುಮಂತ ಮಾದರ ಎಂಬವರು 10 ಸಾವಿರ ರೂ. ಕಮೀಷನ್‌ ಮುಂಗಡ ಹಣ ಪಡೆದಿದ್ದ ಎನ್ನಲಾಗಿದೆ.

ಕಾರಣ ಮಮತಾಜ ತಹಸೀಲ್ದಾರ, ಈ ಕುರಿತು ಬ್ಯಾಂಕಿನ ಸಿಬ್ಬಂದಿಯಲ್ಲಿ ವಿಚಾರಿಸಿದಾಗ ನಿಮಗೆ ಯಾವುದೇ ಲೋನ್‌ ಮಂಜೂರಿ ಆಗಿಲ್ಲ ಎಂದು ಖಚಿತ ಪಡಿಸಿದ್ದರು. ಪ್ರಕರಣದ ಆರೋಪಿ ಹನುಮಂತ ಮಾದರನಿಗೆ ಮುಂಗಡ ಕೊಟ್ಟ ಹಣ ಪರತ್‌ ಬೇಡಿದ ಮಹಿಳೆಗೆ ಬ್ಯಾಂಕ್‌ ಆವರಣದಲ್ಲಿಯೇ ಎಳೆದಾಡಿ ಅವಳ ಬಟ್ಟೆ ಹರಿದು, ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ. ನಂತರ ಗಲಾಟೆ ಬಿಡಿಸಲು ಹೆಂಡತಿಯ ಸಹಾಯಕ್ಕೆ ಬಂದ ಅವಳ ಪತಿ ಭಾಷಾಸಾಬ ತಹಸೀಲ್ದಾರನನ್ನೂ ಬಲವಾಗಿ ಹೊಡೆದಿದ್ದಾನೆ ಎಂದು ಮಮತಾಜ ತಹಸೀಲ್ದಾರ ಪೊಲೀಸ್‌ರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ