ಆ್ಯಪ್ನಗರ

ಡಾಲರ್‌ ಎಕ್ಸೆಂಜ್‌ ನೆಪದಲ್ಲಿ ಹಣ ಕಳವು

ಹಾವೇರಿ: ಡಾಲರ್‌ ಎಕ್ಸೇಂಜ್‌ ಮಾಹಿತಿ ನೆಪದಲ್ಲಿ ವೆಹಿಕಲ್‌ ಶೋ ರೂಂಗೆ ಬಂದ ಆಗುಂತಕರ ತಂಡವೊಂದು ಕೇವಲ ಮೂರೇ ನಿಮಿಷದಲ್ಲಿ 16 ಸಾವಿರ ರೂ. ಕಳ್ಳತನ ಮಾಡಿ ಪರಾರಿಯಾಗಿರುವ ಪ್ರಕರಣ ನಗರದಲ್ಲಿ ಶನಿವಾರ ಬೆಳಕಿಗೆ ಬಂದಿದೆ.

Vijaya Karnataka 21 Jul 2019, 5:00 am
ಹಾವೇರಿ: ಡಾಲರ್‌ ಎಕ್ಸೇಂಜ್‌ ಮಾಹಿತಿ ನೆಪದಲ್ಲಿ ವೆಹಿಕಲ್‌ ಶೋ ರೂಂಗೆ ಬಂದ ಆಗುಂತಕರ ತಂಡವೊಂದು ಕೇವಲ ಮೂರೇ ನಿಮಿಷದಲ್ಲಿ 16 ಸಾವಿರ ರೂ. ಕಳ್ಳತನ ಮಾಡಿ ಪರಾರಿಯಾಗಿರುವ ಪ್ರಕರಣ ನಗರದಲ್ಲಿ ಶನಿವಾರ ಬೆಳಕಿಗೆ ಬಂದಿದೆ.
Vijaya Karnataka Web HVR-20 HAVERI 1   (1)


ನಗರದ ಹೊರ ವಲಯದಲ್ಲಿರುವ ಪ್ರತಿಷ್ಠಿತ ಶೋರೂಂನಲ್ಲಿ ಶುಕ್ರವಾರ ಸಂಜೆ ಈ ಘಟನೆ ನಡೆದಿದ್ದು, ಸಿಸಿ ಕ್ಯಾಮೆರಾ ಮೂಲಕ ಸಿನಿಮೀಯ ರೂಪದ ಕಳ್ಳರ ಕೈಚಳಕ ಶನಿವಾರ ಬಯಲಾಗಿದೆ. ಈ ಕುರಿತು ಶೋ ರೂಂ ಮಾಲೀಕರು ಶಹರ ಠಾಣೆಯಲ್ಲಿ ಪ್ರಕರಣ ದಾಖಲಿಸುವುದಾಗಿ ತಿಳಿಸಿದ್ದಾರೆ.

ಒಬ್ಬ ಮಹಿಳೆ, ಯುವಕ ಮತ್ತು ಮಧ್ಯವಯಸ್ಕ ಸೇರಿ ಮೂವರು ಈ ತಂಡದಲ್ಲಿದ್ದು, ಇವರ ಕಾರ್ಯಾಚರಣೆ ಯಾರಿಗೂ ಸಂಶಯಕ್ಕೆ ಆಸ್ಪದ ನೀಡಿಲ್ಲ. ಕೇವಲ ಮೂರ್ನಾಲ್ಕು ನಿಮಿಷದಲ್ಲಿ ಮಾಲೀಕರ ವಿಶ್ವಾಸ ಗಳಿಸಿ ಕ್ಯಾಶಿಯರ್‌ ಕ್ಯಾಬಿನ್‌ಗೆ ಹೋಗಿ ಕರೆನ್ಸಿ ನೋಡುವ ನೆಪದಲ್ಲಿ ತಮ್ಮ ಕೈಚಳಕ ತೋರಿಸಿ 500 ರೂ.ಮಾಲ್ಯದ ನೋಟುಗಳ 16 ಸಾವಿರ ರೂ.ಗಳನ್ನು ಕಳ್ಳತನ ಮಾಡಿದ್ದಾರೆ.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ