ಆ್ಯಪ್ನಗರ

ನೂತನ ರೈಲ್ವೆ ಮಾರ್ಗಕ್ಕೆ ಒತ್ತಾಯ

ಅಕ್ಕಿಆಲೂರು: ಹಾವೇರಿ-ಅಕ್ಕಿಆಲೂರು-ಶಿರಸಿ ರೈಲ್ವೆ ಮಾರ್ಗದ ಮಂಜೂರಿಗೆ ಒತ್ತಡ ಹೆಚ್ಚುತ್ತಿದ್ದು, ಕೇಂದ್ರ ಸರಕಾರ ಕೂಡಲೇ ಈ ನಿಟ್ಟಿನಲ್ಲಿ ಗಮನ ಹರಿಸಿ, ಕ್ರಮ ಕೈಗೊಳ್ಳಬೇಕು. ನಿರ್ಲಕ್ಷ ್ಯ ವಹಿಸಿದರೆ ಪ್ರತಿಭಟನೆಗೆ ಮುಂದಾಗುವುದಾಗಿ ಹೋರಾಟಗಾರರು ಎಚ್ಚರಿಕೆ ನೀಡಿ, ಶನಿವಾರ ಧಾರವಾಡ ಸಂಸದ ಪ್ರಹ್ಲಾದ ಜೋಶಿ ಅವರಿಗೆ ಮನವಿ ಸಲ್ಲಿಸಿದರು.

Vijaya Karnataka 6 Jan 2019, 5:00 am
ಅಕ್ಕಿಆಲೂರು: ಹಾವೇರಿ-ಅಕ್ಕಿಆಲೂರು-ಶಿರಸಿ ರೈಲ್ವೆ ಮಾರ್ಗದ ಮಂಜೂರಿಗೆ ಒತ್ತಡ ಹೆಚ್ಚುತ್ತಿದ್ದು, ಕೇಂದ್ರ ಸರಕಾರ ಕೂಡಲೇ ಈ ನಿಟ್ಟಿನಲ್ಲಿ ಗಮನ ಹರಿಸಿ, ಕ್ರಮ ಕೈಗೊಳ್ಳಬೇಕು. ನಿರ್ಲಕ್ಷ ್ಯ ವಹಿಸಿದರೆ ಪ್ರತಿಭಟನೆಗೆ ಮುಂದಾಗುವುದಾಗಿ ಹೋರಾಟಗಾರರು ಎಚ್ಚರಿಕೆ ನೀಡಿ, ಶನಿವಾರ ಧಾರವಾಡ ಸಂಸದ ಪ್ರಹ್ಲಾದ ಜೋಶಿ ಅವರಿಗೆ ಮನವಿ ಸಲ್ಲಿಸಿದರು.
Vijaya Karnataka Web insist on new railway route
ನೂತನ ರೈಲ್ವೆ ಮಾರ್ಗಕ್ಕೆ ಒತ್ತಾಯ


ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ರೈಲ್ವೆ ಸಚಿವ ಪೀಯುಷ್‌ ಗೋಯಲ್‌, ಹಾವೇರಿ ಸಂಸದ ಶಿವಕುಮಾರ ಉದಾಸಿ ಸೇರಿದಂತೆ ಕೇಂದ್ರ ಮತ್ತು ರಾಜ್ಯ ಸರಕಾರಗಳಿಗೆ ಈ ಭಾಗದ ಜನತೆ ಮನವಿ ಸಲ್ಲಿಸಿ ನೂತನ ರೈಲ್ವೆ ಮಾರ್ಗದ ಮಂಜೂರಿಗೆ ಒತ್ತಾಯ ಪಡಿಸಿದರು.

ಮಲೆನಾಡ ಸೆರಗಿನಲ್ಲಿರುವ ಅಕ್ಕಿಆಲೂರು ಸ್ವಾತಂತ್ರ್ಯ ಪೂರ್ವದಿಂದಲೂ ವ್ಯಾಪಾರ-ವಹಿವಾಟಿಗೆ ಹೆಸರುವಾಸಿಯಾಗಿದ್ದು, ಅಂದಿನ ಕಾಲದಿಂದಲೇ ದೇಶದ ವಾಣಿಜ್ಯ ನಗರಿ ಮುಂಬಯಿಯೊಂದಿಗೆ ವ್ಯಾಪಾರದ ನಂಟು ಹೊಂದಿದೆ. ಇತ್ತೀಚಿನ ವರ್ಷಗಳಲ್ಲಿ ಜಿಲ್ಲೆಯ ಪ್ರಮುಖ ವಾಣಿಜ್ಯ ಹಾಗೂ ಸಾಂಸ್ಕೃತಿಕ ಕೇಂದ್ರವಾಗಿ ಬೆಳೆಯುತ್ತಿದ್ದು, ಕೃಷಿ ಉತ್ಪನ್ನಗಳಾದ ಅಡಿಕೆ, ಮಾವು, ಹತ್ತಿ, ಗೋವಿನಜೋಳ, ಭತ್ತ, ಕಬ್ಬು ಹೆಚ್ಚು ಬೆಳೆದು ದೇಶದ ಬೇರೆ ಬೇರೆ ನಗರಗಳಿಗೆ ಸರಬರಾಜು ಮಾಡಲಾಗುತ್ತಿದೆ. ಈ ಭಾಗದಿಂದ ಹಾವೇರಿ ಮತ್ತು ಶಿರಸಿಗೆ ಪ್ರತಿನಿತ್ಯ ಸಾವಿರಾರು ಸಂಖ್ಯೆಯ ವಿದ್ಯಾರ್ಥಿಗಳು, ಸಾರ್ವಜನಿಕರು ವಿವಿಧ ಕೆಲಸ-ಕಾರ್ಯಗಳಿಗೆ ತೆರಳುತ್ತಿದ್ದು, ಈ ಮಾರ್ಗದಲ್ಲಿ ರೈಲ್ವೆ ಸೇವೆ ಅಗತ್ಯ ದಿನೇ ದಿನೇ ಹೆಚ್ಚುತ್ತಿದೆ.

ಈ ಭಾಗದಲ್ಲಿ ವ್ಯಾಪಾರ ಮತ್ತು ಪ್ರವಾಸೋದ್ಯಮಕ್ಕೆ ಸಾಕಷ್ಟು ಅವಕಾಶಗಳಿದ್ದು, ರೈಲ್ವೆ ಸಂಪರ್ಕ ಜಾಲದ ವ್ಯವಸ್ಥೆ ಇಲ್ಲದೆ ಆರ್ಥಿಕ ಬೆಳವಣಿಗೆಗೆ ಗ್ರಹಣ ಹಿಡಿದಿದೆ. ಸುಪ್ರಸಿದ್ಧ ಶಿರಸಿ ಮಾರಿಕಾಂಬಾ ಜಾತ್ರೆ ಕಣ್ತುಂಬಿಕೊಳ್ಳಲು, ವಿಶ್ವಪ್ರಸಿದ್ಧ ಯಾಣ ಸವಿಯಲು, ಹಾನಗಲ್‌ ಲಿಂ.ಕುಮಾರ ಶಿವಯೋಗಿಗಳ ಪರಿಚಯ ಜಗತ್ತಿಗೆ ಆಗಬೇಕಾದರೆ ಹಾವೇರಿ-ಅಕ್ಕಿಆಲೂರು-ಶಿರಸಿ ರೈಲ್ವೆ ಮಾರ್ಗದ ಅವಶ್ಯವಿದೆ ಎಂದು ಮನವಿ ಮಾಡಿಕೊಳ್ಳಲಾಗಿದೆ.

ನೂತನ ರೈಲ್ವೆ ಮಾರ್ಗದಿಂದ ಆರ್ಥಿಕ ಉಳಿತಾಯವಾಗಲಿದ್ದು, ಪ್ರತಿನಿತ್ಯ ಹಾವೇರಿಯಿಂದ ಅಕ್ಕಿಆಲೂರು ಮಾರ್ಗವಾಗಿ ಶಿರಸಿಗೆ ಸಾವಿರಾರು ಕ್ವಿಂಟಾಲ್‌ ಕೃಷಿ ಉತ್ಪನ್ನಗಳು ಸೇರಿದಂತೆ ಇತರ ವಸ್ತುಗಳು ರಫ್ತಾಗುತ್ತಿವೆ. ಇಷ್ಟೊಂದು ಪ್ರಮಾಣದ ವಸ್ತುಗಳ ಸರಬರಾಜಿಗೆ ರೈಲ್ವೆ ಮಾರ್ಗದಿಂದ ಅನುಕೂಲವಾಗಲಿದ್ದು, ಸಂಚಾರಿ ವೆಚ್ಚದ ಹೊರೆಯೂ ಕಡಿಮೆಯಾಗಲಿದೆ. ಕಾರವಾರದ ಬಂದರಿಗೂ ನೂತನ ರೈಲ್ವೆ ಮಾರ್ಗದಿಂದ ಸಂಪರ್ಕ ಕಲ್ಪಿಸಿದಂತಾಗಲಿದ್ದು, ಸುತ್ತಲಿನ ಪ್ರದೇಶದ ಜನರಿಗೆ ಉದ್ಯೋಗಾವಕಾಶ ಸೃಷ್ಟಿಯಾಗಲಿದೆ. ವ್ಯಾಪಾರವೂ ಗಣನೀಯ ಪ್ರಮಾಣದಲ್ಲಿ ಅಭಿವೃದ್ಧಿ ಹೊಂದುವ ಸಾಧ್ಯತೆ ಹೆಚ್ಚಿದೆ. ಈ ಹಿನ್ನೆಲೆ ಎಲ್ಲ ಅಂಶಗಳನ್ನೂ ಪರಿಗಣಿಸಿ ಹಾವೇರಿ-ಅಕ್ಕಿಆಲೂರು-ಶಿರಸಿ ರೈಲ್ವೆ ಮಾರ್ಗ ಮಂಜೂರಿ ಮಾಡುವಂತೆ ಒತ್ತಾಯಿಸಲಾಗಿದೆ.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ