ಆ್ಯಪ್ನಗರ

ಕನ್ನಡ ನಿತ್ಯೋತ್ಸವವಾಗಲಿ

ರಾಣೇಬೆನ್ನೂರ : ಕನ್ನಡ ಭಾಷೆ ಅಮರವಾಗಬೇಕಾದರೆ ರಾಜ್ಯೋತ್ಸವಕ್ಕೆ ಸೀಮಿತವಾಗದೆ ಕನ್ನಡಿಗರ ಮನೆ-ಮನದಲ್ಲಿಯೂ ನಿತ್ಯ ಬಳಕೆ ಮೂಲಕ ನಿತ್ಯೋತ್ಸವವಾಗಬೇಕು ಎಂದು ಸರ್ವಾಧ್ಯಕ್ಷ ಎಂ.ಬಿ.ಹುಲಗಮ್ಮನವರ ಹೇಳಿದರು.

Vijaya Karnataka 24 Feb 2019, 5:00 am
ರಾಣೇಬೆನ್ನೂರ : ಕನ್ನಡ ಭಾಷೆ ಅಮರವಾಗಬೇಕಾದರೆ ರಾಜ್ಯೋತ್ಸವಕ್ಕೆ ಸೀಮಿತವಾಗದೆ ಕನ್ನಡಿಗರ ಮನೆ-ಮನದಲ್ಲಿಯೂ ನಿತ್ಯ ಬಳಕೆ ಮೂಲಕ ನಿತ್ಯೋತ್ಸವವಾಗಬೇಕು ಎಂದು ಸರ್ವಾಧ್ಯಕ್ಷ ಎಂ.ಬಿ.ಹುಲಗಮ್ಮನವರ ಹೇಳಿದರು.
Vijaya Karnataka Web HVR-23RNR3
ಸಮ್ಮೇಳನ ಸರ್ವಾಧ್ಯಕ್ಷ ಎಂ.ಬಿ.ಹುಲಗಣ್ಣನವರ ಮಾತನಾಡಿದರು.


ಸಮ್ಮೇಳನದಲ್ಲಿ ಮಾತನಾಡಿದ ಅವರು, ಔದ್ಯೋಗಿಕ ಕ್ಷೇತ್ರಗಳ ಅಗತ್ಯ ಮತ್ತು ಅನಿವಾರ್ಯ ಸಮಯದಲ್ಲಿ ಇಂಗ್ಲಿಷ್‌ ಭಾಷೆ ಬಳಸಿಕೊಂಡು ಉಳಿದೆಡೆ ಹೆಚ್ಚಾಗಿ ಕನ್ನಡದಲ್ಲಿಯೇ ವ್ಯವಹರಿಸುವ ಮನೋಭಾವವನ್ನು ಎಲ್ಲರೂ ರೂಢಿಸಿಕೊಳ್ಳಬೇಕು. ಶಿಕ್ಷ ಣದಲ್ಲಿ ಕನ್ನಡ ಮಾಧ್ಯಮವಾಗಿ ಕನಿಷ್ಠ ಪ್ರಾಥಮಿಕ ಹಂತದವರೆಗಾದರೂ ಕನ್ನಡ ಅಳವಡಿಕೆಗೆ ಪ್ರೋತ್ಸಾಹ ಹಾಗೂ ಅವಕಾಶಗಳನ್ನು ಸರಕಾರ ಒದಗಿಸಿಕೊಡಬೇಕು ಎಂದರು.

ರಾಣೇಬೆನ್ನೂರ ತಾಲೂಕು ವಾಣಿಜ್ಯ ಕೇಂದ್ರವಾಗಿದೆ. ಬೀಜೋತ್ಪಾದನೆಗೆ ರಾಷ್ಟ್ರ-ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಹೊಂದಿದೆ. ಸಾಹಿತ್ಯ ಕ್ಷೇತ್ರದಲ್ಲಿ ಹೆಳವನಕಟ್ಟೆ ಗಿರಿಯಮ್ಮ, ಮೇಡ್ಲೇರಿಯ ವಚನಕಾರ ಶಿವಲಿಂಗ, ಸು.ರಂ.ಯಕ್ಕುಂಡಿ, ಕೆ.ಎಫ್‌.ಪಾಟೀಲ, ಚಿದಂಬರ ದೀಕ್ಷಿತ, ನಾಡೋಜ ಪಾಪು ಸೇರಿದಂತೆ ಇತರರ ಸೇವೆ ಸ್ಮರಣೀಯ. ಕನ್ನಡ ಸಾಹಿತ್ಯ ರಚನೆಯಲ್ಲಿ ಮೊದಲಿನ ಬದ್ಧತೆ, ಶ್ರದ್ಧೆ, ಶ್ರಮ ಹಾಗೂ ಶಕ್ತಿ ಇಂದು ಕಾಣುತ್ತಿಲ್ಲ. ಇಂದು ಆಂಗ್ಲ ಭಾಷೆ ಪ್ರಭಾವ ಮತ್ತು ಆರ್ಭಟಗಳ ಮಧ್ಯೆ ಕನ್ನಡ ನಡುಗುತ್ತಿದೆ. ಕನ್ನಡಮ್ಮ ಚಿಂತಿತಳಾಗಿದ್ದಾಳೆ. ತನ್ನ ಹಾಗೂ ಮಕ್ಕಳ ಬಗ್ಗೆ ಶೋಚನೀಯತೆಗೆ ಅಕ್ಷ ರಶಃ ಕಣ್ಣೀರಾಗಿದ್ದಾಳೆ. ಕನ್ನಡಿಗರ ಇಚ್ಛಾಶಕ್ತಿ ಕೊರತೆಯಿಂದ ಇಂದಿನ ದಿನದಲ್ಲಿ ಕನ್ನಡ ಉಳಿಸಲು ಹೋರಾಡುವ ಸ್ಥಿತಿ ನಿರ್ಮಾಣವಾಗಿದೆ ಎಂದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ