ಆ್ಯಪ್ನಗರ

ಕಾನೂನು ತಿಳಿವಳಿಕೆ ಅತ್ಯಗತ್ಯ

ಹಾನಗಲ್ಲ: ಎಲ್ಲರಲ್ಲೂ ಕಾನೂನು ತಿಳಿವಳಿಕೆ ಬೇಕು. ಕಾನೂನು ಗೌರವಿಸುವುದರಿಂದ ಸುರಕ್ಷಿತ ಜೀವನ ಸಾಧ್ಯವಾಗಲಿದೆ ಎಂದು ಹಾನಗಲ್ಲ ಸಿವಿಲ್‌ ನ್ಯಾಯಾಧೀಶ ಬಾಳಪ್ಪ ಜರಗು ನುಡಿದರು.

Vijaya Karnataka 15 May 2019, 5:00 am
ಹಾನಗಲ್ಲ: ಎಲ್ಲರಲ್ಲೂ ಕಾನೂನು ತಿಳಿವಳಿಕೆ ಬೇಕು. ಕಾನೂನು ಗೌರವಿಸುವುದರಿಂದ ಸುರಕ್ಷಿತ ಜೀವನ ಸಾಧ್ಯವಾಗಲಿದೆ ಎಂದು ಹಾನಗಲ್ಲ ಸಿವಿಲ್‌ ನ್ಯಾಯಾಧೀಶ ಬಾಳಪ್ಪ ಜರಗು ನುಡಿದರು.
Vijaya Karnataka Web HVR-14HGL2


ತಾಲೂಕಿನ ಗೆಜ್ಜಿಹಳ್ಳಿ ಗ್ರಾಮದಲ್ಲಿ ಮಂಗಳವಾರ ಕಾನೂನು ಸಾಕ್ಷ ರತಾ ರಥ ಸಂಚಾರದ ಕಾರ್ಯಕ್ರಮದ ಅಂಗವಾಗಿ ನಡೆದ ಕಾನೂನು ಅರಿವು ನೆರವು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಸುಶಿಕ್ಷಿತ ಸಮಾಜ ನಿರ್ಮಾಣದಿಂದ ಮಾತ್ರ ದೇಶದ ಪ್ರಗತಿ ಸಾಧ್ಯವಿದೆ. ಕಾನೂನು ಸಾಕ್ಷ ರತಾ ರಥ ಯಾತ್ರೆಯ ಮೂಲಕ ಗ್ರಾಮೀಣ ಭಾಗದಲ್ಲಿ ಕಾನೂನುಗಳ ಜ್ಞಾನ ಮೂಡಿಸಿ, ಅಶಕ್ತರು, ಬಡವರು, ಅಸಹಾಯಕರು, ಮಹಿಳೆಯರಿಗೆ ಉಚಿತ ಕಾನೂನು ನೆರವು ಸೌಲಭ್ಯದ ಮಾಹಿತಿ ನೀಡಲಾಗುತ್ತಿದೆ. ಕಾನೂನು ವಿಷಯದಲ್ಲಿ ಇರುವ ಗೊಂದಲಗಳನ್ನು ತಿಳಿಗೊಳಿಸುವ ಪ್ರಯತ್ನ ಮಾಡಲಾಗುತ್ತಿದೆ ಎಂದರು.

ವಕೀಲರ ಸಂಘದ ಅಧ್ಯಕ್ಷ ಸೋಮಶೇಖರ ಕೊತಂಬರಿ ಮಾತನಾಡಿ, ಕಾನೂನು ತಿಳುವಳಿಕೆಯ ಕೊರತೆಯಿಂದ ಅಪರಾಧ ಘಟಿಸಿದರೆ, ಇದಕ್ಕೆ ಕ್ಷ ಮೆ ಇಲ್ಲ, ಪ್ರತಿಯೊಬ್ಬರೂ ದೇಶದ ಸಾಮಾನ್ಯ ಕಾನೂನುಗಳನ್ನು ತಿಳಿದುಕೊಳ್ಳುವುದು ಅಗತ್ಯವಾಗಿದೆ. ಸಂವಿಧಾನದ ಆಶಯದಂತೆ ನಮ್ಮ ಹಕ್ಕುಗಳ ಜೊತೆಯಲ್ಲಿ ಕರ್ತವ್ಯಗಳ ಜವಾಬ್ದಾರಿಯೂ ಬೇಕು ಎಂದರು.

ಸಾಮಾನ್ಯ ಕಾನೂನುಗಳ ಬಗ್ಗೆ ಉಪನ್ಯಾಸ ನೀಡಿದ ಹಿರಿಯ ವಕೀಲ ಕೆ.ಬಿ.ದೊಡ್ಡಮನಿ, ಕೌಟುಂಬಿಕ ಕಲಹಗಳಿಗೆ ಆಸ್ಪದ ನೀಡದಂತೆ, ಆಸ್ತಿ ಪಾಲು ಮತ್ತಿತರ ಪ್ರಕ್ರಿಯೆಯಗಳನ್ನು ಕಾನೂನು ಬದ್ಧವಾಗಿ ಮಾಡಿಸಿಕೊಳ್ಳಬೇಕು. ಮಹಿಳಾ ದೌರ್ಜನ್ಯದ ಬಗ್ಗೆ ಇರುವ ಪ್ರಚಲಿತ ಕಾನೂನುಗಳ ಅರಿವು ಮೂಡಬೇಕು ಎಂದರು.

ವಕೀಲರ ಸಂಘದ ಕಾರ್ಯದರ್ಶಿ ರಮೇಶ ತಳವಾರ, ಸದಸ್ಯ ವಿನಾಯಕ ಕುರುಬರ, ಸಹಾಯಕ ಸರ್ಕಾರಿ ಅಭಿಯೋಜಕಿ ಇಂಧುಮತಿ ಪಾಟೀಲ ಮತ್ತು ಸಥಳೀಯ ಗ್ರಾಮ ಪಂಚಾಯ್ತಿ ಸದಸ್ಯರು ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ