ಆ್ಯಪ್ನಗರ

ಸಾಕ್ಷಾತ್ಕಾರ ನೀಡಿದ ಶ್ರೀ ಬೈಲ ಮಾರುತಿ

ಬಸವರಾಜ ಸರೂರ ರಾಣೇಬೆನ್ನೂರ: ಇಲ್ಲಿನ ಶಿದ್ಧೇಶ್ವರನಗರದ ಶ್ರೀ ಬೈಲ ಮಾರುತಿ ದೇವಸ್ಥಾನದಲ್ಲಿ ಶ್ರಾವಣ ಮಾಸದಲ್ಲಿ ಪಂಚಾಮೃತ ಅಭಿಷೇಕ, ಕುಂಕುಮ ಪೂಜೆ ನೆರವೇರಿಸಲಾಗುತ್ತದೆ. ಹನುಮ ಜಯಂತಿಯಂದು ತೊಟ್ಟಿಲು ಸೇವೆ ಮಾಡಿ ಭಕ್ತಾದಿಗಳಿಗೆ ಕೊಸಂಬರಿ ಪಾನಕ ವಿತರಿಸಲಾಗುತ್ತದೆ. ವರ್ಷಪೂರ್ತಿ ಪ್ರತಿ ಶನಿವಾರ ದೇವರಿಗೆ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ.

Vijaya Karnataka 13 Aug 2019, 5:00 am
ಬಸವರಾಜ ಸರೂರ ರಾಣೇಬೆನ್ನೂರ: ಇಲ್ಲಿನ ಶಿದ್ಧೇಶ್ವರನಗರದ ಶ್ರೀ ಬೈಲ ಮಾರುತಿ ದೇವಸ್ಥಾನದಲ್ಲಿ ಶ್ರಾವಣ ಮಾಸದಲ್ಲಿ ಪಂಚಾಮೃತ ಅಭಿಷೇಕ, ಕುಂಕುಮ ಪೂಜೆ ನೆರವೇರಿಸಲಾಗುತ್ತದೆ. ಹನುಮ ಜಯಂತಿಯಂದು ತೊಟ್ಟಿಲು ಸೇವೆ ಮಾಡಿ ಭಕ್ತಾದಿಗಳಿಗೆ ಕೊಸಂಬರಿ ಪಾನಕ ವಿತರಿಸಲಾಗುತ್ತದೆ. ವರ್ಷಪೂರ್ತಿ ಪ್ರತಿ ಶನಿವಾರ ದೇವರಿಗೆ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ.
Vijaya Karnataka Web mr byla maruthi the realization
ಸಾಕ್ಷಾತ್ಕಾರ ನೀಡಿದ ಶ್ರೀ ಬೈಲ ಮಾರುತಿ


ಈ ದೇವಸ್ಥಾನವನ್ನು ಜನಮೇಯರಾಜರು ಪ್ರತಿಷ್ಠಾಪಿಸಿದರೆಂದು ಕೆಲವರು ಹೇಳಿದರೆ, ಮತ್ತೆ ಕೆಲವರು ಇದು ಒಡಮೂಡಿದ ಜಾಗೃತ ದೇವರೆಂದು ಹೇಳುತ್ತಾರೆ. 25 ವರ್ಷಗಳ ಹಿಂದೆ ಈಗಿರುವ ದೇವಸ್ಥಾನವನ್ನು ಜೀರ್ಣೋದ್ಧಾರ ಮಾಡಲಾಗಿದೆ.

ಹೇಳವನಕಟ್ಟಿ ಗಿರಿಯಮ್ಮಳಿಗೆ ಸಾಕ್ಷಾತ್ಕಾರ: ಹೇಳನವಕಟ್ಟಿ ಗಿರಿಯಮ್ಮ ನಿತ್ಯವೂ ಬೈಲ ಮಾರುತಿ ದೇವರ ಸೇವೆ ಮಾಡುತ್ತಿದ್ದಳು. ಮದುವೆಯಾಗಿ ಗಂಡನ ಮನೆಗೆ ಹೋದ ನಂತರವೂ ಸೇವೆ ಮಾಡಲು ಬರುತ್ತಿದ್ದಳು. ಅನೇಕ ಬಾರಿ ಮಾರುತಿಯೇ ಮಾರುವೇಷದಲ್ಲಿ ಅವಳ ಗಂಡನ ಊರಾದ ಮಲೇಬೆನ್ನೂರಿಗೆ ಹೋಗಿ ಬಿಟ್ಟು ಬರುತ್ತಿದ್ದನು. ಒಂದು ದಿನ ಬೈಲ ಮಾರುತಿ ಹೇಳವನಕಟ್ಟಿ ಗಿರಿಯಮ್ಮಳಿಗೆ ಸಾಕ್ಷ ತ್ಕಾರ ನೀಡಿ ಮಲೇಬೆನ್ನೂರಿನ ರಂಗನಾಥ ದೇವರ ಸೇವೆ ಮಾಡುವಂತೆ ತಿಳಿಸಿದನೆಂಬ ಐತಿಹ್ಯಗಳಿವೆ.

ಪುರೋಹಿತ ವಂಶಸ್ಥರಿಗೆ ಪೂಜೆ ಹೊಣೆ: ಬ್ರಿಟಿಷರ್‌ ಆಳ್ವಿಕೆಯಲ್ಲಿ ಊರಿನಲ್ಲಿ ಪೌರೋಹಿತ್ಯ ಮಾಡುವ ಏಕೈಕ ಮನೆತನ ಪುರೋಹಿತರಾಗಿತ್ತು. ಇದನ್ನು ಗುರುತಿಸಿದ ಬ್ರಿಟಿಷ್‌ ಅಧಿಕಾರಿಗಳು ದೇವರ ಪೂಜೆ ಮಾಡುವ ಜವಾಬ್ದಾರಿಯನ್ನು ಪುರೋಹಿತ ಮನೆದವರಿಗೆ ನೀಡಿದ್ದಾರೆ.

ಜಾಗೃತ ದೇವರು: ಇಲ್ಲಿನ ಮಾರುತಿ ಜಾಗೃತ ದೇವರಾಗಿದ್ದು ದೇವಸ್ಥಾನದ ಆವರಣದಲ್ಲಿ ಅನ್ನ ಸಂತರ್ಪಣೆ ಮಾಡಲು ಅವಕಾಶವಿಲ್ಲ. ಅದನ್ನು ಯಾರಾದರೂ ಉಲ್ಲಂಘಿಸಿದರೆ ಅವರಿಗೆ ತಕ್ಕ ಶಾಸ್ತಿಯಾಗುತ್ತದೆ. ಶ್ರಾವಣ ಮಾಸ ಹಾಗೂ ಪ್ರತಿ ಶನಿವಾರ ಪಂಚಾಮೃತ ಅಭಿಷೇಕ, ಕುಂಕುಮ ಪೂಜೆ ನೆರವೇರಿಸಲಾಗುತ್ತದೆ.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ