ಆ್ಯಪ್ನಗರ

ಬಾಲಕನ ಕೊಲೆ: ಜೀವಾವಧಿ ಶಿಕ್ಷೆ

ಹಾವೇರಿ: ಬಾಲಕನ ಮೇಲೆ ಅನೈಸರ್ಗಿಕವಾಗಿ ಲೈಂಗಿಕ ದೌರ್ಜನ್ಯ ಎಸಗಿದ್ದಲ್ಲದೆ ಆತನನ್ನು ಕೊಲೆ ಮಾಡಿದ ಆರೋಪಿಗೆ ಒಂದನೆ ಅಧಿಕ ಜಿಲ್ಲಾವ ಸತ್ರ (ಪೋಕ್ಸೋ) ವಿಶೇಷ ನ್ಯಾಯಾಲಯದ ನ್ಯಾಯಾಧೀಶರು ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ಪ್ರಕಟಿಸಿದ್ದಾರೆ.

Vijaya Karnataka 10 Jan 2020, 5:00 am
ಹಾವೇರಿ: ಬಾಲಕನ ಮೇಲೆ ಅನೈಸರ್ಗಿಕವಾಗಿ ಲೈಂಗಿಕ ದೌರ್ಜನ್ಯ ಎಸಗಿದ್ದಲ್ಲದೆ ಆತನನ್ನು ಕೊಲೆ ಮಾಡಿದ ಆರೋಪಿಗೆ ಒಂದನೆ ಅಧಿಕ ಜಿಲ್ಲಾವ ಸತ್ರ (ಪೋಕ್ಸೋ) ವಿಶೇಷ ನ್ಯಾಯಾಲಯದ ನ್ಯಾಯಾಧೀಶರು ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ಪ್ರಕಟಿಸಿದ್ದಾರೆ.
Vijaya Karnataka Web murder of a boy life imprisonment
ಬಾಲಕನ ಕೊಲೆ: ಜೀವಾವಧಿ ಶಿಕ್ಷೆ


ಬಂಕಾಪುರ ಠಾಣೆ ವ್ಯಾಪ್ತಿಯ ಮಲ್ಲನಾಕನಕೊಪ್ಪ ಗ್ರಾಮದಲ್ಲಿ2017 ಮೇ 16 ರಂದು ಚಂದಾಪೂರ ತಾಂಡಾದ ಆರೋಪಿ ಸುಭಾಸ ಅಗಸಿಮನಿ ಎಂಬಾತನು ಬಾಲಕನನ್ನು ಪುಸಲಾಯಿಸಿ ಬೈಕ್‌ನಲ್ಲಿಅಪಹರಿಸಿಕೊಂಡು ಮುಂಡಗೋಡ ಮಾರ್ಗದ ರಾಜೀವ ಗ್ರಾಮದ ಹತ್ತಿರ ಕೋಣನಕೇರೆ ಗ್ರಾಮದ ಕಾಡಿನಲ್ಲಿಬಾಲಕನ ಮೇಲೆ ಅನೈಸರ್ಗಿಕವಾಗಿ ಲೈಂಗಿಕ ದೌರ್ಜನ್ಯ ಎಸಗಿ, ಕತ್ತು ಹಿಸುಕಿ ಕೊಲೆಮಾಡಿ ಕಾಡಿನಲ್ಲಿಶವವನ್ನು ಬಚ್ಚಿಟ್ಟಿದ್ದ ಎಂದು ಆರೋಪಿಸಲಾಗಿದೆ.

ಈ ಕುರಿತಂತೆ ಬಂಕಾಪೂರ ಠಾಣೆಯಲ್ಲಿದೂರು ದಾಖಲಾಗಿ ತನಿಖೆ ನಡೆಸಿದ ಪೊಲೀಸರು ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ಪೋಕ್ಸೋ ನ್ಯಾಯಾಲಯವು ಆರೋಪ ರುಜುವಾತ ಆದಕಾರಣ ತೀರ್ಪು ಪ್ರಕಟಿಸಿ ಅಪರಾಧಿಗೆ ಕಲಂ 302 ಐಪಿಸಿ ಅಡಿ ಜೀವಾವಧಿ ಶಿಕ್ಷೆ ಮತ್ತು 50 ಸಾವಿರ ರೂ.ದಂಡ ವಿಧಿಸಿದೆ. ದಂಡ ಪಾವತಿಸಲು ವಿಫಲವಾದರೆ 5 ತಿಂಗಳ ವಿಸ್ತರಿಸಬಹುದಾದ ಸಜೆ ಪ್ರಕಟಿಸಿದೆ. ದಂಡದ ಮೊತ್ತದಲ್ಲಿಬಾಲಕನ ಪಾಲಕರಿಗೆ ಪರಿಹಾರವಾಗಿ 20 ಸಾವಿರ ರೂ.ಗಳನ್ನು ನೀಡಲು ಆದೇಶಿಸಿ ತೀರ್ಪು ನೀಡಿದ್ದಾರೆ. ಸರ್ಕಾರದ ಪರವಾಗಿ ಪೋಕ್ಸೋ ವಿಶೇಷ ನ್ಯಾಯಾಲಯದ ಸರ್ಕಾರಿ ಅಭಿಯೋಜಕ ವಿನಾಯಕ ಎಸ್‌. ಪಾಟೀಲ ಅವರು ವಾದ ಮಂಡಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ