Please enable javascript.‘ಮುತ್ತಪ್ಪ ಮುತ್ತವ್ವ’ ನಾಟಕ ಪ್ರದರ್ಶನ - 'Muthappa Muthavva' theater performances - Vijay Karnataka

‘ಮುತ್ತಪ್ಪ ಮುತ್ತವ್ವ’ ನಾಟಕ ಪ್ರದರ್ಶನ

ವಿಕ ಸುದ್ದಿಲೋಕ 12 Aug 2017, 5:00 am
Subscribe

ಹಾವೇರಿ:ಶಿಗ್ಗಾವಿ ತಾಲೂಕಿನ ಅರಟಾಳ ಗ್ರಾಮದಲ್ಲಿ ನೂಲಹುಣ್ಣಿಮೆ ಅಂಗವಾಗಿ ಜಿಲ್ಲಾ ಕಲಾವಿದರ ಬಳಗ, ಜೈನ ಮಿಲನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ

muthappa muthavva theater performances
‘ಮುತ್ತಪ್ಪ ಮುತ್ತವ್ವ’ ನಾಟಕ ಪ್ರದರ್ಶನ

ಹಾವೇರಿ:ಶಿಗ್ಗಾವಿ ತಾಲೂಕಿನ ಅರಟಾಳ ಗ್ರಾಮದಲ್ಲಿ ನೂಲಹುಣ್ಣಿಮೆ ಅಂಗವಾಗಿ ಜಿಲ್ಲಾ ಕಲಾವಿದರ ಬಳಗ, ಜೈನ ಮಿಲನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ಮಂಗಳವಾರ ಶಂಕರ ತುಮ್ಮಣ್ಣನವರ ರಚಿಸಿ, ನಿರ್ದೇಶಿಸಿದ ಮುತ್ತಪ್ಪ ಮುತ್ತವ್ವ ಎಂಬ ಕೌಟುಂಬಿಕ ನಾಟಕವನ್ನು ಪ್ರದರ್ಶಿಸಲಾಯಿತು.

ಪುಣ್ಯ ಸಾಗರ ಮಿನಿ ಮಹಾರಾಜ ಸಾನ್ನಿಧ್ಯ ವಹಿಸಿದ್ದರು. ಜೈನ ಮಿಲನದ ನಿರ್ದೇಶಕ ಭರತರಾಜ ಹಜಾರಿ ಉದ್ಘಾಟಿಸಿದರು. ಅನಂತಪ್ಪ ಛಬ್ಬಿ, ಮಹಾವೀರ ಧಾರವಾಡ, ಪದ್ಮಾರಾಜ ಜೈನರ್‌, ಮನೋಹರ ಸಾತಗೊಂಡ, ಬೂಪಾಲಣ್ಣ ಹೋಳಗಿ ಉಪಸ್ಥಿತರಿದ್ದರು.

ಕಲಾವಿದ ಶಂಕರ ತುಮ್ಮಣ್ಣನವರ ಮಾತನಾಡಿ, ಈ ನಾಟಕವು ಮುಪ್ಪಿನ ಕಾಲದಲ್ಲಿ ಮಗನ ಆಶ್ರಯ ಪಡೆಯಬೇಕೆಂಬ ಆಸೆ ಹೊತ್ತ ಅಪ್ಪನ ಸುತ್ತ ಹೆಣೆದ ಕಥೆ ಹೊಂದಿದೆ ಎಂದರು.

ಮುಖ್ಯ ಪಾತ್ರದಲ್ಲಿ ಶಂಕರ ತುಮ್ಮಣ್ಣನವರ, ಮುತ್ತುರಾಜ ಹಿರೇಮಠ, ವಿರೇಶ ಸಂಕಿನಮಠ, ವಸಂತ ಕಡತಿ ಅಭಿನಯಿಸಿದರು. ಸಹ ಪಾತ್ರದಲ್ಲಿ ವಿಮಲ್‌ಕುಮಾರ ಬೋಗಾರ, ನಾಗರಾಜ ಬೇನಳ್ಳಿ, ಸಂಗೀತವನ್ನು ಹನುಮಂತಪ್ಪ ಕರಬಾಳಿ ನುಡಿಸಿದರು. ಶಂಕರ ತುಮ್ಮಣ್ಣನರ ನಿರೂಪಿಸಿ, ವಂದಿಸಿದರು.

ಕಾಮೆಂಟ್‌ ಮಾಡಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ