ಆ್ಯಪ್ನಗರ

ಮೆಡ್ಲೇರಿ ಹೊರವಲಯದಲ್ಲಿ ಚಿರತೆ ಪ್ರತ್ಯಕ್ಷ

ರಾಣೇಬೆನ್ನೂರ: ತಾಲೂಕಿನ ಮೆಡ್ಲೇರಿ ಭಾಗದ ಹೊರವಲಯದಲ್ಲಿ ಮಂಗಳವಾರ ರಾತ್ರಿ ಚಿರತೆಯೊಂದು ಪ್ರತ್ಯಕ್ಷ ವಾಗಿ ಕುರಿಯೊಂದನ್ನು ಕೊಂದು ತಿಂದು ಅರ್ಧಕ್ಕೆ ಬಿಟ್ಟು ಹೋಗಿದೆ. ಇದರಿಂದ ಸಹಜವಾಗಿಯೇ ಗ್ರಾಮಸ್ಥರಲ್ಲಿ ಆತಂಕ ಉಂಟಾಗಿದೆ.

Vijaya Karnataka 7 Mar 2019, 5:00 am
ರಾಣೇಬೆನ್ನೂರ: ತಾಲೂಕಿನ ಮೆಡ್ಲೇರಿ ಭಾಗದ ಹೊರವಲಯದಲ್ಲಿ ಮಂಗಳವಾರ ರಾತ್ರಿ ಚಿರತೆಯೊಂದು ಪ್ರತ್ಯಕ್ಷ ವಾಗಿ ಕುರಿಯೊಂದನ್ನು ಕೊಂದು ತಿಂದು ಅರ್ಧಕ್ಕೆ ಬಿಟ್ಟು ಹೋಗಿದೆ. ಇದರಿಂದ ಸಹಜವಾಗಿಯೇ ಗ್ರಾಮಸ್ಥರಲ್ಲಿ ಆತಂಕ ಉಂಟಾಗಿದೆ.
Vijaya Karnataka Web HVR-6RNR3


ಕೆಲವು ದಿನಗಳಿಂದ ಗ್ರಾಮದ ಹೊರವಲಯದ ಕುದರಿಹಾಳ ಹಾಗೂ ಅಂಕಸಾಪುರ ರಸ್ತೆಯಲ್ಲಿನ ನಾಯಿ ಹಾಗೂ ಆಡುಗಳನ್ನು ತಿನ್ನುತ್ತಾ ಬಂದಿದ್ದರೂ, ಚಿರತೆಯು ಯಾರ ಕಣ್ಣಿಗೂ ಬಿದ್ದಿರಲಿಲ್ಲ. ಆದರೆ ಮಂಗಳವಾರ ಆಡನ್ನು ಚಿರತೆ ಹೊತ್ತುಕೊಂಡು ಹೋಗುವಾಗ ಗ್ರಾಮಸ್ಥರ ಕಣ್ಣಿಗೆ ಬಿದ್ದಿದೆ. ಈ ವಿಷಯ ಅರಣ್ಯ ಇಲಾಖೆ ಅಧಿಕಾರಿಗಳ ಗಮನಕ್ಕೆ ಬಂದಿದ್ದು, ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದಾಗ ಅಲ್ಲಿ ಚಿರತೆಯ ಹೆಜ್ಜೆ ಗುರುತುಗಳು ಸ್ಪಷ್ಟವಾಗಿ ಗೋಚರಿಸಿವೆ. ಸತ್ತಿರುವ ಕುರಿಯ ದೇಹದ ಪರೀಕ್ಷೆ ಮಾಡಿದಾಗ ಚಿರತೆಯಿಂದ ಹತ್ಯೆಯಾಗಿರುವುದು ಖಚಿತವಾಗಿದೆ.

ಅರಣ್ಯ ಸಂರಕ್ಷಣಾಧಿಕಾರಿ ಎಸ್‌.ಎಂ.ವಾಲಿ, ವಲಯ ಅರಣ್ಯಾಧಿಕಾರಿ ಎಂ.ಎಸ್‌.ನ್ಯಾಮತಿ ಮಾರ್ಗದರ್ಶನದಂತೆ ಉಪವಲಯ ಅರಣ್ಯಾಧಿಕಾರಿ ರವಿಕುಮಾರ, ಅರಣ್ಯ ರಕ್ಷ ಕ ಗಿರೀಶ ಹಾಗೂ ಪಶು ವೈದ್ಯಾಧಿಕಾರಿ ರಾಘವೇಂದ್ರ ಕಿತ್ತೂರ ಸ್ಥಳಕ್ಕೆ ಭೇಟಿ ನೀಡಿದ್ದರು. ಈ ವೇಳೆ ಎಪಿಎಂಸಿ ಸದಸ್ಯ ಬಸವರಾಜ ಹುಲ್ಲತ್ತಿ, ರಾಮಲಿಂಗಪ್ಪ ಕೋಲ್ಕರ್‌, ಪ್ರಕಾಶ ಹಕಾರಿ, ಎಂ.ಸಿ.ಹಾವೇರಿ, ಬೀರೇಶ ಪಾಶಿಗಾರ, ಉಮೇಶ ಗೋರಮಾಳರ, ಹನುಮಂತಪ್ಪ ಸುಣಗಾರ ಮತ್ತು ಇತರರು ಇದ್ದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ