ಆ್ಯಪ್ನಗರ

'ಹಸು'ಗೂಸಿನ ಹಿಂಬಾಲಿಸಿದ ತಾಯಿ 'ಕರು'ಳು!

ಇದು ಕಲಿಯುಗದ ಕಾಮಧೇನುವಿನ ಮನಮಿಡಿಯುವ ಘಟನೆ

Vijaya Karnataka Web 28 Jan 2018, 9:12 pm
ಹಾವೇರಿ: ಇದು ಕಲಿಯುಗದ ಕಾಮಧೇನುವಿನ ಮನಮಿಡಿಯುವ ಘಟನೆ. ಗಾಯದ ಸಮಸ್ಯೆಯಿಂದ ನಿತ್ರಾಣಗೊಂಡು ಬಳಲುತ್ತಿದ್ದ ಕರುವನ್ನು ಪಶು ಆಸ್ಪತ್ರೆಗೆ ಸಾಗಿಸುತ್ತಿದ್ದ ಸಂದರ್ಭದಲ್ಲಿ ತಾಯಿ ಹಸು ವಾಹನದ ಹಿಂದೆಯೇ ಓಡೋಡಿ ಬಂದಿರುವ ಘಟನೆ ಎಲ್ಲರ ಮನಕಲಕುವಂತಿತ್ತು.
Vijaya Karnataka Web mother cow runs behind vehicle carrying her calf for treatment
'ಹಸು'ಗೂಸಿನ ಹಿಂಬಾಲಿಸಿದ ತಾಯಿ 'ಕರು'ಳು!


ನಗರದ ಜೆಪಿ ವೃತ್ತದ ಬಳಿಯ ಬೀದಿ ಹಸುವಿನ ಕರುವೊಂದು ಅನಾರೋಗ್ಯದಿಂದ ಬಳಲುತ್ತಿತ್ತು. ತೀವ್ರ ಅಸ್ವಸ್ಥವಾಗಿದ್ದ ಕರುವನ್ನು ಸ್ಥಳೀಯರು ಪಶು ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದರು. ತನ್ನ ಮುದ್ದು ಮರಿಯನ್ನು ಯಾರೋ ಕರೆದುಕೊಂಡು ಹೋಗುತ್ತಿದ್ದಾರೆಂದು ತಾಯಿ ಹಸು ಕೂಡ ವಾಹನದ ಹಿಂದೆಯೇ ಒಡಿ ಹೋಗಿದೆ.

ಕರುವಿನ ಚಿಕಿತ್ಸೆ ಮುಗಿಯುವವರೆಗೂ ತಾಯಿ ಹಸು ಆಸ್ಪತ್ರೆಯ ಮುಂದೆಯೇ ಕಣ್ಣೀರು ಸುರಿಸುತ್ತಾ ಕಾದು ನಿಂತ್ತಿತ್ತು. ಚಿಕಿತ್ಸೆ ಬಳಿಕ ಕರುಳು ಬಳ್ಳಿಯನ್ನು ತಾಯಿ ಹಸು ಮುದ್ದಾಡಿದ್ದು ಎಂಥವರ ಕಣ್ಣನ್ನು ಒದ್ದೆ ಮಾಡುವಂತಿತ್ತು. ಸದ್ಯ ಮುದ್ದು ಕರು ಗಣಮುಖವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ