ಆ್ಯಪ್ನಗರ

ಇದು ಬಿಸಿಪಿ, ಅರುಣೋದಯ ಸಮಯ

ರಟ್ಟೀಹಳ್ಳಿ: ನಾನು ಜನರನ್ನು ಮರಳು ಮಾಡಿ ಮಾತನಾಡಲ್ಲ. ನಾನು ಕೊಟ್ಟ ಭರವಸೆ ಈಡೇರಿಸುತ್ತೇನೆ. ಈ ಉಪ ಚುನಾವಣೆಯಲ್ಲಿ15 ಕ್ಷೇತ್ರದಲ್ಲಿಯೂ ಬಿಜೆಪಿ ಗೆಲುವು ಪಡೆಯುತ್ತದೆ ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದರು.

Vijaya Karnataka 25 Nov 2019, 5:00 am
ರಟ್ಟೀಹಳ್ಳಿ: ನಾನು ಜನರನ್ನು ಮರಳು ಮಾಡಿ ಮಾತನಾಡಲ್ಲ. ನಾನು ಕೊಟ್ಟ ಭರವಸೆ ಈಡೇರಿಸುತ್ತೇನೆ. ಈ ಉಪ ಚುನಾವಣೆಯಲ್ಲಿ15 ಕ್ಷೇತ್ರದಲ್ಲಿಯೂ ಬಿಜೆಪಿ ಗೆಲುವು ಪಡೆಯುತ್ತದೆ ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದರು.
Vijaya Karnataka Web 24 RATTIHALLI   4,,,4_23
ರಟ್ಟೀಹಳ್ಳಿಯಲ್ಲಿಭಾನುವಾರ ನಡೆದ ಬಿಜೆಪಿ ಬಹಿರಂಗ ಪ್ರಚಾರ ಸಭೆಯನ್ನು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಸಸಿಗೆ ನೀರುಣಿಸುವ ಮೂಲಕ ಉದ್ಘಾಟಿಸಿದರು.


ರಟ್ಟೀಹಳ್ಳಿ ಪಟ್ಟಣದಲ್ಲಿಬಿಜೆಪಿ ಅಭ್ಯರ್ಥಿ ಬಿ.ಸಿ.ಪಾಟೀಲ ಪರ ಭಾನುವಾರ ಬಿರುಸಿನ ಪ್ರಚಾರ ನಡೆಸಿದ ಅವರು, ಯು.ಬಿ.ಬಣಕಾರ ಮತ್ತು ಬಿ.ಸಿ.ಪಾಟೀಲ್‌ ಒಟ್ಟಿಗೆ ಇದ್ದಮೇಲೆ ಇಲ್ಲಿನ ಪೈಪೋಟಿ ಹೇಗಿರಬೇಕೆಂದರೆ 30-35 ಸಾವಿರ ಮತಗಳ ಅಂತರದಿಂದ ಗೆಲ್ಲಿಸಬೇಕು. ಇಲ್ಲದಿದ್ದರೆ ನೀವು ಯು.ಬಿ.ಬಣಕಾರರಿಗೆ ಮಾಡಿದ ಅವಮಾನವಾಗುತ್ತದೆ. ಮತ ಏಣಿಕೆ ಪ್ರಾರಂಭಗೊಳ್ಳುತ್ತಿದ್ದಂತೆ ಪ್ರತಿಪಕ್ಷದ ಅಭ್ಯರ್ಥಿಗಳು ಕೌಂಟಿಂಗ್‌ ಹಾಲಿನಿಂದ ಓಡಿಹೋಗಬೇಕು. ಆ ರೀತಿ ಬಿಜೆಪಿಗೆ ಮತ ನೀಡಬೇಕು ಎಂದು ಹೇಳಿದರು.

ಹಗುರ ಮಾತಿಗೆ ತಕ್ಕ ಉತ್ತರ ಕೊಡಿ:
ಹಗುರವಾಗಿ ಮಾತನಾಡುವ ಕಾಂಗ್ರೆಸ್‌, ಜೆಡಿಎಸ್‌ಗೆ ಜನರು ಚುನಾವಣೆಯಲ್ಲಿತಕ್ಕ ಉತ್ತರ ಕೊಡಬೇಕು. ಶಿಕಾರಿಪುರಕ್ಕಿಂತ ಒಳ್ಳೆಯ ರೀತಿಯಲ್ಲಿಈ ತಾಲೂಕನ್ನು ಅಭಿವೃದ್ಧಿ ಮಾಡುತ್ತೆನೆ. ಹಾವೇರಿ ಮೆಡಿಕಲ್‌ ಕಾಲೇಜ್‌ಗೆ ಹಣ ನೀಡಲಾಗಿದೆ. ಆದಷ್ಟು ಬೇಗ ಪೂರ್ಣ ಮಾಡಲಾಗುವುದು. ಈ ಕ್ಷೇತ್ರಕ್ಕೆ ಅನುದಾನ ಕೊಟ್ಟಿದ್ದೆನೆ. ಮುಂದೇನೂ ಕೊಡುತ್ತೆನೆ. ಮಾದರಿ ತಾಲೂಕನ್ನಾಗಿ ಅಭಿವೃದ್ಧಿಪಡಿಸುತ್ತೇನೆ ಎಂದರು.

ಗೃಹ ಸಚಿವ ಬಸವರಾಜ ಬೊಮ್ಮಾಯಿ ಮಾತನಾಡಿ, ಬಣಕಾರ ಹಾಗೂ ಬಿ.ಸಿ.ಪಾಟೀಲರು ಜೋಡೆತ್ತುಗಳಂತೆ ಈ ತಾಲೂಕಿನಲ್ಲಿಮತಯಾಚನೆ ಮಾಡುತ್ತಿದ್ದಾರೆ. ತಾಲೂಕಿನ ಸ್ವಾಭಿಮಾನ ಉಳಿಸಲು ಪಾಟೀಲರನ್ನು ಗೆಲ್ಲಿಸಬೇಕೆಂದು ಮನವಿ ಮಾಡಿದರು.

ಡಿಸಿಎಂ ಗೋವಿಂದ ಕಾರಜೋಳ ಮಾತನಾಡಿ, ಇಬ್ಬರೂ ನಾಯಕರು ಒಂದಾಗಿದ್ದರಿಂದ ಬಿಜೆಪಿ ಅಭ್ಯರ್ಥಿ ಗೆಲುವು ಪಡೆಯುವುದು ಖಚಿತವಾಗಿದೆ ಎಂದರು.

ಮಾಜಿ ಸಚಿವ ಬಾಬುರಾವ್‌ ಚಿಂಚನಸೂರ ಮಾತನಾಡಿ, ಕಾಂಗ್ರೆಸ್‌ ಸ್ಥಿತಿ ಹೀನಾಯವಾಗಿದೆ. ಸಿದ್ದರಾಮಯ್ಯ ಸ್ಥಿತಿ ಕುಂದಿದೆ. ಹಿರೇಕೆರೂರಲ್ಲಿಸಿದ್ದರಾಮಯ್ಯ ಕುದುರೆ ಓಡಲ್ಲ. ಯಡಿಯೂರಪ್ಪನವರ ಕುದುರೆ ಓಡುತ್ತದೆ. ಬಿ.ಸಿ.ಪಾಟೀಲರು ಶಾಸಕರಾಗಿ ಮಂತ್ರಿಯಾಗಿ ಬರುತ್ತಾರೆ ಎಂದು ಹೇಳಿದರು.

ಸೊರಬ ಶಾಸಕ ಕುಮಾರ ಬಂಗಾರಪ್ಪ, ಮಾಜಿ ಶಾಸಕ ಯು.ಬಿ.ಬಣಕಾರ, ಬಿಜೆಪಿ ಅಭ್ಯರ್ಥಿ ಬಿ.ಸಿ.ಪಾಟೀಲ್‌ ಮಾತನಾಡಿದರು. ತಾಲೂಕಾಧ್ಯಕ್ಷ ಎಸ್‌.ಆರ್‌.ಅಂಗಡಿ, ಶಾಸಕ ನೆಹರು ಓಲೇಕಾರ, ಸಂಸದರಾದ ಶಿವಕುಮಾರ ಉದಾಸಿ, ಬಿ.ವೈ.ರಾಘವೇಂದ್ರ, ವಿಧಾನ ಪರಿಷತ್‌ ಸದಸ್ಯ ಕೆ.ಪಿ.ನಂಜುಂಡಿ, ಶಾಸಕ ವಿರುಪಾಕ್ಷಪ್ಪ ಬಳ್ಳಾರಿ, ಮಂಜುನಾಥ ಕುನ್ನೂರು, ಪ್ರದೀಪ ಶೆಟ್ಟರ, ಎಸ್‌.ವಿ.ಸಂಕನೂರು, ಮಹೇಶ ತೆಂಗಿನಕಾಯಿ, ಡಿ.ಎಂ.ಸಾಲಿ, ಎನ್‌.ಎಂ.ಈಟೇರ, ಎಸ್‌.ಎಸ್‌.ಪಾಟೀಲ, ಲಿಂಗರಾಜ ಚಪ್ಪರದಹಳ್ಳಿ ಸೇರಿದಂತೆ ಹಲವು ಮುಖಂಡರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ