ಆ್ಯಪ್ನಗರ

ಮೋದಿ ಪ್ರಧಾನಿಯಾಗುವುದು ತಡೆಯಲು ಸಾಧ್ಯವಿಲ್ಲ: ಶಾಸಕ ಬಳ್ಳಾರಿ

ಬ್ಯಾಡಗಿ: ಸಮರ್ಥ ನಾಯಕನ ಆಡಳಿದಲ್ಲಿ ಭಾರತ ಕಳೆದೈದು ವರ್ಷಗಳಲ್ಲಿ ಮುನ್ನಡೆದು ಜಗತ್ತಿನ ಶಕ್ತಿ ಶಾಲಿ ರಾಷ್ಟ್ರವಾಗಿ ಹೊರಹೊಮ್ಮಿದೆ. ಈ ಬಾರಿ ದೇಶದಲ್ಲಿ ಮೋದಿ ಅಲೆಯಲ್ಲ ಬದಲಾಗಿ ಬಿರುಗಾಳಿಯೇ ಎದ್ದಿದ್ದು ನರೇಂದ್ರ ಮೋದಿಯವರನ್ನು ಪ್ರಧಾನಿಯಾಗುವುದರಿಂದ ತಡೆಯುವುದು ಯಾರಿದಂಲೂ ಸಾಧ್ಯವಿಲ್ಲ ಎಂದು ಶಾಸಕ ವಿರೂಪಾಕ್ಷ ಪ್ಪ ಬಳ್ಳಾರಿ ಹೇಳಿದರು.

Vijaya Karnataka 9 Apr 2019, 5:00 am
ಬ್ಯಾಡಗಿ: ಸಮರ್ಥ ನಾಯಕನ ಆಡಳಿದಲ್ಲಿ ಭಾರತ ಕಳೆದೈದು ವರ್ಷಗಳಲ್ಲಿ ಮುನ್ನಡೆದು ಜಗತ್ತಿನ ಶಕ್ತಿ ಶಾಲಿ ರಾಷ್ಟ್ರವಾಗಿ ಹೊರಹೊಮ್ಮಿದೆ. ಈ ಬಾರಿ ದೇಶದಲ್ಲಿ ಮೋದಿ ಅಲೆಯಲ್ಲ ಬದಲಾಗಿ ಬಿರುಗಾಳಿಯೇ ಎದ್ದಿದ್ದು ನರೇಂದ್ರ ಮೋದಿಯವರನ್ನು ಪ್ರಧಾನಿಯಾಗುವುದರಿಂದ ತಡೆಯುವುದು ಯಾರಿದಂಲೂ ಸಾಧ್ಯವಿಲ್ಲ ಎಂದು ಶಾಸಕ ವಿರೂಪಾಕ್ಷ ಪ್ಪ ಬಳ್ಳಾರಿ ಹೇಳಿದರು.
Vijaya Karnataka Web HVR-08BYD3A


ಪಟ್ಣಣದ ಅಗಸನಹಳ್ಳಿಯಲ್ಲಿ ಸೇರಿದಂತೆ ವಿವಿಧೆಡೆಗಳಲ್ಲಿ ಹಾವೇರಿ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶಿವಕುಮಾರ ಉದಾಸಿ ಪರವಾಗಿ ಮತಯಾಚನೆ ಮಾಡಿ ಮಾತನಾಡಿದ ಅವರು ಮೋದಿ ಪ್ರಧಾನಿಯಾದ ನಂತರದಲ್ಲಿ ಭಾರತದ ಚರಿಷ್ಮಾ ಬದಲಾಗಿದ್ದು ಜಗತ್ತಿಗೆ ಭಾರತ ತನ್ನ ಶಕ್ತಿಯೇನು ಎಂಬುದನ್ನ ತೋರಿಸುತ್ತಿದೆ, ಪದೆ ಪದೇ ಬಾಲ ಬಿಚ್ಚುತ್ತಿದ್ದ ಚೀನಾ ಮತ್ತು ಪಾಕಿಸ್ತಾನ ಸದ್ದಡಿಗಿದ್ದು, ಮೋದಿ ಚಾಣಾಕ್ಷ ಆಡಳಿತಕ್ಕೆ ಸಾಕ್ಷಿ ಆದ್ದರಿಂದ ಮತ್ತೊಮ್ಮೆ ದೇಶವನ್ನು ದೇಶ ಭಕ್ತನ ಕೈಗೆ ಕೊಟ್ಟು ನಿರಾ ಳವಾಗುವ ಅವಶ್ಯಕತೆ ಇದೆ ಎಂದರು.

ಮಾಜಿ ಶಾಸಕ ಸುರೇಶಗೌಡ್ರ ಪಾಟೀಲ ಮಾತನಾಡಿ, ಇಲ್ಲಿಯವರೆಗೂ ಅಪ್ಪ, ಮಕ್ಕಳ ಪಕ್ಷ ವಾಗಿದ್ದ ಜೆಡಿಎಸ್‌ ಇದೀಗ ಸೊಸೆಯಂದಿರು ಹಾಗೂ ಮೊಮ್ಮಕ್ಕಳ ಪಕ್ಷ ವಾಗಿದೆ. ಚುನಾವಣೆ ಬಂದಾಗ ಕಾರ‍್ಯಕರ್ತರು ಕೆಲಸ ಮಾಡಬೇಕು ಅಧಿಕಾರ ಸಿಕ್ಕ ಬಳಿಕ ಅವರೆಲ್ಲಾ ಮನೆ ಸೇರಬೇಕು ಹೀಗಾಗಿ ಜೆಡಿಎಸ್‌ ಕಾರ‍್ಯಕರ್ತರು ಪಾರ್ಟ ಟೈಮ್‌ ಕೆಲಸಗಾರರಾಗಿದ್ದಾರೆ ಎಂದ ಆರೋಪಿಸಿದರು. ಬಿಜೆಪಿಗೆ ಕುಟುಂಬ ರಾಜಕಾರಣ ಗೊತ್ತಿಲ್ಲ, ಬೆಂಗಳೂರು ದಕ್ಷಿಣ ಕ್ಷೇತ್ರಕ್ಕೆ ಬಿಜೆಪಿಯ ಸಾಮಾನ್ಯ ಕಾರ‍್ಯಕರ್ತ ತೇಜಸ್ವಿ ಸೂರ್ಯ ಅವರಿಗೆ ಸ್ಪರ್ಧಿಸಲು ಅವಕಾಶ ನೀಡುವ ಮೂಲಕ ನಿಷ್ಟೆಯಿಂದ ಕೆಲಸ ಮಾಡುವವರ ಹಿಂದೆ ಪಕ್ಷ ವಿರುತ್ತದೆ ಎಂಬುದನ್ನು ಸಾಬೀತುಪಡಿಸಿದೆ ಆದ್ದರಿಂದ ಕ್ಷೇತ್ರದಲ್ಲಿ ಸಾಕಷ್ಟು ಕೆಲಸ ಮಾಡಿರುವ ಶಿವಕುಮಾರ ಉದಾಸಿಗೆ ಮತ ನೀಡುವಂತೆ ಕೋರಿದರು. ಮಾಜಿ ಪುರಸಭೆ ಅಧ್ಯಕ್ಷ ಬಸವರಾಜ ಛತ್ರದ ಪ್ರಾಸ್ತಾವಿಕವಾಗಿ ಮಾತನಾಡಿದರು.

ಶಂಕ್ರಣ್ಣ ಮಾತನವರ ವಿರೇಂದ್ರ ಶೆಟ್ಟರ, ಮುರಿಗೆಪ್ಪ ಶೆಟ್ಟರ್‌, ಎಪಿಎಂಸಿ ನಿರ್ದೇಶಕ ವಿಜಯಮಳಗಿ, ಯಮನೂರಪ್ಪ ಉಜನಿ, ಸುರೇಶ ಆಸಾದಿ, ಜಿತೇಂದ್ರ ಸುಣಗಾರ, ಮಲ್ಲಶಪ್ಪ ಬಣಕಾರ, ರವೀಂದ್ರ ಪಟ್ಟಣಶಟ್ಟಿ, ರಾಮಣ್ಣ ಉಕ್ಕುಂದ, ನಾರಾಯಣಪ್ಪ ಕರ್ನೂಲ್‌ ಇತರರು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ