ಆ್ಯಪ್ನಗರ

ಶಾಂತಳಾದ ಕುಮದ್ವತಿ, ನಿಟ್ಟುಸಿರು ಬಿಟ್ಟ ಜನ

ರಟ್ಟೀಹಳ್ಳಿ: ಕಳೆದ 4-5 ದಿನದಿಂದ ಗ್ರಾಮಗಳು, ಬೆಳೆ, ಸೇತುವೆಗಳನ್ನು ಆವರಿಸಿದ್ದ ಕುಮದ್ವತಿ ನದಿ ಸೋಮವಾರ ಶಾಂತಳಾಗಿದ್ದು, ನೆರೆ ಪ್ರಮಾಣ ಇಳಿಮುಖವಾಗಿದೆ.

Vijaya Karnataka 13 Aug 2019, 5:00 am
ರಟ್ಟೀಹಳ್ಳಿ: ಕಳೆದ 4-5 ದಿನದಿಂದ ಗ್ರಾಮಗಳು, ಬೆಳೆ, ಸೇತುವೆಗಳನ್ನು ಆವರಿಸಿದ್ದ ಕುಮದ್ವತಿ ನದಿ ಸೋಮವಾರ ಶಾಂತಳಾಗಿದ್ದು, ನೆರೆ ಪ್ರಮಾಣ ಇಳಿಮುಖವಾಗಿದೆ.
Vijaya Karnataka Web HVR-12 RATTIHALLI  1


ಭಾನುವಾರ ರಾತ್ರಿ 9-30 ರ ಬಳಿಕ ನದಿ ನೀರು ನಿಧಾನವಾಗಿ ಇಳಿಕೆಯಾಗಿದ್ದು, ಸೋಮವಾರ ಮಧ್ಯಾಹ್ನದ ವೇಳೆಗೆ ಮುಳುಗಿದ ಸೇತುವೆಗಳು ಮುಕ್ತವಾಗಿವೆ. ಇವುಗಳ ಮೇಲೆ ಸಂಚಾರ ಪುನಾರಂಭಗೊಂಡಿತು. ಬಡಸಂಗಾಪುರ-ಕುಡುಪಲಿ ಬಾಂದರ್‌ ಹೊರತುಪಡಿಸಿ ಕುಮದ್ವತಿ ನದಿ ಪಾತ್ರದಲ್ಲಿನ ಎಲ್ಲ ಸೇತುವೆಗಳ ಮೇಲೆ ಸಂಚಾರ ಆರಂಭವಾಗಿದೆ.

ನದಿ ನೀರಿನ ರಭಸಕ್ಕೆ ಎಲಿವಾಳ ಸೇತುವೆ ತಡೆಗೋಡೆಯ ಕಬ್ಬಿಣದ ಸರಳುಗಳು ಕಿತ್ತುಕೊಂಡು ಹೋಗಿವೆ. ಕುಡುಪಲಿ ಸೇತುವೆ ಮುಂಭಾಗದಲ್ಲಿ ಹಾಗೂ ಸೇತುವೆ ಪಕ್ಕದಲ್ಲಿ ರಸ್ತೆ ಕಿತ್ತುಕೊಂಡು ಹೋಗಿವೆ. ಜನರು ಮತ್ತು ವಿವಿಧ ವಾಹನಗಳು ಸಂಚರಿಸುತ್ತಿದ್ದರೂ ಬಸ್‌ ಸಂಚಾರ ಆರಂಭಿಸಿಲ್ಲ.

ನಿಟ್ಟುಸಿರು ಬಿಟ್ಟ ಗ್ರಾಮಸ್ಥರು: ಒಂದು ವಾರದಿಂದ ಆತಂಕದಲ್ಲಿ ಕಳೆದ ಅನೇಕ ಹಳ್ಳಿಗಳ ಜನ ನದಿ ನೀರು ಇಳಿಮುಖವಾಗುತ್ತಿದ್ದಂತೆ ನಿಟ್ಟುಸಿರುಬಿಟ್ಟರು. ಜನ ಜೀವನ ಸಹಜಸ್ಥಿತಿಗೆ ಬರುತ್ತಿದೆ. ಆದರೆ, ಮನೆಗಳ ಕುಸಿತ, ಬೆಳೆ ಹಾನಿ, ಅಪಾರ ವಸ್ತುಗಳನ್ನು ಕಳೆದುಕೊಂಡು ಸಂಕಷ್ಟಕ್ಕೀಡಾಗಿದ್ದಾರೆ. ಜೀವನವನ್ನು ಮರು ನಿರ್ಮಾಣ ಮಾಡಿಕೊಳ್ಳುವುದು ಕಷ್ಟವಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ