ಆ್ಯಪ್ನಗರ

ಇಂದು ವಸತಿ ಶಾಲೆ ನೂತನ ಕಟ್ಟಡ ಉದ್ಘಾಟನೆ

ಅಕ್ಕಿಆಲೂರು: ಕಲಕೇರಿ ಗ್ರಾಮದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಇಂದಿರಾ ಗಾಂಧಿ ವಸತಿ ಶಾಲೆಯ ನೂತನ ಕಟ್ಟಡ 18 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿದ್ದು, ಡಿ. 29 ರಂದು ಡಿಸಿಎಂ ಗೋವಿಂದ ಕಾರಜೋಳ ಉದ್ಘಾಟಿಸುವರು.

Vijaya Karnataka 29 Dec 2019, 5:00 am
ಅಕ್ಕಿಆಲೂರು: ಕಲಕೇರಿ ಗ್ರಾಮದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಇಂದಿರಾ ಗಾಂಧಿ ವಸತಿ ಶಾಲೆಯ ನೂತನ ಕಟ್ಟಡ 18 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿದ್ದು, ಡಿ. 29 ರಂದು ಡಿಸಿಎಂ ಗೋವಿಂದ ಕಾರಜೋಳ ಉದ್ಘಾಟಿಸುವರು.
Vijaya Karnataka Web inauguration of residential school new building
ಇಂದು ವಸತಿ ಶಾಲೆ ನೂತನ ಕಟ್ಟಡ ಉದ್ಘಾಟನೆ


ಬೆಂಗಳೂರಿನ ಕೆ.ಬಸವಾನಂದ ಎಂಬ ಗುತ್ತಿಗೆದಾರರು ಕಟ್ಟಡ ನಿರ್ಮಿಸಿದ್ದಾರೆ. ಹೊರಾಂಗಣ ಮತ್ತು ಒಳಾಂಗಣ ರಚನೆ ಅದ್ಭುತವಾಗಿ ಮೂಡಿಬಂದಿದೆ. ಶಾಲಾ ಸಂಕೀರ್ಣ, ವಸತಿ ನಿಲಯ, ಭೋಜನಾಲಯ, ಸಿಬ್ಬಂದಿ ವಸತಿ ಗೃಹಗಳು, ಸಭಾಂಗಣ ಹೀಗೆ ಇಡೀ ಶಾಲಾ ಆವರಣ ಕಣ್ಮನ ಸೆಳೆಯುತ್ತಿದ್ದು, ಜಿಲ್ಲೆಯಲ್ಲಿಯೇ ಮಾದರಿ ಎನಿಸಿರುವುದು ಕಟ್ಟಡದ ವೈಶಿಷ್ಟತ್ರ್ಯತೆ.

ಡಿ. 29 ರಂದು ಮಧ್ಯಾಹ್ನ 12 ಗಂಟೆಗೆ ಮಹಲಿಂಗಯ್ಯ ಹಿರೇಮಠ ಸಾನ್ನಿಧ್ಯದಲ್ಲಿಡಿಸಿಎಂ ಗೋವಿಂದ ಕಾರಜೋಳ ಉದ್ಘಾಟಿಸಲಿದ್ದು, ಶಾಸಕ ಸಿ.ಎಂ.ಉದಾಸಿ ಅಧ್ಯಕ್ಷತೆ ವಹಿಸುವರು. ಗೃಹ ಸಚಿವ ಬಸವರಾಜ್‌ ಬೊಮ್ಮಾಯಿ, ಕರ್ನಾಟಕ ರಾಜ್ಯ ಉಗ್ರಾಣ ನಿಗಮದ ಅಧ್ಯಕ್ಷ ಯು.ಬಿ.ಬಣಕಾರ, ಜಿಪಂ ಅಧ್ಯಕ್ಷ ಎಸ್‌.ಕೆ.ಕರಿಯಣ್ಣನವರ, ಸಂಸದ ಶಿವಕುಮಾರ ಉದಾಸಿ, ವಿಧಾನ ಪರಿಷತ್‌ ಸದಸ್ಯರಾದ ಬಸವರಾಜ್‌ ಹೊರಟ್ಟಿ, ಶ್ರೀನಿವಾಸ್‌ ಮಾನೆ, ಪ್ರೊ.ಎಸ್‌.ವಿ.ಸಂಕನೂರ, ಪ್ರದೀಪ ಶೆಟ್ಟರ, ಜಿಪಂ ಉಪಾಧ್ಯಕ್ಷೆ ಗಿರಿಜವ್ವ ಬ್ಯಾಲದಹಳ್ಳಿ, ಮಾರುತಿ ರಾಠೋಡ್‌, ಗೌರಮ್ಮ ಶೇತಸನದಿ, ಸಿದ್ದಪ್ಪ ಹಿರಗಪ್ಪನವರ, ಸರಳಾ ಜಾಧವ, ಅಜ್ಜಪ್ಪ ಶಿರಳ್ಳಿ, ವನಜಾಕ್ಷಮ್ಮ ಬಾಗಸರ, ರಾಮಪ್ಪ ಮಾದಪ್ಪನವರ, ಸುಲೋಚನಾ ದೇವಗಿರಿ, ಚನ್ನಬಸಪ್ಪ ಹಾವೇರಿ ಭಾಗವಹಿಸುವರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ