ಆ್ಯಪ್ನಗರ

ಬೋಧಕ ಹುದ್ದೆ ತುಂಬಲು ಕ್ರಮಕ್ಕೆ ಕುಬೇರಪ್ಪ ಒತ್ತಾಯ

ರಾಣೇಬೆನ್ನೂರ: ರಾಜ್ಯದ ಸಂಯೋಜಿತ ಹಾಗೂ ಅನುದಾನಿತ ಪದವಿ ಕಾಲೇಜುಗಳಲ್ಲಿ ಖಾಲಿಯಾಗಿರುವ ಬೋಧಕ ಹುದ್ದೆಗಳನ್ನು ಆರು ತಿಂಗಳೊಳಗಾಗಿ ತುಂಬಲು ವಿಶ್ವವಿದ್ಯಾನಿಲಯಗಳು ಕ್ರಮ ತೆಗೆದುಕೊಳ್ಳುವಂತೆ ಯುಜಿಸಿ 04-06-2019ರಂದು ರಾಜ್ಯದ ಎಲ್ಲ ವಿಶ್ವವಿದ್ಯಾಲಯಗಳ ಕುಲಪತಿಗಳಿಗೆ ತಿಳಿಸುವ ಜತೆಯಲ್ಲಿ ಮಾರ್ಗದರ್ಶಿ ಸೂತ್ರಗಳನ್ನು ನೀಡಿದೆ. ಆದರೆ ರಾಜ್ಯದ ಯಾವ ವಿ.ವಿ.ಗಳು ಈ ಬಗ್ಗೆ ಸೂಕ್ತ ಕ್ರಮ ತೆಗೆದುಕೊಳ್ಳುತ್ತಿಲ್ಲ ಎಂದು ಕೆಪಿಸಿಸಿ ಶಿಕ್ಷ ಕರು ಹಾಗೂ ಪದವೀಧರರ ಘಟಕದ ರಾಜ್ಯಾಧ್ಯಕ್ಷ ಡಾ: ಆರ್‌.ಎಂ. ಕುಬೇರಪ್ಪ ತಿಳಿಸಿದ್ದಾರೆ.

Vijaya Karnataka 3 Jul 2019, 5:00 am

Vijaya Karnataka Web kuberappa insists on filling teaching post
ಬೋಧಕ ಹುದ್ದೆ ತುಂಬಲು ಕ್ರಮಕ್ಕೆ ಕುಬೇರಪ್ಪ ಒತ್ತಾಯ

ಈ ಕುರಿತು ಅವರು ಪತ್ರಿಕೆಗೆ ನೀಡಿರುವ ಹೇಳಿಕೆಯಂತೆ, ಯುಜಿಸಿಯು ರಾಜ್ಯದ ಅನುದಾನಿತ ಪದವಿ ಕಾಲೇಜುಗಳಲ್ಲಿನ ಖಾಲಿ ಹುದ್ದೆಗಳನ್ನು ತುಂಬಲು ಆದೇಶ ಮಾಡಿದ್ದರೂ ಸಹಿತ ಕರ್ನಾಟಕ ಸರಕಾರವು ಕೇವಲ 2015ರ ವರೆಗೆ ಖಾಲಿಯಾಗಿರುವ ಹುದ್ದೆಗಳನ್ನು ತುಂಬಲು ಅನುಮತಿ ನೀಡಿದೆ. ಆದರೆ ಯುಜಿಸಿ ನೀಡಿರುವ ಹೊಸ ಆದೇಶದ ಪ್ರಕಾರ ಸರಕಾರವು ಪುನಃ ಇಲ್ಲಿಯವರೆಗೂ ಖಾಲಿಯಾಗಿರುವ ಎಲ್ಲ ಬೋಧಕ ಹುದ್ದೆಗಳನ್ನು ತುಂಬಲು ತಿದ್ದುಪಡಿ ಆದೇಶ ಹೊರಡಿಸಿ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲು ಅನುಮತಿ ನೀಡಬೇಕಾಗುತ್ತದೆ. ಆದರೆ ಯುಜಿಸಿಯು ಇದರ ಬಗ್ಗೆ ರಾಜ್ಯದ ವಿ.ವಿ.ಗಳ ಕುಲಪತಿಗಳಿಗೆ ಆದೇಶ ಹೊರಡಿಸಿದೆ. ಕುಲಪತಿಗಳಿಂದ ಅನುದಾನಿತ ಪದವಿ ಕಾಲೇಜುಗಳ ಹುದ್ದೆ ತುಂಬುವ ಅವಕಾಶವಿಲ್ಲದ ಕಾರಣ ಎಲ್ಲ ವಿ.ವಿ.ಗಳ ಕುಲಪತಿಗಳು ಯುಜಿಸಿ ಆದೇಶ ಉಲ್ಲೇಖಿಸಿ ಸರಕಾರಕ್ಕೆ ಹಾಗೂ ಕಾಲೇಜು ಶಿಕ್ಷ ಣ ಇಲಾಖೆಗೆ ಪತ್ರ ಬರೆದು, ಯುಜಿಸಿ ಆದೇಶದ ಪ್ರಕಾರ ಹುದ್ದೆ ತುಂಬಲು ಕ್ರಮ ತೆಗೆದುಕೊಳ್ಳಬೇಕು ಎಂದು ಕುಬೇರಪ್ಪ ಒತ್ತಾಯಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ