ಆ್ಯಪ್ನಗರ

ವಿದ್ಯಾರ್ಥಿ ಜೀವನದಲ್ಲಿ ಗುರಿ ಇರಲಿ

ಹಿರೇಕೆರೂರು: ವಿದ್ಯಾರ್ಥಿ ಜೀವನದಲ್ಲಿ ಗುರಿ, ಆಲೋಚನೆಗಳು ದೊಡ್ಡವಾಗಿದ್ದರೆ ವಿದ್ಯಾರ್ಥಿಗಳ ಭವಿಷ್ಯದ ಬದುಕು ಸುಂದರವಾಗುತ್ತದೆ ಎಂದು ನಿವೃತ್ತ ಲೆಪ್ಟಿನೆಂಟ್‌ ಕರ್ನಲ್‌ ಸೋಮಶೇಖರ ಬಸಪ್ಪನವರ ಹೇಳಿದರು.

Vijaya Karnataka 23 Aug 2019, 5:00 am
ಹಿರೇಕೆರೂರು: ವಿದ್ಯಾರ್ಥಿ ಜೀವನದಲ್ಲಿ ಗುರಿ, ಆಲೋಚನೆಗಳು ದೊಡ್ಡವಾಗಿದ್ದರೆ ವಿದ್ಯಾರ್ಥಿಗಳ ಭವಿಷ್ಯದ ಬದುಕು ಸುಂದರವಾಗುತ್ತದೆ ಎಂದು ನಿವೃತ್ತ ಲೆಪ್ಟಿನೆಂಟ್‌ ಕರ್ನಲ್‌ ಸೋಮಶೇಖರ ಬಸಪ್ಪನವರ ಹೇಳಿದರು.
Vijaya Karnataka Web HVR-22HKR 4


ಅವರು ಗುರುವಾರ ಪಟ್ಟಣದ ಸಿಇಎಸ್‌ ಸಂಸ್ಥೆಯ ಡಾ.ಎಪಿಜೆ ಅಬ್ದುಲ್‌ ಕಲಾಂ ವಿಜ್ಞಾನ ಭವನದಲ್ಲಿ ಬಿ.ಆರ್‌.ತಂಬಾಕದ ಪ್ರಥಮ ದರ್ಜೆ ಮಹಾ ವಿದ್ಯಾಲಯದ ವಿದ್ಯಾರ್ಥಿ ಸಂಘ, ಕನ್ನಡ ಸಂಘ, ಎನ್‌ಎಸ್‌ಎಸ್‌, ರೆಡ್‌ಕ್ರಾಸ್‌ ಘಟಕ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಸಮಾರಂಭ ಉದ್ಘಾಟಿಸಿ ಮಾತನಾಡಿ, ಆದರ್ಶವಾದ ಜೀವನ ಮಾರ್ಗ ಬದುಕಿನ ಮುನ್ನಡೆಗೆ ಕಾರಣವಾಗಿರುತ್ತದೆ. ವಿದ್ಯಾರ್ಥಿ ಜೀವನ ಅತ್ಯಮೂಲ್ಯವಾದದ್ದು, ಗುರು-ಹಿರಿಯರಿಗೆ ಗೌರವ ಕೊಡಬೇಕು ಎಂದರು.

ಸಂಸ್ಥೆ ಗೌರವ ಕಾರ್ಯದರ್ಶಿ ಎಸ್‌.ಎಸ್‌.ಪಾಟೀಲ ಮಾತನಾಡಿ, ಶಿಕ್ಷ ಣದ ಜತೆಗೆ ಸಂಸ್ಕಾರ ಕಲಿಯಬೇಕು. ಗುರಿ ಇದ್ದಲ್ಲಿ ಮಾರ್ಗ ಯಾವಾಗಲು ಇದ್ದೆ ಇರುತ್ತದೆ ಎನ್ನುವುದನ್ನು ಅರಿತು ವಿದ್ಯಾರ್ಥಿಗಳು ಶಿಕ್ಷ ಣ ಪಡೆಯಬೇಕು ಎಂದರು.

ಸಂಸ್ಥೆಯ ಅಧ್ಯಕ್ಷ ಎಸ್‌.ಬಿ.ತಿಪ್ಪಣ್ಣನವರ ಅಧ್ಯಕ್ಷ ತೆವಹಿಸಿ ಮಾತನಾಡಿದರು. ಜಿ.ಪಂ ಸದಸ್ಯೆ ಸುಮಿತ್ರಾ ಪಾಟೀಲ, ಪ್ರಾಚಾರ್ಯ ಡಾ.ಎಸ್‌.ಬಿ.ಚನ್ನಗೌಡರ, ಎಂ.ವಿ.ಹೊಂಬರಡಿ, ರವಿ ಬಸನಗೌಡರ, ರಾಘು ಗಿಡ್ಡಪ್ಪಗೌಡರ, ಚಂದ್ರಾ ನಾಯ್ಕ, ರಘು ಮಳವಳ್ಳಿ, ಸಂಜೀವ ಯತ್ತಿನಹಳ್ಳಿ, ಪ್ರದೀಪ ಕೊರಡೇಕರ, ಕೆ.ಎಂ.ಮರಡಿಬಣಕಾರ, ಎಂ.ಎಸ್‌.ನಾಗರಾಜಪ್ಪ, ಎಸ್‌.ಪೂಜಾ, ಎಚ್‌.ಪಿ.ನಾಗರಾಜ, ಎನ್‌.ಎಂ.ರೂಪಾ, ಬಿ.ಸುಷ್ಮ್ಮಿತಾ, ಕೆ.ಆರ್‌.ಮಟ್ಟಿ, ಸಿ.ಆರ್‌.ದೂದೀಹಳ್ಳಿ, ಕಿರಣ್‌ ಬಾಗಲರ ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ