ಆ್ಯಪ್ನಗರ

ಕೊನೆ ದಿನದ ಪ್ರಚಾರ ಭರಾಟೆ ಜೋರು

ರಾಣೇಬೆನ್ನೂರ :ಸ್ಥಳೀಯ ನಗರಸಭೆಗೆ ಆ.31ರಂದು ಮತದಾನ ನಡೆಯಲಿದ್ದು, ಬಹಿರಂಗ ಪ್ರಚಾರಕ್ಕೆ ಕೊನೆಯ ದಿನವಾದ ಮಂಗಳವಾರ ಎಲ್ಲ 35 ವಾರ್ಡ್‌ಗಳಲ್ಲಿ ಅಭ್ಯರ್ಥಿಗಳ ಪ್ರಚಾರ ತಾರಕಕ್ಕೇರಿತ್ತು. ಮೈಕಾಸುರನ ಹಾವಳಿ: ನಗರದ ಯಾವುದೇ ಮೂಲೆಗೆ ತೆರಳಿದರೂ ಮೈಕ್‌ಗಳಲ್ಲಿ ಅಭ್ಯರ್ಥಿಗಳ ಪರ ಘೋಷಣೆ ಕೂಗುತ್ತಾ ಮತಯಾಚನೆ ಮಾಡುತ್ತಿರುವ ದೃಶ್ಯ ಸಾಮಾನ್ಯವಾಗಿತ್ತು. ಇದರ ಜತೆಗೆ ಗುಂಪು ಗುಂಪಾಗಿ ಅಭ್ಯರ್ಥಿಗಳಿಗೆ ಜೈಕಾರ ಹಾಕುತ್ತಾ ಮತದಾರರನ್ನು ಸೆಳೆಯುವ ಪ್ರಯತ್ನ ಮಾಡುತ್ತಿರುವುದು ಕಂಡು ಬಂದಿತು.

Vijaya Karnataka 29 Aug 2018, 5:00 am

Vijaya Karnataka Web last days campaign crashes
ಕೊನೆ ದಿನದ ಪ್ರಚಾರ ಭರಾಟೆ ಜೋರು

ಮತ ಖಾತ್ರಿಗೆ ರಕ್ಷಾಬಂಧನ

ಈ ಬಾರಿ ಮಹಿಳಾ ವಾರ್ಡ್‌ಗಳಲ್ಲಿ ಪ್ರಮುಖ ರಾಷ್ಟ್ರೀಯ ಪಕ್ಷ ದ ಅಭ್ಯರ್ಥಿಗಳು ಮತದಾರರ ಮನೆಗಳಿಗೆ ತೆರಳಿ ಹೆಣ್ಣು ಮಕ್ಕಳಿಗೂ ರಾಖಿ ಕಟ್ಟುವ ಮೂಲಕ ಮತ ಖಾತ್ರಿ ಮಾಡಿಕೊಳ್ಳುವ ಪ್ರಯತ್ನದಲ್ಲಿ ತೊಡಗಿದ್ದರು.

ನಡುಕ ಹುಟ್ಟಿಸಿರುವ ಪಕ್ಷೇತರ ಅಭ್ಯರ್ಥಿಗಳು:

ಕೆಲವು ವಾರ್ಡ್‌ಗಳಲ್ಲಿ ಪಕ್ಷೇತರ ಅಭ್ಯರ್ಥಿಗಳು ಪ್ರಮುಖ ರಾಜಕೀಯ ಪಕ್ಷ ಗಳ ಅಭ್ಯರ್ಥಿಗಳಲ್ಲಿ ನಡುಕ ಉಂಟು ಮಾಡಿದ್ದಾರೆ. ವಿಶೇಷವಾಗಿ ಪರಂಪರಾಗತವಾಗಿ ಒಂದೇ ಪಕ್ಷ ವನ್ನು ಆಯ್ಕೆ ಮಾಡುತ್ತಾ ಬಂದಿರುವ ಇಲ್ಲಿನ ದೊಡ್ಡಪೇಟೆ ಪ್ರದೇಶದಲ್ಲಿನ ಪಕ್ಷೇತರ ಅಭ್ಯರ್ಥಿಗಳ ಪ್ರಚಾರ ಭರಾಟೆ ಜೋರಾಗಿದೆ. ಅಕ್ಕಪಕ್ಕದ ವಾರ್ಡ್‌ಗಳಲ್ಲಿ ಪಕ್ಷೇತರರಾಗಿ ಸ್ಪರ್ಧಿಸಿರುವ ಇಬ್ಬರು ಅಭ್ಯರ್ಥಿಗಳು ಪರಸ್ಪರ ಸಹಕಾರ ಮನೋಭಾವದಿಂದ ಗೆಲುವು ಸಾಧಿಸಲು ಸೆಡ್ಡು ಹೊಡೆದು ಪ್ರಚಾರದಲ್ಲಿ ತೊಡಗಿದ್ದಾರೆ.

ಬಹಿರಂಗ ಪ್ರಚಾರಕ್ಕೆ ಧುಮುಕದ ಸಚಿವ:

2013ರಲ್ಲಿ ನಗರಸಭೆಗೆ ನಡೆದ ಚುನಾವಣೆಯಲ್ಲಿ ತಮ್ಮ ಬೆಂಬಲದ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿದ್ದಲ್ಲದೇ ಅವರ ಗೆಲುವಿಗಾಗಿ ಭಾರಿ ಪ್ರಚಾರ ಕೈಗೊಂಡಿದ್ದ ಅರಣ್ಯ ಮತ್ತು ಪರಿಸರ ಸಚಿವ ಹಾಗೂ ಕ್ಷೇತ್ರದ ಶಾಸಕ ಆರ್‌.ಶಂಕರ ಈ ಬಾರಿ ಅದೇಕೋ ನಗರಸಭಾ ಚುನಾವಣೆಯ ಬಹಿರಂಗ ಪ್ರಚಾರದಿಂದ ದೂರ ಉಳಿದಿದ್ದಾರೆ. ಅವರೇ ರಾಜ್ಯಾಧ್ಯಕ್ಷ ರಾಗಿರುವ ಕರ್ನಾಟಕ ಪ್ರಜ್ಞಾವಂತರ ಜನತಾ ಪಕ್ಷ ದ (ಕೆಪಿಜೆಪಿ) ದಿಂದ 33 ಅಭ್ಯರ್ಥಿಗಳು ಕಣಕ್ಕೆ ಇಳಿದಿದ್ದಾರೆ. ಆದರೆ ಅವರ ಪಕ್ಷ ದ ಅಭ್ಯರ್ಥಿಗಳು ಸ್ಪರ್ಧಿಸಿರುವ ವಾರ್ಡ್‌ಗಳಲ್ಲಿ ವಾಹನಗಳಲ್ಲಿ ಮೈಕ್‌ ಮೂಲಕ ಪ್ರಚಾರ ಕೈಗೊಳ್ಳಲಾಗುತ್ತಿದೆ.

ಪಕ್ಷ ಕ್ಕಿಂತ ಅಭ್ಯರ್ಥಿಗಳಿಗೆ ಮಣೆ:

ಈ ಬಾರಿಯ ಚುನಾವಣೆಯಲ್ಲಿ ಹೆಚ್ಚಿನ ಮತದಾರರು ಪಕ್ಷ ಗಳಿಗಿಂತ ಅಭ್ಯರ್ಥಿಯ ಸಾಮರ್ಥ್ಯ‌ಕ್ಕೆ ಹೆಚ್ಚಿನ ಒತ್ತು ನೀಡುತ್ತಿದ್ದಾರೆ. ಕಳೆದ ಅವಧಿಯಲ್ಲಿ ಕೆಲಸ ಮಾಡದ ಸದಸ್ಯರ ಪರಿಸ್ಥಿತಿಯಂತೂ ಆ ದೇವರಿಗೇ ಪ್ರೀತಿ ಎನ್ನುವಂತಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ