ಆ್ಯಪ್ನಗರ

ಕನ್ನಡ ಸ್ವಂತಿಕೆ ಭಾಷೆ, ಬದುಕಿನ ಚಾಲನಾ ಶಕ್ತಿ

ಹಾವೇರಿ: ಕನ್ನಡ ಶ್ರೀಮಂತ ಭಾಷೆಯಾಗಿದ್ದು, ಸ್ವಂತಿಕೆಯಿಂದ ಬೆಳೆದು ನಿಂತ ಭಾಷೆಯಾಗಿದೆ. ಕನ್ನಡ ನಮ್ಮ ನಿಮ್ಮೆಲ್ಲರ ಬದುಕಿಗೆ ಚಾಲನಾ ಶಕ್ತಿ ನೀಡುವುದಾಗಿದೆ. ಕನ್ನಡಿಗರ ಬದುಕಿಗೆ ಶಕ್ತಿಯನ್ನು ತುಂಬುವ ಕೆಲಸ ಕನ್ನಡ ಸಾಹಿತ್ಯ ಸಮ್ಮೇಳನಗಳಿಂದ ಆಗಬೇಕು ಎಂದು ಗೃಹ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.

Vijaya Karnataka 28 Jan 2020, 5:00 am
ಹಾವೇರಿ: ಕನ್ನಡ ಶ್ರೀಮಂತ ಭಾಷೆಯಾಗಿದ್ದು, ಸ್ವಂತಿಕೆಯಿಂದ ಬೆಳೆದು ನಿಂತ ಭಾಷೆಯಾಗಿದೆ. ಕನ್ನಡ ನಮ್ಮ ನಿಮ್ಮೆಲ್ಲರ ಬದುಕಿಗೆ ಚಾಲನಾ ಶಕ್ತಿ ನೀಡುವುದಾಗಿದೆ. ಕನ್ನಡಿಗರ ಬದುಕಿಗೆ ಶಕ್ತಿಯನ್ನು ತುಂಬುವ ಕೆಲಸ ಕನ್ನಡ ಸಾಹಿತ್ಯ ಸಮ್ಮೇಳನಗಳಿಂದ ಆಗಬೇಕು ಎಂದು ಗೃಹ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.
Vijaya Karnataka Web kannada is the language of originality the driving force of life
ಕನ್ನಡ ಸ್ವಂತಿಕೆ ಭಾಷೆ, ಬದುಕಿನ ಚಾಲನಾ ಶಕ್ತಿ


ನಗರದ ರಜನಿ ಸಭಾಂಗಣದಲ್ಲಿಕಾದಂಬರಿ ಪಿತಾಮಹ ಗಳಗನಾಥರ ವೇದಿಕೆಯಲ್ಲಿಸೋಮವಾರ ಜಿಲ್ಲಾ12ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಇಂದು ಕನ್ನಡ ಭಾಷೆ ಇಂಟರ್‌ನೆಟ್‌ನಲ್ಲಿಅಳವಡಿಸಲಾಗಿದ್ದು, ಪ್ರತಿಯೊಬ್ಬರು ತಂತ್ರಾಂಶದಲ್ಲಿಕನ್ನಡ ಬಳಕೆ ಮಾಡಿ ಭಾಷೆಯನ್ನು ಎತ್ತರಕ್ಕೆ ಬೆಳೆಸೋಣ. ಗಡಿ ಭಾಗದಲ್ಲಿಕನ್ನಡ ಭಾಷೆಯ ಸಮಸ್ಯೆಯನ್ನು ಇತ್ಯರ್ಥ ಮಾಡಲಾಗುತ್ತದೆ ಎಂದು ಹೇಳಿದರು.

ರಾಜ್ಯದಲ್ಲಿಇಂದು ಮಹಾದಾಯಿ ನೀರು ಹಂಚಿಕೆ, ಬೆಳಗಾವಿ ಗಡಿ ವಿವಾದ ಸೇರಿದಂತೆ ಹಲವಾರು ಸವಾಲುಗಳನ್ನು ಎದುರಿಸುತ್ತಿದ್ದು, ಆದಷ್ಟು ಬೇಗ ಎಲ್ಲಸಮಸ್ಯೆಗಳು ಬಗೆಹರಿಸಲು ರಾಜ್ಯ ಸರಕಾರ ಪ್ರಾಮಾಣಿಕ ಪ್ರಯತ್ನ ಮಾಡಲಿದೆ ಎಂದರು.

ಶಾಸಕ ಬಿ.ಸಿ. ಪಾಟೀಲ ಮಾತನಾಡಿ, ಸಮ್ಮೇಳನ ಎನ್ನುವುದು ಕೆಲವರಿಗೆ ಮಾತ್ರ ಎಂಬ ಭಾವನೆ ಜನರಲ್ಲಿಮೂಡಿದೆ. ಕನ್ನಡ ಸಾಹಿತ್ಯ ಸಮ್ಮೇಳನ ಎನ್ನುವುದು ಪ್ರತಿಯೊಬ್ಬರು ಆಚರಣೆ ಮಾಡಬೇಕಾಗಿದೆ. ಎಲ್ಲರೂ ಕನ್ನಡ ಪ್ರೀತಿಸುವ ಬೆಳೆಸುವ ಕಾರ್ಯವಾಗಬೇಕು ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಶಾಸಕ ನೆಹರು ಓಲೇಕಾರ ಮಾತನಾಡಿ, ಮುಂದಿನ ವರ್ಷ ಅಖಿಲ ಕನ್ನಡ ಸಾಹಿತ್ಯ ಸಮ್ಮೇಳನ ಹಾವೇರಿಯಲ್ಲಿನಡೆಯುತ್ತದೆ. ಇದಕ್ಕೆ ಎಲ್ಲರೂ ಕೈಜೋಡಿಸಬೇಕು ಎಂದು ಹೇಳಿದರು.

ಈ ವೇಳೆ ವಿವಿಧ ಕ್ಷೇತ್ರಗಳಲ್ಲಿಸಾಧನೆ ಮಾಡಿದ ಸಾಧಕರಿಗೆ ಸನ್ಮಾನಿಸಿ ಗೌರವಿಸಲಾಯಿತು. 8 ಪುಸ್ತಕಗಳ ಬಿಡುಗಡೆ ಮಾಡಲಾಯಿತು. ಹುಕ್ಕೇರಿಮಠದ ಸಾದಾಶಿವ ಸ್ವಾಮೀಜಿ, ಹೊಸಮಠದ ಬಸವ ಶಾಂತಲಿಂಗ ಸ್ವಾಮೀಜಿ, ಬಣ್ಣದಮಠದ ಅಭಿನವರುದ್ರ ಚನ್ನಮಲ್ಲಿಕಾರ್ಜುನ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ, ಮಾಜಿ ಶಾಸಕರಾದ ಯು.ಬಿ. ಬಣಕಾರ, ಶಿವರಾಜ ಸಜ್ಜನರ, ಸಿದ್ಧರಾಜ ಕಲಕೋಟಿ, ಕೋಟ್ರೇಶಪ್ಪ ಬಸೇಗಣ್ಣಿ, ಪ್ರಕಾಶ ಶೆಟ್ಟಿ, ಜನಪ್ರತಿನಿಧಿಗಳು, ಸಾಹಿತಿಗಳು, ಕನ್ನಡಾಭಿಮಾನಿಗಳು ಸೇರಿದಂತೆ ಉಪಸ್ಥಿತರಿದ್ದರು.

ಕಸಪ ಜಿಲ್ಲಾಧ್ಯಕ್ಷ ಲಿಂಗಯ್ಯ ಹಿರೇಮಠ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಮತಾ ನಂದಿಹಳ್ಳಿ ಪ್ರಾರ್ಥಿಸಿದರು. ಎಸ್‌.ಎಸ್‌. ಬೇವಿನಮರದ ಸ್ವಾಗತಿಸಿದರು. ನಾಗರಾಜ ನಡುವಿನಮಠ, ನಾಗರಾಜ ದೇಸಳ್ಳಿ ನಿರೂಪಿಸಿದರು. ಬಿ.ಪಿ ಶಿಡೇನೂರ ವಂದಿಸಿದರು.

ಸಾಹಿತ್ಯ ಭವನ ನಿರ್ಮಾಣ: ಜಿಲ್ಲೆಯಲ್ಲಿಸಾಹಿತಿಗಳಿಗೆ ಸಾಹಿತ್ಯ ಭವನ ಕೊರತೆ ಇದ್ದು, ಸಾಹಿತ್ಯ ಭವನಕ್ಕೆ ನಗರಾಭಿವೃದ್ಧಿ ಪ್ರಾಧಿಕಾರದಿಂದ 7 ಗುಂಟೆ ಜಾಗ ಮೀಸಲಿದ್ದು, ಭವನ ನಿರ್ಮಾಣಕ್ಕಾಗಿ ಸಿಎಂ ಜೊತೆಗೆ ಚರ್ಚಿಸಿ ಬಜೆಟ್‌ನಲ್ಲಿ2 ಕೋಟಿ ರೂ. ಅನುದಾನ ಬಿಡುಗಡೆ ಮಾಡಿಸುವ ಕೆಲಸ ಮಾಡುತ್ತೇನೆ ಎಂದು ಬೊಮ್ಮಾಯಿ ಭರವಸೆ ನೀಡಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ