ಆ್ಯಪ್ನಗರ

ಸಂಶೋಧನಾ ಕ್ಷೇತ್ರದಲ್ಲಿ ಮಕ್ಕಳಿಗೆ ಆಸಕ್ತಿ ಹುಟ್ಟಿಸಿ

ಹಾವೇರಿ: ಸೊರಗುತ್ತಿರುವ ಸಂಶೋಧನಾ ಕ್ಷೇತ್ರದ ಕಡೆ ವಿದ್ಯಾರ್ಥಿಗಳನ್ನು ಆಕರ್ಷಿತರಾಗಿ ಮಾಡಿ ಸಂಶೋಧನಾ ಕ್ಷೇತ್ರವನ್ನು ಬೆಳೆಸಬೇಕು ಎಂದು ಸಾರ್ವಜನಿಕ ಶಿಕ್ಷ ಣ ಇಲಾಖೆಯ ಉಪನಿರ್ದೇಶಕ ಅಂದಾನೆಪ್ಪ ವಡಗೇರಿ ಹೇಳಿದರು.

Vijaya Karnataka 19 Aug 2019, 5:00 am
ಹಾವೇರಿ: ಸೊರಗುತ್ತಿರುವ ಸಂಶೋಧನಾ ಕ್ಷೇತ್ರದ ಕಡೆ ವಿದ್ಯಾರ್ಥಿಗಳನ್ನು ಆಕರ್ಷಿತರಾಗಿ ಮಾಡಿ ಸಂಶೋಧನಾ ಕ್ಷೇತ್ರವನ್ನು ಬೆಳೆಸಬೇಕು ಎಂದು ಸಾರ್ವಜನಿಕ ಶಿಕ್ಷ ಣ ಇಲಾಖೆಯ ಉಪನಿರ್ದೇಶಕ ಅಂದಾನೆಪ್ಪ ವಡಗೇರಿ ಹೇಳಿದರು.
Vijaya Karnataka Web HVR-18 HAVERI 2


ನಗರದ ಮುನ್ಸಿಪಲ್‌ ಹೈಸ್ಕೂಲ್‌ನಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಕರ್ನಾಟಕ ವಿಜ್ಞಾನ ಪ್ರೋತ್ಸಾಹಕ ಸೊಸೈಟಿ, ಸಾರ್ವಜನಿಕ ಶಿಕ್ಷ ಣ ಇಲಾಖೆ ಹಾಗೂ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಜಿಲ್ಲಾ ಘಟಕ ಸಹಯೋಗದಲ್ಲಿ ಶನಿವಾರ ನಡೆದ ಜಿಲ್ಲೆಯ ಯುವ ವಿಜ್ಞಾನಿಗಳ ಆಯ್ಕೆ ಕಾರ್ಯಕ್ರಮ ಮತ್ತು ವಿವಿಧ ಸ್ಪರ್ಧೆಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.

ಟಿ.ವಿ. ಪ್ರೀಜ್‌, ಫೋನ್‌, ಮಿಕ್ಸಿ ಹೀಗೆ ಅಡುಗೆ ಮನೆಯಿಂದ ಅಂತರಿಕ್ಷ ದವರೆಗೆ ವಿಜ್ಞಾನದ ಬಳಕೆ ವ್ಯಾಪಕವಾಗಿ ಹರಡಿದೆ. ವಿಜ್ಞಾನದ ಅನ್ವಯ ಇಲ್ಲದೆ ಹೋದರೆ ಬದುಕೆ ದುಸ್ಥರ ಅನ್ನುವಂತಿದೆ. ನಿತ್ಯ ಬದುಕಿನ ಅವಿಭಾಜ್ಯ ಅಂಗ ವಿಜ್ಞಾನವಾಗಿದೆ. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿ ಜೀವನದಿಂದಲೇ ಸಂಶೋಧನೆಯತ್ತ ಆಸಕ್ತಿ ಬೆಳೆಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ವಿಷಯ ಪರೀವಿಕ್ಷ ಕ ಬಿ.ಎಸ್‌. ಪಾಟೀಲ ಮಾತನಾಡಿ, ವಿಜ್ಞಾನದ ಕೌತುಕಗಳ ಹಿಂದಿನ ರಹಸ್ಯ ಭೇಧಿಸುವ ಕೌತುಕವನ್ನು ಮಕ್ಕಳು ರೂಢಿಸಿಕೊಳ್ಳಬೇಕು ಎಂದು ಹೇಳಿದರು. ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಕಾರ್ಯಕಾರಿ ಮಂಡಳಿ ಸದಸ್ಯ ಆರ್‌.ಎಸ್‌. ಪಾಟೀಲ, ವಿಷಯ ಪರಿವೀಕ್ಷ ಕ ಮಂಜಪ್ಪ, ಬಸಮ್ಮನವರ, ಆನಂದ ಹಾಗೂ ನಾಗರಾಜ ಸೇರಿದಂತೆ ಉಪಸ್ಥಿತರಿದ್ದರು.

ವಿಜೇತರ ವಿವರ: ಸ್ಪರ್ಧೆಗಳಲ್ಲಿ 17 ಫ್ರೌಢಶಾಲೆಯ ತಂಡಗಳು ಭಾಗವಹಿಸಿದ್ದವು. ಹಾವನೂರಿನ ಸರ್ಕಾರಿ ಫ್ರೌಢಶಾಲೆಯ ಮೇಘನಾ ಜೋಗ್‌ ಪ್ರಥಮ, ಜ್ಯೋತಿ ಮರೋಳ ದ್ವಿತೀಯ, ಶಿಗ್ಗಾವಿಯ ಎಸ್‌.ಬಿ.ಬಿ. ಮಾಮಲೇದೇಸಾಯಿ ಫ್ರೌಢಶಾಲೆಯ ಸೌಜನ್ಯ ತೃತೀಯ ಸ್ಥಾನ ಪಡೆದಿದ್ದಾರೆ. ಕ್ರಮವಾಗಿ ಫ್ರಥಮ, ದ್ವಿತೀಯ, ತೃತೀಯ ಸ್ಥಾನಕ್ಕೆ ರೂ. 5000, 3000, 2000 ನಗದು ಪಾರಿತೋಷಕ ಹಾಗೂ ಪ್ರಮಾಣ ಪತ್ರ ನೀಡಿ ಗೌರವಿಸಲಾಯಿತು. ಮೂವರು ಯುವ ವಿಜ್ಞಾನಿಗಳು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ