ಆ್ಯಪ್ನಗರ

ತಗ್ಗು ಗುಂಡಿ, ವಾಹನ ಸವಾರರಿಗೆ ಜೀವಭಯ

ಗಣೇಶ ನಂದಿಗಾವಿ ಕುಮಾರಪಟ್ಟಣ: ಕುಮಾರಪಟ್ಟಣದ ಶ್ರೀ ಮಹರ್ಷಿ ವಾಲ್ಮೀಕಿ ಸರ್ಕಲ್‌ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿತಗ್ಗು ಗುಂಡಿಗಳು ಬಿದ್ದು ವಾಹನ ಸಂಚಾರಕ್ಕೆ ಸಂಚಕಾರವಿದ್ದರೂ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಕಣ್ಣಿದ್ದು ಕುರುಡರಾಗಿದ್ದಾರೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

Vijaya Karnataka 13 Oct 2019, 5:00 am
ಗಣೇಶ ನಂದಿಗಾವಿ ಕುಮಾರಪಟ್ಟಣ: ಕುಮಾರಪಟ್ಟಣದ ಶ್ರೀ ಮಹರ್ಷಿ ವಾಲ್ಮೀಕಿ ಸರ್ಕಲ್‌ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿತಗ್ಗು ಗುಂಡಿಗಳು ಬಿದ್ದು ವಾಹನ ಸಂಚಾರಕ್ಕೆ ಸಂಚಕಾರವಿದ್ದರೂ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಕಣ್ಣಿದ್ದು ಕುರುಡರಾಗಿದ್ದಾರೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
Vijaya Karnataka Web 12  KPM 01  NH4 GUNDI_23


ಕುಮಾರಪಟ್ಟಣದಿಂದ ವಾಲ್ಮೀಕಿ ಸರ್ಕಲ್‌ ಮೂಲಕ ಹರಿಹರ ನಗರ ತಲುಪುವ ಹೊಸ ಸೇತುವೆ ಮೂಲಕ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿತಗ್ಗು ಗುಂಡಿಗಳು ಬಿದ್ದು ಹಲವು ದಿನಗಳಾದರೂ ದುರಸ್ಥಿ ಕಾರ್ಯಕ್ಕೆ ಸಂಬಂಧಪಟ್ಟ ಇಲಾಖೆ ಮುಂದಾಗಿಲ್ಲಎಂಬುದು ಇಲ್ಲಿನ ನಾಗರಿಕರ ಆರೋಪವಾಗಿದೆ.

ರಾಷ್ಟ್ರೀಯ ಹೆದ್ದಾರಿ 4 ರ ಗತಿ ಅಧೋಗತಿಯಾಗಿದ್ದು, ತಗ್ಗು ಗುಂಡಿಗಳಿಂದ ಕೂಡಿದೆ. ಸಾರ್ವಜನಿಕರಿಗೆ ಮತ್ತು ವಾಹನ ಸವಾರರಿಗೆ ಜೀವಭಯ ಕಾಡುತ್ತಿದೆ, ಸುಗಮ ಸಂಚಾರಕ್ಕೆ ಹೆದ್ದಾರಿ ಪ್ರಾಧಿಕಾರ ಕ್ರಮ ಕೈಗೊಳ್ಳದಿದ್ದರೆ ಉಗ್ರ ಹೋರಾಟ ಹಮ್ಮಿಕೊಳ್ಳುವುದಾಗಿ ಗ್ರಾಮಸ್ಥರು ಆಗ್ರಹಿಸಿದ್ದಾರೆ. ಅಯ್ಯೋ ಇದೇನಪ್ಪಾ ಹಳ್ಳಿಗಳಿಗೆ ಸಂಪರ್ಕ ಕಲ್ಪಿಸೋ ರಸ್ತೆನಾ ಎಂಬ ಚಿಂತೆ ವಾಹನ ಸವಾರರಿಗೆ ತಲೆ ನೋವಾಗಿ ಪರಿಣಮಿಸಿದೆ.

ಪುಣೆಯಿಂದ ಬೆಂಗಳೂರಿಗೆ ತೆರಳುವ ರಾಷ್ಟ್ರೀಯ ಹೆದ್ದಾರಿ-4 ರ ರಸ್ತೆಯಲ್ಲಿಸಾರಿಗೆ ಸಂಸ್ಥೆ ಸೇರಿದಂತೆ ಖಾಸಗಿ ವಾಹನ ಸವಾರರಿಗೂ ಅತಿ ಹೆಚ್ಚು ಸಂಚಾರ ಹೊಂದಿರುವ ರಸ್ತೆ ಇದಾಗಿದ್ದು, ಕೆಲ ದಿನಗಳ ಹಿಂದೆ ಖಾಸಗಿ ವಾಹನಗಳು ಮತ್ತು ಸಾರಿಗೆ ಸಂಸ್ಥೆಯ ಎಲ್ಲಬಸ್‌ಗಳು ಬೈಪಾಸ್‌ ರಸ್ತೆ ಮೂಲಕ ಹರಿಹರ ನಗರ ತಲುಪುತ್ತಿದ್ದವು. ಆದರೆ, ಈಗ ಎಲ್ಲವಾಹನಗಳು ಇದೇ ರಸ್ತೆಯಲ್ಲಿಯೇ ಸಂಚಾರ ಮಾಡುವುದರಿಂದ ವಾಹನಗಳ ಸಂಚಾರ ದಟ್ಟಣೆ ಹೆಚ್ಚಾಗಿದೆ.

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಕ್ರಮ ಕೈಗೊಳ್ಳಬೇಕು. ರಾಜ್ಯದಲ್ಲಿರುವ ಎಲ್ಲ ಟೋಲ್‌ಗಿಂತ ಕರೂರ ಟೋಲ್‌ಗೇಟ್‌ ಅತೀ ಹೆಚ್ಚು ಆದಾಯ ಬರುವ ಟೋಲಾಗಿದ್ದರೂ, ಟೋಲ್‌ಗೇಟ್‌ ನಿಂದ 10 ಕಿಮೀ. ಅಂತರವಿರುವ ಕುಮಾರಪಟ್ಟಣದ ವಾಲ್ಮೀಕಿ ಸರ್ಕಲ್‌ ಹತ್ತಿರ ಹೈವೆಯಲ್ಲಿಗುಂಡಿ ಬಿದ್ದರೂ ರಿಪೇರಿಗೆ ಮುಂದಾಗುತ್ತಿಲ್ಲಎಂದು ಸ್ಥಳೀಯರು ಆರೋಪಿಸಿದ್ದಾರೆ. ಸಾರ್ವಜನಿಕ ಕೇಂದ್ರ ಸ್ಥಳ ವಾಲ್ಮೀಕಿ ವೃತ್ತದಲ್ಲಿನಾಲ್ಕು ರಸ್ತೆಗಳು ಒಂದೆಡೆ ಕೂಡುವ ರಸ್ತೆ ಇದಾಗಿದೆ. ರಾಣೇಬೆನ್ನೂರು ಮತ್ತು ಹನಗವಾಡಿ, ಹಲಸಬಾಳು ಮತ್ತು ಹರಿಹರ, ನಲವಾಗಲ ಗ್ರಾಮಗಳ ರಸ್ತೆಗಳು ಇಲ್ಲಿಸಂಪರ್ಕ ಕಲ್ಪಿಸುತ್ತವೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ