ಆ್ಯಪ್ನಗರ

ತಾಯಮ್ಮ ದೇವಿ ರಥೋತ್ಸವ

ಶಿಗ್ಗಾವಿ: ತಾಯಮ್ಮ ನಿನ್ನಾಲ್ಕೋದೋ.. ಉಧೋ.. ಉಧೋ.. ಉಧೋ. ಇದು ತಾಲೂಕಿನ ತಡಸ ಗ್ರಾಮದಿಂದ ಐದು ಕಿಮೀ ದೂರ ದಟ್ಟ ಅರಣ್ಯದಲ್ಲಿಶುಕ್ರವಾರ ಸೂರ್ಯಸ್ತ ಸಮಯದಲ್ಲಿನಡೆದ ತಾಯಮ್ಮ ದೇವಿ ರಥೋತ್ಸವದಲ್ಲಿಭಕ್ತ ಸಮೂಹದಿಂದ ಪ್ರತಿಧ್ವನಿಸಿದ ಭಕ್ತ ನುಡಿಗಳಿವು..!

Vijaya Karnataka 2 Nov 2019, 5:00 am
ಶಿಗ್ಗಾವಿ: ತಾಯಮ್ಮ ನಿನ್ನಾಲ್ಕೋದೋ.. ಉಧೋ.. ಉಧೋ.. ಉಧೋ. ಇದು ತಾಲೂಕಿನ ತಡಸ ಗ್ರಾಮದಿಂದ ಐದು ಕಿಮೀ ದೂರ ದಟ್ಟ ಅರಣ್ಯದಲ್ಲಿಶುಕ್ರವಾರ ಸೂರ್ಯಸ್ತ ಸಮಯದಲ್ಲಿನಡೆದ ತಾಯಮ್ಮ ದೇವಿ ರಥೋತ್ಸವದಲ್ಲಿಭಕ್ತ ಸಮೂಹದಿಂದ ಪ್ರತಿಧ್ವನಿಸಿದ ಭಕ್ತ ನುಡಿಗಳಿವು..!
Vijaya Karnataka Web 1SGN-3_23
ಶಿಗ್ಗಾವಿ ತಾಲೂಕಿನ ತಡಸ-ಮುಂಡಗೋಡ ರಸ್ತೆ ದಟ್ಟರಣ್ಯದಲ್ಲಿನಡೆದ ತಾಯಮ್ಮ ರತೋತ್ಸವ.


ಮೂರು ತಾಲೂಕಿನ ಭಕ್ತ ಸಮೂಹದ ಮಧ್ಯೆ ಸಡಗರ, ಸಂಭ್ರಮದಲ್ಲಿಶ್ರೀದೇವಿ ರಥೋತ್ಸವ ನಡೆಯತು. ಬೆಳಕಿನ ದೀಪಾವಳಿ ಹಬ್ಬ ಮುಗಿದು, ಐದು ದಿನದ ಬಳಿಕ ನಡೆಯವ ಈ ಶಕ್ತಿ ದೇವತೆ ತಾಯಮ್ಮ ದೇವಿ ರಥೋತ್ಸವ ಕಾರ್ಯಕ್ರಮದಲ್ಲಿಸಹಸ್ರ ಸಂಖ್ಯೆಯಲ್ಲಿಪಾಲ್ಗೊಂಡ ಭಕ್ತ ಸಮೂಹ, ಭಕ್ತಿಯಿಂದ ದೇವಿಗೆ ಅರಾಧನೆಗೈಯತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.

ಸಕಲ ವಾದ್ಯ, ವೈಭವದೊಂದಿಗೆ ಅದ್ಧೂರಿಯಾಗಿ ನಡೆದ ರಥೋತ್ಸವದಲ್ಲಿವಿವಿಧ ಜಾನಪದ ಕಲಾವಿದರಿಂದ ವಿವಿಧ ಪ್ರಕಾರಗಳ ಕಲೆಗಳ ನೃತ್ಯ ಗಮನ ಸೆಳೆದವು. ಡೊಳ್ಳು, ನಂದಿ ಕೋಲು ಕುಣಿತ ಆಕರ್ಷಕವಾಗಿತ್ತು. ಕೋಲಾಟ, ಝಾಂಜ್‌ ಪಥಕ ಸದ್ದು ಪ್ರತಿಧ್ವನಿಸಿತು.

ಇದಕ್ಕೂ ಪೂರ್ವ ಪ್ರಾತಃ ಕಾಲದಿಂದ ಸಂಜೆವರೆಗೆ ತಾಯಮ್ಮ ದೇವಿಗೆ ಧಾರ್ಮಿಕ ವಿಧಾನಗಳ ಪ್ರಕಾರ, ವಿಶೇಷ ಪೂಜೆ ನೆರವೇರಿತು. ಭಕ್ತರು, ಹಣ್ಣು ಕಾಯಿಗಳನ್ನು ಸಾಮೂಹಿಕವಾಗಿ ನೈವೇದ್ಯ ಮಾಡುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಕಷ್ಟ ಕಳೆದು, ಇಷ್ಟಾರ್ಥಗಳ ಈಡೇರಿಸು ಎಂದು ಬೇಡಿಕೊಳ್ಳುತ್ತಿದ್ದರು.

ವಿವಿಧ ಗ್ರಾಮಗಳಿಂದ ತಂಡೋಪ ತಂಡವಾಗಿ ಭಕ್ತರು ಆಗಮಿಸುತ್ತಿದ್ದರು. ಕೆಲವರು ಕಾಲ್ನುಡಿಗೆ, ಚಕ್ಕಡಿ, ಸೈಕಲ್‌, ಟ್ರ್ಯಾಕ್ಟರ್‌ಗಳ ಮೂಲಕ ಬಂದು ದೇವಿ ಆಶೀರ್ವಾದ ಪಡೆದು ದಟ್ಟಡವಿಯಲ್ಲಿತಮ್ಮ ಸಂಬಂಧಿಕರು ಹಾಗೂ ಆತ್ಮೀಯರನ್ನು ಆಹ್ವಾನಿಸಿ ವಿವಿಧ ತರಹ ಸಹಿ ತಿನಿಸುಗಳ ಊಟ ಬಡಿಸಿದರು.

ಮುತ್ತಳ್ಳಿ, ತಡಸ ಸೇರಿದಂತೆ ವಿವಿಧ ಗ್ರಾಮದ ನೂರಾರು ಸಂಖ್ಯೆಯ ಭಕ್ತರು ರಥೋತ್ಸವದಲ್ಲಿಪಾಲ್ಗೊಂಡಿದ್ದರು. ರಥೋತ್ಸವ ಅಂಗವಾಗಿ ಮುಂಡಗೋಡ-ತಡಸ ಮಾರ್ಗದ ಮುಖ್ಯ ರಸ್ತೆ ವಾಹನ ಸಂಚಾರ ಸ್ಥಗಿತಗೊಳಿಸಲಾಗಿತ್ತು. ಕುನ್ನೂರ ಮಮದಾಪೂರ, ಮುಂಡಗೋಡ ರಸ್ತೆ ಸಂಚಾರ ಕಲ್ಪಿಸಲಾಗಿತ್ತು. ಪೊಲೀಸರು ಸೂಕ್ತ ಬಂದೋಬಸ್‌್ತ ಏರ್ಪಡಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ