ಆ್ಯಪ್ನಗರ

ಗ್ರಾಹಕರ ಬೃಹತ್‌ ಪ್ರತಿಭಟನೆ

ಹಾವೇರಿ: ಸಮೃದ್ಧಿ ಜೀವನ ಮಲ್ಟಿ ಸ್ಟೇಟ್‌ ಮಲ್ಟಿ ಪರ್ಪಸ್‌ ಕೋ-ಆಪ್‌ರೇಟಿವ್‌ ಸೊಸೈಟಿ ಗ್ರಾಹಕರಿಗೆ ಹಣ ಕೊಡದೇ ಪಂಗನಾಮ ಹಾಕಿರುವುದನ್ನು ಖಂಡಿಸಿ, ಹಣ ಕೊಡಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ರಕ್ಷಣೆ ಮತ್ತು ಭ್ರಷ್ಟಾಚಾರ ನಿರ್ಮೂಲನಾ ಸಮಿತಿಯ ನೇತೃತ್ವದಲ್ಲಿ ನೂರಾರು ಗ್ರಾಹಕರು ಹಾವೇರಿಯಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.

Vijaya Karnataka 25 Jun 2019, 5:00 am
ಹಾವೇರಿ: ಸಮೃದ್ಧಿ ಜೀವನ ಮಲ್ಟಿ ಸ್ಟೇಟ್‌ ಮಲ್ಟಿ ಪರ್ಪಸ್‌ ಕೋ-ಆಪ್‌ರೇಟಿವ್‌ ಸೊಸೈಟಿ ಗ್ರಾಹಕರಿಗೆ ಹಣ ಕೊಡದೇ ಪಂಗನಾಮ ಹಾಕಿರುವುದನ್ನು ಖಂಡಿಸಿ, ಹಣ ಕೊಡಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ರಕ್ಷಣೆ ಮತ್ತು ಭ್ರಷ್ಟಾಚಾರ ನಿರ್ಮೂಲನಾ ಸಮಿತಿಯ ನೇತೃತ್ವದಲ್ಲಿ ನೂರಾರು ಗ್ರಾಹಕರು ಹಾವೇರಿಯಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.
Vijaya Karnataka Web HVR-24 HAVERI 2


ಸಮಿತಿ ರಾಜ್ಯಾಧ್ಯಕ್ಷ ಬಸವರಾಜ ಟೀಕಿಹಳ್ಳಿ ನೇತೃತ್ವದಲ್ಲಿ ನಗರದ ಶ್ರೀಪುರಸಿದ್ಧೇಶ್ವರ ದೇವಸ್ಥಾನ ದಿಂದ ಪ್ರತಿಭಟನೆ ಆರಂಭಿಸಿದ ಗ್ರಾಹಕರು, ಕಂಪನಿ ಮೋಸ, ಸರಕಾರದ ನಿರ್ಲಕ್ಷ್ಯ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಅಂತಿಮವಾಗಿ ಬಸ್‌ ನಿಲ್ದಾಣದ ಹೊಸಮನಿ ಸಿದ್ಧಪ್ಪ ವೃತ್ತದಲ್ಲಿ ಕನಿಷ್ಠ ಒಂದು ಗಂಟೆಗೂ ಅಧಿಕ ಹೆದ್ದಾರಿ ತಡೆ ನಡಿಸಿದರು.

ಈ ವೇಳೆ ಮಾತನಾಡಿದ ಅಧ್ಯಕ್ಷ ಟೀಕಿಹಳ್ಳಿ, ಈ ಕಂಪನಿಗೆ ಎಜೆಂಟರ್‌ ಮೂಲಕ ಗ್ರಾಹಕರಿಂದ ಠೇವಣಿ ಸಂಗ್ರಹಿಸುತ್ತಿದ್ದ ಕಾರಣಕ್ಕೆ ಕಂಪನಿ ಬದಲು ಅಮಾಯಕ ಠೇವಣಿದಾರರು ಎಜೆಂಟರ ಮೇಲೆ ಹಲ್ಲೆ ಮಾಡುತ್ತಿದ್ದಾರೆ. ಕಂಪನಿ ಮುಚ್ಚಿ ಹೋಗಿರುವುದರಿಂದ ಹಣ ಕೊಡುವಂತೆ ಮನೆ ಮುಂದೆ ಕುಡಿದು ಗಲಾಟೆ ಮಾಡುವ ಮೂಲಕ ಮಾನ ಹರಾಜು ಹಾಕುತ್ತಿದ್ದಾರೆ.

ಕಂಪನಿ ಕೇಂದ್ರ ಸರಕಾರದ ಕೃಷಿ ಮತ್ತು ಸಹಕಾರ ಪತ್ತಿನ ಅಡಿಯಲ್ಲಿ ನೋಂದಾಯಿತಗೊಂಡಿರುತ್ತದೆ. ಇದು ಕೇವಲ ನಮ್ಮ ರಾಜ್ಯದಲ್ಲಿ ಮಾತ್ರವಲ್ಲದೇ ದೇಶವ್ಯಾಪಿ ಶಾಖೆಗಳನ್ನು ಹೊಂದಿದೆ. ರಾಜ್ಯದಲ್ಲಿ ಹಾವೇರಿ ಸೇರಿದಂತೆ 64 ಕಡೆಗಳಲ್ಲಿ ಶಾಖೆಗಳನ್ನು ಹೊಂದಿರುವ ಈ ಹಣಕಾಸು ಕಂಪನಿ 1300 ಕೋಟಿ ಠೇವಣಿ ಸಂಗ್ರಹಿಸಿದೆ. ಎಜೆಂಟರ್‌ ಮೂಲಕ ಹಣ ಸಂಗ್ರಹಿಸಿ 2013 ರಲ್ಲಿ ಕಂಪನಿ ಮುಚ್ಚಿ ಮೋಸ ಮಾಡಿದೆ. ಈ ಕಂಪನಿ ಬಗ್ಗೆ ಗೊತ್ತಿರದ ಗ್ರಾಹಕರು ಎಜೆಂಟರ ಮೇಲೆ ವಿಶ್ವಾಸ ಇಟ್ಟು ಹಣ ತುಂಬಿರುವ ಕಾರಣಕ್ಕೆ ಅವರೇ ಹಣ ಕೊಡುವಂತೆ ಕಿರುಕುಳ ನೀಡುತ್ತಿದ್ದಾರೆ. ಈ ಕಾರಣಕ್ಕೆ ಎಷ್ಟೋ ಜನ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಹಿಳೆಯರ ಬದುಕಂತೂ ಹೇಳದಷ್ಟು ತೊಂದರೆಗೆ ಸಿಲುಕಿದೆ.

ಜಿಲ್ಲಾಡಳಿತ ಕೂಡಲೇ ಸಂಬಂಧಿಸಿದ ಕಂಪನಿ ಅಧಿಕಾರಿಗಳ ಜತೆ ಸಂಪರ್ಕಿಸಿ ಎಜೆಂಟರ್‌ಗೆ ಮತ್ತು ಗ್ರಾಹಕರಿಗೆ ಬಡ್ಡಿ ಸಮೇತ ಹಣ ಕೊಡಿಸುವ ಮೂಲಕ ನ್ಯಾಯ ಕೊಡಿಸಬೇಕು. ತಪ್ಪಿ ದಲ್ಲಿ ರಾಜ್ಯದಾದ್ಯಂತ ಪ್ರತಿ ಜಿಲ್ಲೆಯಲ್ಲೂ ಉಗ್ರ ಪ್ರತಿಭಟನೆ ಕೈಗೊಳ್ಳಲಾಗುವುದೆಂದು ಎಚ್ಚರಿಕೆ ನೀಡಿದ್ದಾರೆ.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ