ಆ್ಯಪ್ನಗರ

ಆತಂಕ ಸೃಷ್ಟಿಸಿದ ಲಾಕ್‌ಡೌನ್‌ ರಿಯಾಯಿತಿ

ರಾಣೇಬೆನ್ನೂರ: ಜಿಲ್ಲೆಯು ಹಸಿರು ವಲಯದಲ್ಲಿರುವ ಕಾರಣ ಲಾಕ್‌ಡೌನ್‌ನಲ್ಲಿವಹಿವಾಟಿಗೆ ನೀಡಲಾಗಿರುವ ರಿಯಾಯತಿ ನಗರದಲ್ಲಿಶುಕ್ರವಾರ ಸಂಜೆ ಆತಂಕ ಮೂಡಿಸಿತು.

Vijaya Karnataka 2 May 2020, 5:00 am
ರಾಣೇಬೆನ್ನೂರ: ಜಿಲ್ಲೆಯು ಹಸಿರು ವಲಯದಲ್ಲಿರುವ ಕಾರಣ ಲಾಕ್‌ಡೌನ್‌ನಲ್ಲಿವಹಿವಾಟಿಗೆ ನೀಡಲಾಗಿರುವ ರಿಯಾಯತಿ ನಗರದಲ್ಲಿಶುಕ್ರವಾರ ಸಂಜೆ ಆತಂಕ ಮೂಡಿಸಿತು.
Vijaya Karnataka Web 1RNR2A_23
ರಾಣೇಬೆನ್ನೂರ ನಗರದ ದೊಡ್ಡಪೇಟೆ ಪ್ರದೇಶದ ಬಟ್ಟೆ ಅಂಗಡಿಗಳಿಗೆ ದಾವಣಗೆರೆಯಿಂದ ಜನರು ಖರೀದಿಗೆ ಆಗಮಿಸಿದ್ದರಿಂದ ಆತಂಕಗೊಂಡ ಜನರು ರಸ್ತೆ ಬಂದ್‌ ಮಾಡಿರುವುದು.


ದಾವಣಗೆರೆ ಜಿಲ್ಲೆಯ ಸಾಕಷ್ಟು ವಾಹನಗಳಲ್ಲಿಜನರು ನಗರದ ದೊಡ್ಡಪೇಟೆ ಪ್ರದೇಶದಲ್ಲಿನ ಬಟ್ಟೆ ಅಂಗಡಿಗಳಿಗೆ ಖರೀದಿಗೆ ಆಗಮಿಸಿದ್ದರು. ಇದೇ ವೇಳೆ ಮಧ್ಯಾಹ್ನ ದಾವಣಗೆರೆಯಲ್ಲಿಹೊಸದಾಗಿ ಆರು ಜನರಿಗೆ ಕೊರೊನಾ ಸೋಂಕು ತಗಲಿರುವ ಸುದ್ದಿಯು ಸ್ಥಳೀಯ ಜನರಲ್ಲಿಆತಂಕ ಮೂಡಿಸಿತು.

ಇದರಿಂದ ಜನರು ದಿಢೀರನೆ ತಮ್ಮ ಪ್ರದೇಶದ ರಸ್ತೆಯ ಎರಡೂ ಬದಿಯ ಪ್ರವೇಶ ಬಂದ್‌ ಮಾಡಿ ತಹಸೀಲ್ದಾರ, ಪೊಲೀಸ್‌ ಅಧಿಕಾರಿಗಳಿಗೆ ಫೋನ್‌ ಮೂಲಕ ವಿಷಯ ತಿಳಿಸಿದರು. ಸುಮಾರು ಒಂದು ಗಂಟೆಯಾದರೂ ತಹಸೀಲ್ದಾರ ಸೇರಿದಂತೆ ಯಾರೊಬ್ಬರೂ ಸ್ಥಳಕ್ಕೆ ಆಗಮಿಸಿರಲಿಲ್ಲ. ಪರಿಸ್ಥಿತಿ ಕೈಮೀರುವ ಹಂತ ತಲುಪಿದಾಗ ಸ್ಥಳಕ್ಕೆ ಧಾವಿಸಿದ ಶಹರ ಪಿಎಸ್‌ಐ ಪ್ರಭು ಕೆಳಗಿನಮನಿ ಪ್ರತಿಭಟನಾಕಾರರೊಂದಿಗೆ ಸಂಧಾನ ನಡೆಸಿ ರಸ್ತೆ ತೆರವು ತೆರವುಗೊಳಿಸಿ ಪರಿಸ್ಥಿತಿ ತಿಳಿಗೊಳಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ