ಆ್ಯಪ್ನಗರ

ಲಿಂ.ಚನ್ನವೀರ ಸ್ವಾಮೀಜಿಯವರನ್ನು ಗುರುಗಳಾಗಿ ಪಡೆದ ಭಕ್ತರೇ ಸೌಭಾಗ್ಯವಂತರು

ಅಕ್ಕಿಆಲೂರು : ಭಕ್ತರ ಶ್ರೇಯೋಭಿವೃದ್ಧಿಗೆ ತಮ್ಮ ಜೀವಿತ ಸವೆಸಿರುವ ಶ್ರೇಷ್ಠ ಯತಿಗಳಾದ ಲಿಂ.ಚನ್ನವೀರ ಸ್ವಾಮೀಜಿಯ ಜನ್ಮ ಶತಮಾನೋತ್ಸವ ಹತ್ತಾರು ಸಾಮಾಜಿಕ ಸೇವಾ ಚಟುವಟಿಕೆಗಳೊಂದಿಗೆ ಅರ್ಥಪೂರ್ಣವಾಗಿ ತೆರೆಕಂಡಿದೆ. ಈ ಐತಿಹಾಸಿಕ ಧಾರ್ಮಿಕ ಸಮಾರಂಭದ ಯಶಸ್ಸಿನ ಶ್ರೇಯಸ್ಸು ಭಕ್ತ ಸಮುದಾಯಕ್ಕೆ ಸಲ್ಲಬೇಕಿದೆ ಎಂದು ಹುಬ್ಬಳ್ಳಿಯ ಮೂರುಸಾವಿರ ಮಠದ ಗುರುಸಿದ್ದ ರಾಜಯೋಗೀಂದ್ರ ಸ್ವಾಮೀಜಿ ಹೇಳಿದರು.

Vijaya Karnataka 30 Dec 2018, 5:00 am
ಅಕ್ಕಿಆಲೂರು : ಭಕ್ತರ ಶ್ರೇಯೋಭಿವೃದ್ಧಿಗೆ ತಮ್ಮ ಜೀವಿತ ಸವೆಸಿರುವ ಶ್ರೇಷ್ಠ ಯತಿಗಳಾದ ಲಿಂ.ಚನ್ನವೀರ ಸ್ವಾಮೀಜಿಯ ಜನ್ಮ ಶತಮಾನೋತ್ಸವ ಹತ್ತಾರು ಸಾಮಾಜಿಕ ಸೇವಾ ಚಟುವಟಿಕೆಗಳೊಂದಿಗೆ ಅರ್ಥಪೂರ್ಣವಾಗಿ ತೆರೆಕಂಡಿದೆ. ಈ ಐತಿಹಾಸಿಕ ಧಾರ್ಮಿಕ ಸಮಾರಂಭದ ಯಶಸ್ಸಿನ ಶ್ರೇಯಸ್ಸು ಭಕ್ತ ಸಮುದಾಯಕ್ಕೆ ಸಲ್ಲಬೇಕಿದೆ ಎಂದು ಹುಬ್ಬಳ್ಳಿಯ ಮೂರುಸಾವಿರ ಮಠದ ಗುರುಸಿದ್ದ ರಾಜಯೋಗೀಂದ್ರ ಸ್ವಾಮೀಜಿ ಹೇಳಿದರು.
Vijaya Karnataka Web lt channavevira swamiji is a devotee who is a guru
ಲಿಂ.ಚನ್ನವೀರ ಸ್ವಾಮೀಜಿಯವರನ್ನು ಗುರುಗಳಾಗಿ ಪಡೆದ ಭಕ್ತರೇ ಸೌಭಾಗ್ಯವಂತರು


ಇಲ್ಲಿನ ವಿರಕ್ತಮಠದಲ್ಲಿ ನಡೆದ ಲಿಂ.ಚನ್ನವೀರ ಸ್ವಾಮೀಜಿ ಜನ್ಮ ಶತಮಾನೋತ್ಸವದ ಅಭಿನಂದನಾ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದರು. ಪೂಜ್ಯರ ಜನ್ಮ ಶತಮಾನೋತ್ಸವದ ನೆಪದಲ್ಲಿ ಸಾಮಾಜಿಕ ಸೇವಾ ಕೈಂಕರ್ಯಗಳು ನಡೆದಿವೆ. ಒಂದು ತಿಂಗಳ ಕಾಲ ನಡೆದ ಸಮಾರಂಭ ಅದ್ಧೂರಿಗಿಂತಲೂ ಹೆಚ್ಚು ಅರ್ಥಪೂರ್ಣವಾಗಿ ನಡೆದಿದ್ದು, ಒಂದು ನೂರು ವರ್ಷಗಳ ನಂತರ ಪೂಜ್ಯರು ಮತ್ತೆ ಜ್ಯೋತಿ ಸ್ವರೂಪರಾಗಿ ಆಗಮಿಸಿ ಭಕ್ತರನ್ನು ಹರಸುತ್ತಿದ್ದಾರೆ ಎಂದು ಹೇಳಿದ ಅವರು ಕನ್ನಡ ನಾಡಿನಲ್ಲಿನ ಅಸಂಖ್ಯಾತ ಮಠಗಳು ಮಠಾಧೀಶರಿಲ್ಲದೆ ಅನಾಥವಾಗಿವೆ. ಇಂಥ ಸಂದರ್ಭದಲ್ಲಿ ಇಡೀ ನಾಡು ಗೌರವಿಸುವಂಥ ಲಿಂ.ಚನ್ನವೀರ ಸ್ವಾಮೀಜಿಯನ್ನು ಗುರುಗಳಾಗಿ ಪಡೆದ ಭಕ್ತರೇ ಸೌಭಾಗ್ಯವಂತರು. ಅವರ ಸಮರ್ಥ ಉತ್ತರಾಧಿಕಾರಿಯಾಗಿ ಶ್ರೀಮಠ ಮತ್ತು ಭಕ್ತ ಸಮುದಾಯ ಮುನ್ನಡೆಸುತ್ತಿರುವ ಶಿವಬಸವ ಸ್ವಾಮೀಜಿ ಸೌಮ್ಯ ಸ್ವಭಾವದರು. ಇಂಥ ಸ್ವಾಮಿಗಳು ಸಿಗುವುದು ಕಷ್ಟಸಾಧ್ಯ. ಕಳೆದ ಏಳೆಂಟು ವರ್ಷಗಳಿಂದ ಕಾಳಜಿ ವಹಿಸಿ ಶ್ರೀಮಠವನ್ನು ಅಭಿವೃದ್ಧಿ ಪಥದಲ್ಲಿ ಮುನ್ನಡೆಸುತ್ತಿರುವುದು ಅವರ ಕರ್ತೃತ್ವ ಶಕ್ತಿ ಎತ್ತಿ ತೋರಿಸುತ್ತದೆ ಎಂದರು.

ನೇತೃತ್ವ ವಹಿಸಿದ್ದ ವಿರಕ್ತಮಠದ ಶಿವಬಸವ ಸ್ವಾಮೀಜಿ ಮಾತನಾಡಿ, ಲಿಂ.ಚನ್ನವೀರ ಸ್ವಾಮೀಜಿ ಜನ್ಮ ಶತಮಾನೋತ್ಸವ ಅರ್ಥಪೂರ್ಣವಾಗಿ ಆಚರಿಸಬೇಕೆನ್ನುವ ಸತ್ಯಸಂಕಲ್ಪ ಈಡೇರಿದೆ. ವಿರಕ್ತಮಠ ಯಾವುದೇ ಜಾತಿಗೆ ಸೀಮಿತವಾಗಿಲ್ಲ. ರಾಜಕೀಯ ಪಕ್ಷ ಗಳ ಮುಖವಾಣಿಯಾಗಿಯೂ ಕಾರ್ಯ ನಿರ್ವಹಿಸಲ್ಲ. ಮಠಕ್ಕೆ ಆಗಮಿಸುವ ಭಕ್ತರು ಸ್ವಾರ್ಥ ಬದಿಗೊತ್ತಿ ಜಾತಿ, ಪಕ್ಷ ಗಳ ಮುಖ ಕಳಚಿಟ್ಟು ಒಳ ಬರಬೇಕು. ಮಠ ಇಡೀ ಹಿಂದೂ ಸಮಾಜದ ಶ್ರದ್ಧೆಯ ಕೇಂದ್ರ ಎಂದು ಹೇಳಿದ ಅವರು ಪೂಜ್ಯರ ಜನ್ಮ ಶತಮಾನೋತ್ಸವದ ಯಶಸ್ಸಿನ ಹಿಂದೆ ಅಸಂಖ್ಯಾತ ಕೈಗಳು ಕೆಲಸ ಮಾಡಿದ್ದು, ಎಲ್ಲರಿಗೂ ಶುಭವಾಗಲಿ ಎಂದು ಹಾರೈಸಿದರು.

ಸಮ್ಮುಖ ವಹಿಸಿದ್ದ ಕೂಡಲದ ಗುರುನಂಜೇಶ್ವರ ಮಠದ ಗುರುಮಹೇಶ್ವರ ಸ್ವಾಮೀಜಿ, ಸ್ಥಳೀಯ ಮುತ್ತಿನಕಂತಿಮಠದ ಚಂದ್ರಶೇಖರ ಸ್ವಾಮೀಜಿ ಮಾತನಾಡಿ, ವಿದ್ಯೆ, ವಿನಯ, ಶಿಸ್ತು, ಶ್ರದ್ಧೆ, ಭಕ್ತಿಗೆ ಅಕ್ಕಿಆಲೂರು ಹೆಸರುವಾಸಿ. ಜಿಲ್ಲೆಯ ಪ್ರಮುಖ ವಾಣಿಜ್ಯ ಕೇಂದ್ರವಾಗಿ ನಿಧಾನವಾಗಿ ಧಾರ್ಮಿಕ, ಸಾಂಸ್ಕೃತಿಕ ಕೇಂದ್ರವಾಗಿ ಗುರುತಿಸಿಕೊಂಡಿರುವುದು ಹೆಮ್ಮೆ ಪಡುವ ಸಂಗತಿಯಾಗಿದೆ. ಪೂಜ್ಯರ ಜನ್ಮ ಶತಮಾನೋತ್ಸವದಲ್ಲಿ ನಾಡ ಜನ ಭಾಗಿಯಾಗಿ ಪುನೀತರಾಗಿದ್ದಾರೆ ಎಂದರು.

ಇದೇ ಸಂದರ್ಭದಲ್ಲಿ ಜನ್ಮ ಶತಮಾನೋತ್ಸವದ ಯಶಸ್ಸಿಗೆ ಕಾರಣರಾದ ವಿವಿಧ ಸಮಿತಿಗಳ ಪದಾಧಿಕಾರಿಗಳಿಗೆ, ದಾನಿಗಳಿಗೆ, ಜನಪ್ರತಿನಿಧಿಗಳಿಗೆ ಸನ್ಮಾನಿಸಲಾಯಿತು. ಜನ್ಮ ಶತಮಾನೋತ್ಸವ ಸಮಿತಿ ಅಧ್ಯಕ್ಷ ಗಂಗಪ್ಪ ಸಾಲವಟಗಿ, ಶ್ರೀಮಠದ ಸೇವಾ ಸಮಿತಿ ಅಧ್ಯಕ್ಷ ಕೊಟ್ಟೂರಬಸಪ್ಪ ಬೆಲ್ಲದ ಇದ್ದರು. ವೀರೇಶ ನೆಲವಿಗಿ ಸ್ವಾಗತಿಸಿದರು. ಎಸ್‌.ಎಂ.ಸಿಂಧೂರ ಪ್ರಾಸ್ತವಿಕವಾಗಿ ಮಾತನಾಡಿದರು. ಶಿವಬಸಯ್ಯ ಚಿಲ್ಲೂರಮಠ ನಿರೂಪಿಸಿದರು. ನಾಗರಾಜ್‌ ಸಿಂಗಾಪೂರ ವಂದಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ