ಆ್ಯಪ್ನಗರ

ಭೂಸ್ವಾಧೀನ ಪರಿಹಾರಕ್ಕೆ ಒತ್ತಾಯ

ರಾಣೇಬೆನ್ನೂರು: ತುಂಗಾ ಮೇಲ್ದಂಡೆ ಯೋಜನೆ ಕಾಲುವೆ ನಿರ್ಮಾಣಕ್ಕಾಗಿ ಭೂಸ್ವಾಧೀನ ಪಡಿಸಿಕೊಂಡಿರುವ ಜಮೀನಿನ ರೈತರಿಗೆ ಭೂ ಪರಿಹಾರ ನೀಡಿಕೆಯಲ್ಲಿನ ವಿಳಂಬ ಖಂಡಿಸಿ ತಾಲೂಕಿನ ಹರನಗಿರಿ ಭಾಗದ ರೈತರು ಸೋಮವಾರ ನಗರದ ಮಾಗೋಡ ರಸ್ತೆಯ ವಿಶೇಷ ಭೂಸ್ವಾಧಿನಾಧಿಕಾರಿಗಳ ಕಚೇರಿಯ ಎದುರು ಪ್ರತಿಭಟನೆ ನಡೆಸಿದರು.

Vijaya Karnataka 25 Jun 2019, 5:00 am
ರಾಣೇಬೆನ್ನೂರು: ತುಂಗಾ ಮೇಲ್ದಂಡೆ ಯೋಜನೆ ಕಾಲುವೆ ನಿರ್ಮಾಣಕ್ಕಾಗಿ ಭೂಸ್ವಾಧೀನ ಪಡಿಸಿಕೊಂಡಿರುವ ಜಮೀನಿನ ರೈತರಿಗೆ ಭೂ ಪರಿಹಾರ ನೀಡಿಕೆಯಲ್ಲಿನ ವಿಳಂಬ ಖಂಡಿಸಿ ತಾಲೂಕಿನ ಹರನಗಿರಿ ಭಾಗದ ರೈತರು ಸೋಮವಾರ ನಗರದ ಮಾಗೋಡ ರಸ್ತೆಯ ವಿಶೇಷ ಭೂಸ್ವಾಧಿನಾಧಿಕಾರಿಗಳ ಕಚೇರಿಯ ಎದುರು ಪ್ರತಿಭಟನೆ ನಡೆಸಿದರು.
Vijaya Karnataka Web insist on land acquisition relief
ಭೂಸ್ವಾಧೀನ ಪರಿಹಾರಕ್ಕೆ ಒತ್ತಾಯ


ಪ್ರತಿಭಟನೆ ನೇತೃತ್ವ ವಹಿಸಿದ್ದ ತಾಲೂಕು ಅಧ್ಯಕ್ಷ ಹನುಮಂತಪ್ಪ ಕಬ್ಬಾರ ಮಾತನಾಡಿ, ಯೋಜನೆಯಲ್ಲಿ ಕಾಲುವೆ ನಿರ್ಮಾಣಕ್ಕಾಗಿ 15 ವರ್ಷಗಳ ಹಿಂದೆ ತಮ್ಮ ಭಾಗದ ಸುಮಾರು 60-70 ರೈತರಿಗೆ ಸೇರಿದ 52.10 ಎಕರೆ ಜಮೀನು ವಶಪಡಿಸಿಕೊಳ್ಳಲಾಗಿದೆ. ಆದರೆ ಇದುವರೆಗೂ ಪರಿಹಾರ ಮಾತ್ರ ನೀಡಿಲ್ಲ. ಇದರ ಬಗ್ಗೆ ಜಮೀನು ನೀಡಿದ ರೈತರು ಭೂಸ್ವಾಧೀನಾಧಿಕಾರಿಗಳ ಕಚೇರಿಗೆ ಅನೇಕ ಬಾರಿ ಲಿಖಿತವಾಗಿ ಮತ್ತು ಮೌಖಿಕವಾಗಿ ಅರ್ಜಿ ಸಲ್ಲಿಸಲಾಗಿದೆ.

ಯೋಜನೆಯಲ್ಲಿ ಭೂಮಿ ಕಳೆದಕೊಂಡ ರೈತರಿಗೆ ಪರಿಹಾರ ನೀಡಬೇಕು ಎಂದು ಇಲಾಖೆಯಿಂದ ಕಚೇರಿಗೆ ಅನುದಾನ ಬಂದಿದೆ. ಆದರೆ ಯೋಜನೆಯ ಕುರಿತು ಮೇಲಾಧಿಕಾರಿಗಳಿಗೆ ಮಾಹಿತಿ ನೀಡುವಲ್ಲಿ ಕಚೇರಿ ಅಧಿಕಾರಿಗಳು ಹಿಂದೇಟು ಹಾಕುತ್ತಿದ್ದಾರೆ. ಇದರಿಂದ ಕಳೆದ ನಾಲ್ಕು ತಿಂಗಳ ಹಿಂದೆ ಬರಬೇಕಾದ ಅನುದಾನ ವಿಳಂಬವಾಗುತ್ತಿದೆ ಎಂದು ರೈತರು ಆರೋಪಿಸಿದರು.

ಈ ನಿಟ್ಟಿನಲ್ಲಿ ಅಧಿಕಾರಿಗಳು ರೈತರ ಸಮಸ್ಯೆಗೆ ಸ್ಪಂದಿಸಿ ಜುಲೈ 3ರೊಳಗೆ ಪರಿಹಾರ ಹಣವನ್ನು ರೈತರಿಗೆ ತಲುಪಿಸುವ ವ್ಯವಸ್ಥೆ ಮಾಡಬೇಕು. ಇಲ್ಲವಾದರೆ ಕಚೇರಿಗೆ ಬೀಗ ಜಡಿದು ಅಹೋರಾತ್ರಿ ಧರಣಿ ನಡೆಸುತ್ತೇವೆ ಎಂದು ಎಚ್ಚರಿಸಿದರು.

ಪ್ರತಿಭಟನೆಯಲ್ಲಿ ರೈತ ಸತೀಶ ಜ್ಯೋತಿ, ಆಂಜನೇಯ ಅಣ್ಣಿಗೇರಿ, ರಾಮಪ್ಪ ನೂರಂದಪ್ಪನವರ, ಆಂಜನೇಯ ರಾಯರೆಡ್ಡಿ, ಕುಮಾರ ಪೂಜಾರ, ಸೋಮಪ್ಪ ರಾಯರೆಡ್ಡಿ, ಹನುಮಂತಪ್ಪ ಕುದರಿಹಾಳ, ಉಮೇಶ ಸಾರಥಿ, ಯಲ್ಲಪ್ಪ ತಿಗರಿ ಸೇರಿದಂತೆ ನೂರಾರು ರೈತರು ಪಾಲ್ಗೊಂಡಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ