ಆ್ಯಪ್ನಗರ

ಸಮಾನತೆ ಸಾರಿದ ಅರಸು

ಹಿರೇಕೆರೂರು: ಮಾದರಿ ರಾಜ್ಯ ಕನಸು ಕಂಡು ಸಮಾಜದಲ್ಲಿ ಸಮಾನತೆ ಸಾರಿದ ಮಾಜಿ ಸಿಎಂ ಡಿ.ದೇವರಾಜ ಅರಸು ಪೂಜೆಗೆ ಅರ್ಹರು ಎಂದು ತಹಸೀಲ್ದಾರ್‌ ಆರ್‌.ಹೆಚ್‌.ಭಾಗವಾನ್‌ ಹೇಳಿದರು.

Vijaya Karnataka 21 Aug 2019, 5:00 am
ಹಿರೇಕೆರೂರು: ಮಾದರಿ ರಾಜ್ಯ ಕನಸು ಕಂಡು ಸಮಾಜದಲ್ಲಿ ಸಮಾನತೆ ಸಾರಿದ ಮಾಜಿ ಸಿಎಂ ಡಿ.ದೇವರಾಜ ಅರಸು ಪೂಜೆಗೆ ಅರ್ಹರು ಎಂದು ತಹಸೀಲ್ದಾರ್‌ ಆರ್‌.ಹೆಚ್‌.ಭಾಗವಾನ್‌ ಹೇಳಿದರು.
Vijaya Karnataka Web king of equality
ಸಮಾನತೆ ಸಾರಿದ ಅರಸು


ಅವರು ಮಂಗಳವಾರ ಪಟ್ಟಣದ ತಹಸೀಲ್ದಾರ್‌ ಕಚೇರಿಯಲ್ಲಿ ರಾಷ್ಟ್ರೀಯ ಹಬ್ಬಗಳ ಸಮಿತಿ ಆಶ್ರಯದಲ್ಲಿ ಏರ್ಪಡಿಸಿದ್ದ ಡಿ.ದೇವರಾಜ ಅರಸು ಜಯಂತ್ಯುತ್ಸವ ಉದ್ಘಾಟಿಸಿ ಮಾತನಾಡಿ, ಅರಸು ಅವರು ರಾಜ್ಯದಲ್ಲಿ ಭೂಸುಧಾರಣೆ ತರುವ ಮೂಲಕ ರೈತರ ಆಶಾ ಕಿರಣವಾದರು ಎಂದರು.

ಜಿಪಂ ಸದಸ್ಯೆ ಸುಮಿತ್ರಾ ಪಾಟೀಲ್‌ ಮಾತನಾಡಿ, ಇಂತಹ ಪುಣ್ಯ ಪುರುಷನ ಜಯಂತ್ಯುತ್ಸವಕ್ಕೆ ತಾಲೂಕ ಮಟ್ಟದ ಅನುಷ್ಠಾನ ಅಧಿಕಾರಿಗಳು ಗೈರುಹಾಜರಾಗಿದ್ದು, ಅವರಿಗೆ ನೋಟಿಸ್‌ ನೀಡುವಂತೆ ಸೂಚಿಸಿದರು.

ತಾಪಂ ಅಧ್ಯಕ್ಷ ಹೇಮಣ್ಣ ಮುದಿರೆಡ್ಡಿ ಅಧ್ಯಕ್ಷ ತೆವಹಿಸಿ ಮಾತನಾಡಿದರು. ಡಾ.ಎಸ್‌.ಪಿ.ಗೌಡರ್‌ ಉಪನ್ಯಾಸ ನೀಡಿದರು. ಇಒ ಹೆಚ್‌.ಜಿ.ಶ್ರೀನಿವಾಸ್‌ ಪ್ರತಿಜ್ಞಾ ವಿಧಿ ಬೋಧಿಸಿದರು. ಶಿರಸ್ತೇದಾರ ಜಿ.ಎನ್‌.ಶೆಟ್ಟರ ಪ್ರಾಸ್ತಾವಿಕವಾಗಿ ಮಾತನಾಡಿದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ