Please enable javascript.ಉತ್ತಮ ಕೊಡುಗೆ ನೀಡಿದವರನ್ನು ಗೌರವಿಸುವುದು ಅಗತ್ಯ - It is necessary to better contribute to admire - Vijay Karnataka

ಉತ್ತಮ ಕೊಡುಗೆ ನೀಡಿದವರನ್ನು ಗೌರವಿಸುವುದು ಅಗತ್ಯ

ವಿಕ ಸುದ್ದಿಲೋಕ 7 Apr 2015, 5:00 am
Subscribe

ಅಕ್ಕಿಆಲೂರು:ಇಲ್ಲಿನ ಚನ್ನವೀರೇಶ್ವರ ಪ್ರಸಾದ ನಿಲಯ ಪಬ್ಲಿಕ್ ಟ್ರಸ್ಟ್ ಆಶ್ರಯದಲ್ಲಿ ಆಯೋಜಿಸಲಾಗಿದ್ದ ಸಮಾರಂಭದಲ್ಲಿ ನಿವತ್ತ ಬಿಸಿಎಂ ವಿಸ್ತೀರ್ಣಾಧಿಕಾರಿ

it is necessary to better contribute to admire
ಉತ್ತಮ ಕೊಡುಗೆ ನೀಡಿದವರನ್ನು ಗೌರವಿಸುವುದು ಅಗತ್ಯ
ಅಕ್ಕಿಆಲೂರು:ಇಲ್ಲಿನ ಚನ್ನವೀರೇಶ್ವರ ಪ್ರಸಾದ ನಿಲಯ ಪಬ್ಲಿಕ್ ಟ್ರಸ್ಟ್ ಆಶ್ರಯದಲ್ಲಿ ಆಯೋಜಿಸಲಾಗಿದ್ದ ಸಮಾರಂಭದಲ್ಲಿ ನಿವತ್ತ ಬಿಸಿಎಂ ವಿಸ್ತೀರ್ಣಾಧಿಕಾರಿ ಎನ್.ಎಂ.ಪೂಜಾರ ಮತ್ತು ಅಕ್ಕನ ಬಳಗದ ಮಾಜಿ ಅಧ್ಯಕ್ಷೆ ಲಲಿತಮ್ಮ ಪಾಟೀಲ ಅವರನ್ನು ಸನ್ಮಾನಿಸಲಾಯಿತು.

ಸಮಾರಂಭದ ಸಾನ್ನಿಧ್ಯ ವಹಿಸಿದ್ದ ಚನ್ನವೀರೇಶ್ವರ ವಿರಕ್ತಮಠದ ಶಿವಬಸವ ಸ್ವಾಮೀಜಿ ಆಶೀರ್ವಚನ ನೀಡಿ, ಸರ್ಕಾರದ ಕೆಲಸ ದೇವರ ಕೆಲಸಕ್ಕೆ ಸಮ. ಸರ್ಕಾರದ ಭಾಗವಾಗಿ ಸೇವೆ ಸಲ್ಲಿಸುವ ಅವಕಾಶ ಎಲ್ಲರಿಗೂ ಲಭಿಸುವುದಿಲ್ಲ. ಅವಕಾಶ ಲಭಿಸಿದವರೆಲ್ಲರೂ ನಿಸ್ವಾರ್ಥ ಸೇವಾ ಮನೋಭಾವನೆಯಿಂದ ಸೇವೆಯನ್ನೂ ಸಲ್ಲಿಸುವುದಿಲ್ಲ. ಇದರ ಮಧ್ಯೆ ಕೆಲವರು ಒಳ್ಳೆಯ ಕಾರ್ಯಗಳ ಮೂಲಕ ಜನಾನುರಾಗಿಗಳಾಗಿರುತ್ತಾರೆ ಎಂದು ನುಡಿದ ಅವರು ಸಮಾಜಕ್ಕೆ ಒಂದಿಷ್ಟು ಉತ್ತಮ ಕೊಡುಗೆಗಳನ್ನು ನೀಡಿರುವವರನ್ನು ಗುರುತಿಸಿ, ಗೌರವಿಸುವುದು ಅಗತ್ಯ ಎಂದರು.

ಸಮ್ಮುಖ ವಹಿಸಿದ್ದ ಮುತ್ತಿನಕಂತಿಮಠ ಗುರುಪೀಠದ ನಿಯೋಜಿತ ಉತ್ತರಾಧಿಕಾರಿ ಚಂದ್ರಶೇಖರ ದೇವರು ಆಶೀರ್ವಚನ ನೀಡಿ, ನಾವು ಯಾವುದೇ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದರೂ ಕೂಡ ಒಂದಿಷ್ಟು ಉತ್ತಮ ವೌಲ್ಯಗಳನ್ನು ಅಳವಡಿಸಿಕೊಳ್ಳುವುದು ಮುನ್ನಡೆಯುವ ಅಗತ್ಯವಿದೆ. ವೌಲ್ಯಗಳಿಲ್ಲದ ಸೇವೆ ಭಗವಂತನಿಗೆ ಪ್ರಿಯ ಎನಿಸುವುದಿಲ್ಲ ಎಂದರು.

ಪ್ರಸಾದ ನಿಲಯ ಪಬ್ಲಿಕ್ ಟ್ರಸ್ಟ್ ಅಧ್ಯಕ್ಷ ಎನ್.ಸಿ.ಪಾವಲಿ ಅಧ್ಯಕ್ಷತೆ ವಹಿಸಿದ್ದರು. ಗೀತಾ ಅಂಕಸಖಾನಿ, ಲತಾ ದುರ್ಗದ, ಸಿ.ಸಿ.ಬೆಲ್ಲದ, ಎಸ್.ಎಂ.ಸಿಂಧೂರ, ರಾಜಣ್ಣ ಅಂಕಸಖಾನಿ, ಜಯಶ್ರೀ ಜಳಕಿ, ಸುಜಾತಾ ಕೊಲ್ಲಾವರ, ನಂದಿನಿ ವಿರುಪಣ್ಣನವರ, ಎಸ್.ಜಿ.ಮೋಟಗಿ, ವಸಂತ ಚಿಕ್ಕಣ್ಣನವರ ಉಪಸ್ಥಿತರಿದ್ದರು.
ಕಾಮೆಂಟ್‌ ಮಾಡಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ