ಆ್ಯಪ್ನಗರ

ಪ್ರೀತಿ, ಮಮತೆಯಿಂದ ರೋಗ ದೂರ

ಶಿಗ್ಗಾವಿ: ಹೆಚ್‌ಐವಿ ಏಡ್ಸ್‌ ಸೋಂಕಿತರ ಬಗ್ಗೆ ಕಳಂಕ ಮತ್ತು ತಾರತಮ್ಯ ಬೇಡ. ಪ್ರೀತಿ, ವಿಶ್ವಾಸ ಮಮತೆ ಆರೈಕೆ ಬೆಂಬಲದಿಂದ ಸೋಂಕಿತರನ್ನು ಕಂಡಾಗ ಮಾತ್ರ ನಾವು ಭಯಾನಕ ಮತ್ತು ಮಹಾಮಾರಿ ರೋಗ ತಡೆಗಟ್ಟಬಹುದು ಎಂದು ಜಿಲ್ಲಾಆಸ್ಪತ್ರೆ ಎ.ಆರ್‌.ಟಿ ಕೇಂದ್ರದ ಹಿರಿಯ ಆಪ್ತ ಸಮಾಲೋಚಕ ಸುಧಾಕರ ದೈವಜ್ಞ ಹೇಳಿದರು.

Vijaya Karnataka 15 Dec 2019, 5:00 am
ಶಿಗ್ಗಾವಿ: ಹೆಚ್‌ಐವಿ ಏಡ್ಸ್‌ ಸೋಂಕಿತರ ಬಗ್ಗೆ ಕಳಂಕ ಮತ್ತು ತಾರತಮ್ಯ ಬೇಡ. ಪ್ರೀತಿ, ವಿಶ್ವಾಸ ಮಮತೆ ಆರೈಕೆ ಬೆಂಬಲದಿಂದ ಸೋಂಕಿತರನ್ನು ಕಂಡಾಗ ಮಾತ್ರ ನಾವು ಭಯಾನಕ ಮತ್ತು ಮಹಾಮಾರಿ ರೋಗ ತಡೆಗಟ್ಟಬಹುದು ಎಂದು ಜಿಲ್ಲಾಆಸ್ಪತ್ರೆ ಎ.ಆರ್‌.ಟಿ ಕೇಂದ್ರದ ಹಿರಿಯ ಆಪ್ತ ಸಮಾಲೋಚಕ ಸುಧಾಕರ ದೈವಜ್ಞ ಹೇಳಿದರು.
Vijaya Karnataka Web love is a disease away from mama
ಪ್ರೀತಿ, ಮಮತೆಯಿಂದ ರೋಗ ದೂರ


ಪಟ್ಟಣದ ರಂಭಾಪುರಿ ಜಗದ್ಗುರು ವೀರ ಗಂಗಾದರ ಕಲಾ ಮತ್ತು ವಾಣಿಜ್ಯ ಪದವಿಪೂರ್ವ ಮಹಾ ವಿದ್ಯಾಲಯ, ಆರೋಗ್ಯ ಇಲಾಖೆ, ರೆಡ್‌ರಿಬ್ಬನ್‌ ಕ್ಲಬ್‌ ಮತ್ತು ರಾಷ್ಟ್ರೀಯ ಸೇವಾ ಯೋಜನೆ ಆಶ್ರಯದಲ್ಲಿನೆಡೆದ ವಿಶ್ವ ಏಡ್ಸ್‌ ದಿನಾಚರಣೆ ಕಾರ್ಯಕ್ರಮದಲ್ಲಿಮಾತನಾಡಿದ ಅವರು, ಹೆಚ್‌.ಐ.ವಿ. ಸೋಂಕಿತರಿಗೆ ಸರಕಾರದಿಂದ ಎಲ್ಲಸೌಲಭ್ಯಗಳು ದೊರೆಯತ್ತಿವೆ ಎಂದರು.

ತಾಲೂಕು ಆಸ್ಪತ್ರೆ ಆಪ್ತ ಸಮಾಲೋಚಕಿ ರೇಣುಕಾ ಹೊಸಮನಿ ಮಾತನಾಡಿ, ಇಂದಿನ ಯುವಕರಲ್ಲಿಹೆಚ್ಚು ಈ ಸೋಂಕಿತ ರೋಗಕ್ಕೆ ತುತ್ತಾಗುತ್ತಿದ್ದಾರೆ. ನಿಮ್ಮ ಭವಿಷ್ಯದ ಬಗ್ಗೆ ಗುರಿ ಹೊಂದಿ ಯಶಸ್ಸು ಸಾಧಿಸುವ ಮೂಳಕ ಪಾಲಕರ ಹೆಸರು ಉಳಿಸುವ ಕೆಲಸವಾಗಬೇಕು. ಸ್ವಯಂ ಪ್ರೇರಿತವಾಗಿ ಹೆಚ್‌.ಐ.ವಿ. ರಕ್ತ ಪರೀಕ್ಷೆಯನ್ನು ಹತ್ತಿರದ ಸರಕಾರಿ ಆಸ್ಪ ತ್ರೆಯಲ್ಲಿಮಾಡಿಸಿ ನಿಮ್ಮ ಆರೋಗ್ಯದ ಬಗ್ಗೆ ಪೂರ್ಣ ಮಾಹಿತಿ ಪಡೆದುಕೊಳ್ಳಬೆಕು ಎಂದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಾಚಾರ್ಯ ಪ್ರೊ.ಎಫ್‌.ಎಸ್‌.ಶಿವಣ್ಣನವರ, ಸರಕಾರ ಯುವಕರ ಶ್ರೇಯೋಭಿವೃದ್ಧಿಗೆ ಸಾವಿರಾರು ಕೋಟಿ ಹಣ ಖರ್ಚು ಮಾಡಿ ಕಾರ್ಯಕ್ರಮ ರೂಪಿಸುತ್ತಿದೆ. ಸದ್ಭಳಿಕೆ ಮಾಡಿಕೊಳ್ಳುವ ಮೂಲಕ ಸ್ವಾವಲಂಬನೆ ಬದುಕು ಕಟ್ಟಿಕೊಳ್ಳಬೇಕು ಹೊರತು, ದುಶ್ಚಟಗಳಿಗೆ ದಾಸರಾಗಿ ಬದುಕು ಹಾಳು ಮಾಡಿಕೊಳ್ಳಬಾರದು ಎಂದು ಸಲಹೆ ನೀಡಿದರು.

ಪ್ರೊ.ಎಸ್‌.ಎನ್‌.ತೀರ್ಥ, ಎಂ..ಎಸ್‌.ಶಿದ್ದಪ್ಪನವರ, ಎಸ್‌.ವ್ಹಿ.ಕುಲಕರ್ಣಿ, ಎಸ್‌.ವ್ಹಿ.ಬಳಿಗಾರ, ಎನ್‌.ಸಿ.ನಾಯಕ, ಎಸ್‌.ಎಸ್‌, ಚಿಕ್ಕಮಠ, ಬಿ.ಸಿ.ಹೊನ್ನಣ್ಣವರ, ಡಾ.ವಿನಯ ಹೆಚ್‌.ಕೆ. ಸೇರಿದಂತೆ ವಿಧ್ಯಾರ್ಥಿಗಳು ಉಪಸ್ಥಿತರಿದ್ದರು.

ವರ್ಷ ಬಿಂದಲಿ ಸ್ವಾಗತಿಸಿದರು. ಪ್ರೊ.ಎಸ್‌.ಬಿ. ಪೂಜಾರ, ಬಸವರಾಜ ಕೋರಿಶೆಟ್ಟರ ನಿರೂಪಿಸಿದರು. ಪಕ್ಕಿರೇಶ ಜಾಡರ ವಂದಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ