ಆ್ಯಪ್ನಗರ

ಶೈಕ್ಷಣಿಕ ಸೌಲಭ್ಯದಿಂದ ಕಲಿಕೆಗೆ ಹುಮ್ಮಸ್ಸು

ಬ್ಯಾಡಗಿ: ಮೌಲ್ಯಾಧಾರಿತ ಶಿಕ್ಷಣ ನೀಡುತ್ತಿರುವ ಸರಕಾರಿ ಶಾಲೆಗಳಿಗೆ ಅಗತ್ಯ ಮೂಲ ಸೌಕರ‍್ಯಗಳನ್ನು ನೀಡಿದಾಗ ಗ್ರಾಮೀಣ ಭಾಗದ ವಿದ್ಯಾರ್ಥಿಗಳಲ್ಲಿಕಲಿಕೆಯ ಹಸಿವು ಇಮ್ಮಡಿಗೊಂಡು ಸರಕಾರಿ ಶಾಲೆಯಲ್ಲಿದಾಖಲಾತಿ ಹೆಚ್ಚಾಗಲು ಸಹಕಾರಿಯಾಗಲಿದೆ ಎಂದು ಅಮೆಡಿಯಸ್‌ ಸಂಸ್ಥೆಯ ಸಿಇಓ ರಿಭು ಚೌದರಿ ಅಭಿಪ್ರಾಯ ವ್ಯಕ್ತಪಡಿಸಿದರು.

Vijaya Karnataka 15 Dec 2019, 5:00 am
ಬ್ಯಾಡಗಿ: ಮೌಲ್ಯಾಧಾರಿತ ಶಿಕ್ಷಣ ನೀಡುತ್ತಿರುವ ಸರಕಾರಿ ಶಾಲೆಗಳಿಗೆ ಅಗತ್ಯ ಮೂಲ ಸೌಕರ‍್ಯಗಳನ್ನು ನೀಡಿದಾಗ ಗ್ರಾಮೀಣ ಭಾಗದ ವಿದ್ಯಾರ್ಥಿಗಳಲ್ಲಿಕಲಿಕೆಯ ಹಸಿವು ಇಮ್ಮಡಿಗೊಂಡು ಸರಕಾರಿ ಶಾಲೆಯಲ್ಲಿದಾಖಲಾತಿ ಹೆಚ್ಚಾಗಲು ಸಹಕಾರಿಯಾಗಲಿದೆ ಎಂದು ಅಮೆಡಿಯಸ್‌ ಸಂಸ್ಥೆಯ ಸಿಇಓ ರಿಭು ಚೌದರಿ ಅಭಿಪ್ರಾಯ ವ್ಯಕ್ತಪಡಿಸಿದರು.
Vijaya Karnataka Web learning from educational facility
ಶೈಕ್ಷಣಿಕ ಸೌಲಭ್ಯದಿಂದ ಕಲಿಕೆಗೆ ಹುಮ್ಮಸ್ಸು


ತಾಲೂಕಿನ ಚಿನ್ನಿಕಟ್ಟಿ ಗ್ರಾಮದಲ್ಲಿಒಸಾಟ್‌ ಎಜುಕೇಷನಲ್‌ ಟ್ರಸ್ಟ್‌ ಹಾಗೂ ಅಮೇಡಿಯಸ್‌ ಸಹ ಭಾಗಿತ್ವದಲ್ಲಿನೂತನವಾಗಿ ನಿರ್ಮಿಸಿದ ಉನ್ನತೀಕರಿಸಿದ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಕಟ್ಟಡವನ್ನು ಶನಿವಾರ ಉದ್ಘಾಟಿಸಿ ಮಾತನಾಡಿದರು.

ಗ್ರಾಮೀಣ ಭಾಗದ ಮಕ್ಕಳಲ್ಲಿಪ್ರತಿಭೆಗೆ ಕೊರತೆಯಿಲ್ಲಇದನ್ನು ಹೆಕ್ಕಿ ತೆಗೆಯುವ ಕಾರ‍್ಯ ಶಿಕ್ಷರಿಂದಾಗಬೇಕಿದೆ, ಮಕ್ಕಳು ಗುಣಾತ್ಮಕ ಕಲಿಕೆ ರೂಢಿಸಿ ಕೊಂಡು ಇಂಗ್ಲೀಷ ಭಾಷೆಯಲ್ಲಿಪ್ರಭುತ್ವ ಗಳಿಸಿ ಉನ್ನತ ಹುದ್ದೆ ಪಡೆಯುವಂತೆ ಕರೆ ನೀಡಿದರು.

ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಮಾತನಾಡಿ, ಶಿಕ್ಷಣ ಪ್ರತಿ ಮಗುವಿನ ಹಕ್ಕು ಈ ನಿಟ್ಟಿನಲ್ಲಿತಾಲೂಕಿನಾದ್ಯಂತ ಶಿಥಿಲಾವಸ್ಥೆಯಲ್ಲಿರುವ ಕಟ್ಟಡಗಳ ಪುನರ್‌ನಿರ್ಮಾಣಕ್ಕೆ ಸರಕಾರ ಸಾಕಷ್ಟು ಅನುದಾನ ಬಿಡುಗಡೆಗೊಳಿಸಿ ಗುಣಮಟ್ಟದ ಶಿಕ್ಷಣಕ್ಕೆ ಒತ್ತು ನೀಡುತ್ತಿದೆ. ಸರಕಾರಿ ಶಾಲೆಗಳ ಸಬಿಲೀಕರಣಕ್ಕೆ ಒತ್ತು ನೀಡುತ್ತಿರುವ ಒಸಾಟ್‌ ಸಂಸ್ಥೆಯ ಶಿಕ್ಷಣ ಪ್ರೀತಿ ಶ್ಲಾಘನೀಯ ಎಂದರು.

ಒಸಾಟ್‌ ಸಂಸ್ಥೆ ಅಧಿಕಾರಿ ಶ್ರೀನಿವಾಸ ಸುಬ್ರಮಣ್ಯಂ ಮಾತನಾಡಿ, ಉತ್ತಮ ದಾಖಲಾತಿ ಹೊಂದಿದ್ದ ಚಿನ್ನಿಕಟ್ಟಿ ಗ್ರಾಮದ ಶಿಥಿಲಗೊಂಡ ಕಟ್ಟಡದ ಸ್ಥಿತಿ ಕಂಡು ಗ್ರಾಮಸ್ಥರು, ಶಿಕ್ಷಕರು ಸಲ್ಲಿಸಿದ ಮನವಿಗೆ ಸ್ಪಂದಿಸಿ ಸಂಸ್ಥೆ ಉತ್ತಮ ಕಟ್ಟಡ ನಿರ್ಮಿಸಿಕೊಟ್ಟಿದ್ದು, ಇದರ ಸಮರ್ಪಕ ನಿರ್ವಹಣೆ, ರಕ್ಷಣೆ ಮಾಡಿ ವಿದ್ಯಾರ್ಥಿಗಳ ಭವಿಷ್ಯ ರೂಪಿಸುವ ಜವಾಬ್ದಾರಿ ನಿಮ್ಮಗಳ ಮೇಲಿದೆ ಎಂದರು.

ಡಿಡಿಪಿಐ ಅಂದಾನೆಪ್ಪ ವಡಿಗೇರಿ ಮಾತನಾಡಿದರು. ಪ್ರಾಸ್ತಾವಿಕವಾಗಿ ಮುಖ್ಯ ಶಿಕ್ಷಕ ಆರ್‌.ಎಂ.ನೇಶ್ವಿ ಮಾತನಾಡಿದರು. ಶಿಕ್ಷಕ ಮಂಜುನಾಥ ಸ್ವಾಗತಿಸಿದರು, ಪರಶುರಾಮ ಪುಜಾರ ನಿರೂಪಿಸಿದರು.ಸಿ.ಎಂ.ದು ರ್ಗದ ವಂದಿಸಿದರು.

ವೇದಿಕೆಯಲ್ಲಿಒಸಾಟ್‌ ಸಂಸ್ಥೆಯ ಅಧಿಕಾರಿಗಳಾದ ಅಭಿಜಿತ್‌, ಬಾಲಕೃಷ್ಣ, ಎನ್‌.ವಿ.ಜಿ.ಕೆಭಟ್‌, ಎನ್‌.ಹ ರೀಶ,ಬಿಇಓ ಬಿ.ಕೆ.ರುದ್ರಮುನಿ, ಎಮ್‌.ಎಮ್‌.ಬಾರ್ಕಿ, ಪಿಡಿಓ ಪ್ರದೀಪ ಗಣೇಶ್ಕರ, ಜಿ.ಪಂ.ಸದಸ್ಯೆ ಸುಮ ಂಗಲಾ ಪಟ್ಟಣಶೆಟ್ಟಿ, ಶಿವಬಸಪ್ಪ ಕುಳೆನೂರ, ಶಂಕ್ರಣ್ಣ ಮಾತನವರ, ಸುರೇಶ ಯತ್ನಳ್ಳಿ, ಶಂಭು ಪಾಟೀಲ, ರವೀಂದ್ರ ಪಟ್ಟಣಶೆಟ್ಟಿ, ಶ್ರೇಣಿಕರಾಜ ಯಳವತಿ,್ತ ಸೋಮೇಶ ಮೂಡೇರ, ಏಳ ಕೋಟೆಪ್ಪ ಮಾದರ,ಅರು ಣ ಕದರಮಂಡಲಗಿ, ಸುರೇಶ ಚಿಕ್ಕನಗೌಡ್ರ, ನಾಗಪ್ಪ ಕಣಸದಮನಿ, ಲೋಕಪ್ಪ ಮೂಡೇರ, ಸೇರಿದಂತೆ ಇನ್ನಿತರರಿದ್ದರು.

ಗ್ರಾಮೀಣ ಸೊಗಡಿನ ಸ್ವಾಗತ: ಇದಕ್ಕೂ ನೂತನ ಶಾಲಾ ಕಟ್ಟಡ ಉದ್ಘಾಟನೆಗೆ ಗ್ರಾಮಕ್ಕೆ ಆಗಮಿಸಿದ ಒಸಾಟ್‌ ಸಂಸ್ಥೆಯ ಸಿಬ್ಬಂದಿಯನ್ನು ಬಲೂನ್‌ ಹಾಗೂ ತಳಿರು ತೋರಣಗಳಿಂದ ಸಿಂಗರಿಸಿದ ಎತ್ತಿನ ಬಂಡಿಯಲ್ಲಿಕೂರಿಸಿ ಪೂರ್ಣಕುಂಭ, ಡೊಳ್ಳು ಕುಣಿತದೊಂದಿಗೆ ಶಾಲೆಯವರೆಗೂ ಹಳ್ಳಿಯ ಸೊಗಡಿನ ಮೂಲಕ ಬರ ಮಾಡಿಕೊಳ್ಳಲಾಯಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ