ಆ್ಯಪ್ನಗರ

ಪಾಕ್‌ ವಿರುದ್ಧ ಪತ್ರ ಚಳವಳಿ

ಸವಣೂರು : ಉಗ್ರರಿಗೆ ಆಶ್ರಯ ನೀಡುತ್ತಿರುವ ಪಾಕಿಸ್ತಾನವನ್ನು ಭಯೋತ್ಪಾದಕರ ರಾಷ್ಟ್ರ ಎಂದು ಘೋಷಿಸುವಂತೆ ಆಗ್ರಹಿಸಿ ಜೆಸಿಐ ಸಂಸ್ಥೆ ಆರಂಭಿಸಿರುವ ಪತ್ರ ಬರೆಯುವ ಅಭಿಯಾನಕ್ಕೆ ಶಾಲಾ ವಿದ್ಯಾರ್ಥಿಗಳು ಕೈಜೋಡಿಸಿ ಪ್ರಧಾನಿ ಮೋದಿ ಅವರಿಗೆ ಪತ್ರ ಬರೆಯುತ್ತಿರುವುದು ಉತ್ತಮ ಕಾರ್ಯವಾಗಿದೆ ಎಂದು ತಾಪಂ ಮಾಜಿ ಅಧ್ಯಕ್ಷ ರಮೇಶ ಅರಗೋಳ ಹೇಳಿದರು.

Vijaya Karnataka 24 Feb 2019, 5:00 am
ಸವಣೂರು : ಉಗ್ರರಿಗೆ ಆಶ್ರಯ ನೀಡುತ್ತಿರುವ ಪಾಕಿಸ್ತಾನವನ್ನು ಭಯೋತ್ಪಾದಕರ ರಾಷ್ಟ್ರ ಎಂದು ಘೋಷಿಸುವಂತೆ ಆಗ್ರಹಿಸಿ ಜೆಸಿಐ ಸಂಸ್ಥೆ ಆರಂಭಿಸಿರುವ ಪತ್ರ ಬರೆಯುವ ಅಭಿಯಾನಕ್ಕೆ ಶಾಲಾ ವಿದ್ಯಾರ್ಥಿಗಳು ಕೈಜೋಡಿಸಿ ಪ್ರಧಾನಿ ಮೋದಿ ಅವರಿಗೆ ಪತ್ರ ಬರೆಯುತ್ತಿರುವುದು ಉತ್ತಮ ಕಾರ್ಯವಾಗಿದೆ ಎಂದು ತಾಪಂ ಮಾಜಿ ಅಧ್ಯಕ್ಷ ರಮೇಶ ಅರಗೋಳ ಹೇಳಿದರು.
Vijaya Karnataka Web HVR-23SVR1
ಪಾಕಿಸ್ತಾನವನ್ನು ಭಯೋತ್ಪಾದಕರ ರಾಷ್ಟ್ರ ಎಂದು ಘೋಷಿಸಲು ಒತ್ತಾಯಿಸಿ ಚಿಲ್ಲೂರಬಡ್ನಿ ಸರಕಾರಿ ಉನ್ನತೀಕರಿಸಿದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜರುಗಿದ ಹುತಾತ್ಮ ಯೋಧರಿಗೆ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಪ್ರಧಾನಿ ಅವರಿಗೆ ಪತ್ರ ಬರೆದರು.


ಸವಣೂರ ತಾಲೂಕಿನ ಚಿಲ್ಲೂರಬಡ್ನಿ ಗ್ರಾಮದ ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜೆಸಿಐ ನಮ್ಮ ಸವಣೂರು ಮತ್ತು ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಆಶ್ರಯದಲ್ಲಿ ಶುಕ್ರವಾರ ಜರುಗಿದ ಹುತಾತ್ಮ ವೀರ ಯೋಧರಿಗೆ ಶ್ರದ್ಧಾಂಜಲಿ ಮತ್ತು ಪತ್ರ ಚಳವಳಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ರತಿಯೊಬ್ಬ ವಿದ್ಯಾರ್ಥಿ ದೇಶಾಭಿಮಾನ ಬೆಳೆಸಿಕೊಳ್ಳಬೇಕು. ಇಂತಹ ಕಾರ್ಯಕ್ರಮಗಳಿಗೆ ಸಾರ್ವಜನಿಕರು ಹಾಗೂ ರಾಷ್ಟ್ರಭಕ್ತರು ಸಹಕಾರ ನೀಡಬೇಕು ಎಂದರು.

ವಿದ್ಯಾರ್ಥಿಗಳಲ್ಲಿ ರಾಷ್ಟ್ರಭಕ್ತಿ ಜಾಗೃತಿ ಅವಶ್ಯ. ಯೋಧರ ತ್ಯಾಗ ಹಾಗೂ ಬಲಿದಾನ ವ್ಯರ್ಥವಾಗಲು ಬಿಡುವದಿಲ್ಲ ಎಂದು ತಿಳಿಸಿರುವ ಹೆಮ್ಮೆಯ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ಪಾಕಿಸ್ತಾನವನ್ನು ಭಯೋತ್ಪಾದಕರ ರಾಷ್ಟ್ರ ಎಂದು ಘೋಷಿಸಲು ಒತ್ತಾಯಿಸಿ ರಾಷ್ಟ್ರದ ಪ್ರತಿಯೊಬ್ಬರು ಅಂಚೆ ಪತ್ರವನ್ನು ಬರೆಯಿರಿ ಎಂದು ಕರೆ ನೀಡಿದರು.

ಎಸ್‌ಡಿಎಂಸಿ ಅಧ್ಯಕ್ಷ ಮಂಜಪ್ಪ ಶ್ಯಾಗೋಟಿ ಅಧ್ಯಕ್ಷ ತೆವಹಿಸಿದ್ದರು. ಮುಖ್ಯಗುರು ಎನ್‌.ಕೆ.ಪಾಟೀಲ ಮಾತನಾಡಿದರು. ಗ್ರಾ.ಪಂ ಸದಸ್ಯ ಬಸವರಾಜ ಮೇಟಿ, ಜೆಸಿಐ ಪದಾಧಿಕಾರಿಗಳಾದ ಯೋಗೇಂದ್ರ ಜಂಬಗಿ, ಎಸ್‌.ಜೆ.ಹಿರೇಮಠ, ಪ್ರಕಾಶ ಮುರಡಿ, ಪ್ರಶಾಂತ ನಾವಳ್ಳಿ, ಎಂ.ಬಿ.ಶಾಂತಗಿರಿ, ರಾಜಶೇಖರಯ್ಯ ಗುರುಸ್ವಾಮಿಮಠ, ಸಿ.ಎನ್‌.ಪಾಟೀಲ, ಎಸ್‌ಡಿಎಂಸಿ ಪದಾಧಿಕಾರಿ ಅಣ್ಣಪ್ಪ ಕುರಿ ಹಾಗೂ ಇತರರು ಪಾಲ್ಗೊಂಡಿದ್ದರು.

ಮುಖ್ಯ ಶಿಕ್ಷ ಕ ಎಸ್‌.ಟಿ.ಮಹಾಪುರಷ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿದ್ಯಾರ್ಥಿನಿ ಯಶೋದಾ ದೊಡ್ಡಮನಿ ಅನಿಸಿಕೆ ಹಂಚಿಕೊಂಡರು. ನೂರಾರು ವಿದ್ಯಾರ್ಥಿಗಳು, ಜೆಸಿಐ ಸಂಸ್ಥೆ, ಶಾಲಾ ಎಸ್‌ಡಿಎಂಸಿ ಸರ್ವ ಪದಾಧಿಕಾರಿಗಳು, ಸದಸ್ಯರು, ಸಾರ್ವಜನಿಕರು, ಶಿಕ್ಷ ಕರು ಪ್ರಧಾನಿ ಅವರಿಗೆ ಪತ್ರವನ್ನು ಬರೆಯುವ ಮೂಲಕ ಪಾಕಿಸ್ತಾನವನ್ನು ಭಯೋತ್ಪಾದಕರ ರಾಷ್ಟ್ರ ಎಂದು ಘೋಷಿಸಲು ಒತ್ತಾಯಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ