ಆ್ಯಪ್ನಗರ

ಅಂತಾರಾಷ್ಟ್ರೀಯ ಛಾಯಾಚಿತ್ರ ಸ್ಪರ್ಧೆ: ಚಂದ್ರುಗೆ ಚಿನ್ನದ ಪದಕ

ರಾಣೇಬೆನ್ನೂರ (ಹಾವೇರಿ): ತಾಲೂಕಿನ ವೆಂಕಟಾಪುರ ಗ್ರಾಮದ ಹವ್ಯಾಸಿ ಛಾಯಾಗ್ರಾಹಕ ಚಂದ್ರು ಶಿಡೇನೂರ ಕ್ಲಿಕ್ಕಿಸಿದ ಚಿತ್ರಕ್ಕೆ ಅಂತಾರಾಷ್ಟ್ರೀಯ ಛಾಯಾಚಿತ್ರ ಸ್ಪರ್ಧೆಯಲ್ಲಿ ಚಿನ್ನದ ಪದಕ ಲಭಿಸಿದೆ.

Vijaya Karnataka 11 Sep 2019, 5:00 am
ರಾಣೇಬೆನ್ನೂರ (ಹಾವೇರಿ): ತಾಲೂಕಿನ ವೆಂಕಟಾಪುರ ಗ್ರಾಮದ ಹವ್ಯಾಸಿ ಛಾಯಾಗ್ರಾಹಕ ಚಂದ್ರು ಶಿಡೇನೂರ ಕ್ಲಿಕ್ಕಿಸಿದ ಚಿತ್ರಕ್ಕೆ ಅಂತಾರಾಷ್ಟ್ರೀಯ ಛಾಯಾಚಿತ್ರ ಸ್ಪರ್ಧೆಯಲ್ಲಿ ಚಿನ್ನದ ಪದಕ ಲಭಿಸಿದೆ.
Vijaya Karnataka Web international photo competition gold medal for chandru
ಅಂತಾರಾಷ್ಟ್ರೀಯ ಛಾಯಾಚಿತ್ರ ಸ್ಪರ್ಧೆ: ಚಂದ್ರುಗೆ ಚಿನ್ನದ ಪದಕ

ಚಂದ್ರು ಅವರು ಅಳಲಗೇರಿ ಅರಣ್ಯ ಪ್ರದೇಶದಲ್ಲಿ 40ಕ್ಕೂ ಹೆಚ್ಚು ಚೇಳಿನ ಮರಿಗಳನ್ನು ತನ್ನ ಬೆನ್ನ ಮೇಲೆ ಹೊತ್ತು ಆಹಾರಕ್ಕಾಗಿ ಸಾಗುತ್ತಿದ್ದ ಸಂದರ್ಭದಲ್ಲಿ ಛಾಯಾಚಿತ್ರವನ್ನು ಸೆರೆ ಹಿಡಿದಿದ್ದರು. ಈ ಚಿತ್ರವನ್ನು ಅವರು ಗ್ಲೋಬಲ್‌ ಫೋಟೊಗ್ರಾಫಿಕ್‌ ಯುನಿಯನ್‌ ಹಾಗೂ ಫೋಟೊಗ್ರಾಫಿ ಸೊಸೈಟಿ ಆಫ್‌ ಅಮೆರಿಕಾ ಅವರ ಸಹಭಾಗಿತ್ವದಲ್ಲಿ ಪಶ್ಚಿಮ ಬಂಗಾಳದಲ್ಲಿ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಟ್ಟದ ಸ್ಪರ್ಧೆಗೆ ಕಳುಹಿಸಿದ್ದರು. ಅಲ್ಲಿ ಅದಕ್ಕೆ ಚಿನ್ನದ ಪದಕ ಲಭಿಸಿದೆ. ಇದಲ್ಲದೆ ಇದೇ ಚಿತ್ರಕ್ಕೆ ಮೂರನೇ ಅಲೊಕ್‌ರಾಯ್‌ ಇಂಟರ್‌ನ್ಯಾಷನಲ್‌ ಸ್ಯಾಲೋನ್‌ ಆಫ್‌ ಫೋಟೊಗ್ರಾಫಿ(ಕೋಲ್ಕತ್ತಾ) ಆಯೋಜಿಸಿದ್ದ ಛಾಯಾಚಿತ್ರ ಸ್ಪರ್ಧೆಯಲ್ಲೂ ಬೆಳ್ಳಿ ಪದಕ ಲಭಿಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ