ಆ್ಯಪ್ನಗರ

ನನ್ನ ತೇಜೋವಧೆ ಸಮಾಜ ಒಪ್ಪಲ್ಲ: ಬೊಮ್ಮಾಯಿ

ಶಿಗ್ಗಾವಿ: ರಾಜ್ಯದಲ್ಲಿ ಅತೀ ಹೆಚ್ಚು ಅಭಿವೃದ್ಧಿ ಕಂಡ ಲಂಬಾಣಿ ತಾಂಡಗಳು ನನ್ನ ಕ್ಷೇತ್ರದಲ್ಲಿವೆ. ಈ ಸತ್ಯ ಗೊತ್ತಿಲ್ಲದೆ ಉದ್ದೇಶ ಪೂರ್ವಕವಾಗಿ ಯಾರೋ ಅಭಿವೃದ್ಧಿ ಕೆಲಸಗಳನ್ನು ಟೀಕಿಸುವ ಮತ್ತು ನನ್ನ ತೇಜೋವಧೆ ಮಾಡಲು ಬಂದವರನ್ನು ಈ ಸಮಾಜದ ಜನ ಒಪ್ಪಲ್ಲ ಎಂದು ಶಾಸಕ ಬಸವರಾಜ ಬೊಮ್ಮಾಯಿ ತಿಳಿಸಿದರು.

Vijaya Karnataka 13 Mar 2019, 5:00 am
ಶಿಗ್ಗಾವಿ: ರಾಜ್ಯದಲ್ಲಿ ಅತೀ ಹೆಚ್ಚು ಅಭಿವೃದ್ಧಿ ಕಂಡ ಲಂಬಾಣಿ ತಾಂಡಗಳು ನನ್ನ ಕ್ಷೇತ್ರದಲ್ಲಿವೆ. ಈ ಸತ್ಯ ಗೊತ್ತಿಲ್ಲದೆ ಉದ್ದೇಶ ಪೂರ್ವಕವಾಗಿ ಯಾರೋ ಅಭಿವೃದ್ಧಿ ಕೆಲಸಗಳನ್ನು ಟೀಕಿಸುವ ಮತ್ತು ನನ್ನ ತೇಜೋವಧೆ ಮಾಡಲು ಬಂದವರನ್ನು ಈ ಸಮಾಜದ ಜನ ಒಪ್ಪಲ್ಲ ಎಂದು ಶಾಸಕ ಬಸವರಾಜ ಬೊಮ್ಮಾಯಿ ತಿಳಿಸಿದರು.
Vijaya Karnataka Web HVR-12SGN-1


ಸೋಮವಾರ ಸಂಜೆ ಪಟ್ಟಣದ ಸಂತೆ ಮೈದಾನದಲ್ಲಿ ತಾಲೂಕು ಬಂಜಾರ ಸಮಾಜ ಆಯೋಜಿಸಿದ್ದ ತಾಲೂಕು ಬಂಜಾರ ಸಮಾವೇಶ, ಸಂತ ಸೇವಾಲಾಲರ 280 ನೇ ಜಯಂತ್ಯುತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಬಿಜೆಪಿ ಆಡಳಿತದಲ್ಲಿದ್ದಾಗ ಬಂಜಾರ ನಿಗಮದ ಮೂಲಕ ಶಿಗ್ಗಾವಿ ಕ್ಷೇತ್ರದ ತಾಂಡಗಳ ಅಭಿವೃದ್ಧಿಗೆ ಕೈಗೊಂಡ ಕೆಲಸಗಳು ಕಣ್ಮುಂದಿವೆ. ರಾಜ್ಯಲ್ಲೇ ಹೆಚ್ಚು ಅಭಿವೃದ್ಧಿ ಕಂಡ ತಾಂಡಾಗಳ ಕ್ಷೇತ್ರ ಇದಾಗಿದೆ. ವಿರೋಧಿಸುವ ಜನರು, ಬೇರೆ ತಾಂಡಗಳಿಗೆ ಹೋಗಿ ನೋಡಿ ಬರಲಿ ಎಂದು ಸಲಹೆ ನೀಡಿದರು.

ಕ್ಷೇತ್ರದಲ್ಲಿನ ಎಲ್ಲ ಲಂಬಾಣಿ ತಾಂಡಾಗಳ ಅಭಿವೃದ್ಧಿಗೆ ಶ್ರಮಿಸಿದ್ದೇನೆ. ಸೇವಾಲಾಲ ಭವನ, ದೇವಸ್ಥಾನ, ಮರಿಯಮ್ಮ ದೇವಿ ದೇವಸ್ಥಾನಗಳ ನಿರ್ಮಿಸಲಾಗಿದೆ. ರಾಜ್ಯದಲ್ಲೇ ಎಲ್ಲ ಮೂಲಭೂತ ಸೌಕರ್ಯಗಳನ್ನೊಳಗೊಂಡ ತಾಂಡಾಗಳು ನಮ್ಮಲ್ಲಿವೆ ಎನ್ನುವುದೇ ನಮಗೊಂದು ಹೆಮ್ಮೆ ಎಂದರು.

ಲಂಬಾಣಿ ಜನಾಂಗ ದುಡಿಮೆಗೆ ಹೆಚ್ಚು ಒತ್ತು ನೀಡುತ್ತಾರೆ. ಅದರಂತೆ ಮಕ್ಕಳಿಗೆ ಗುಣಮಟ್ಟದ ಶಿಕ್ಷ ಣ ನೀಡುವಲ್ಲಿಯೂ ಆದ್ಯತೆ ನೀಡಬೇಕು. ಜಗತ್ತಿನ ಪೈಪೋಟಿಗೆ ಅವರನ್ನು ಸನ್ನದ್ಧಗೊಳಿಸಬೇಕು. ಸಂತ ಸೇವಾಲಾಲ ಮಹಾ ರಾಜರ ತತ್ವಾದರ್ಶ ಅವರ ಹೋರಾಟದ ಬದುಕಿನ ಚರಿತ್ರೆ ಅರಿತುಕೊಂಡು ನಮ್ಮ ಬದುಕಿನಲ್ಲಿ ಅದನ್ನು ಅಳವಡಿಸಿಕೊಂಡಾಗ ಹಿಂದುಳಿದ ಬಂಜಾರಾ ಸಮಾಜದಲ್ಲಿ ಹೊಸ ಚೈತನ್ಯ ಮೂಡಿಸಲು ಸಾಧ್ಯ ಎಂದು ಹೇಳಿದರು.

ಸಂಸದ ಪ್ರಲ್ಹಾದ ಜೋಶಿ ಮಾತನಾಡಿ, ಬಂಜಾರಾ ಸಮುದಾಯದ ಅಭಿವೃದ್ಧಿಗೆ ಹಿಂದಿನ ಬಿಜೆಪಿ ಸರಕಾರ ನಿಗಮ ಸ್ಥಾಪನೆ ಮಾಡಿ ಅನುದಾನ ನೀಡಿತ್ತು, ಸಂತ ಸೇವಾಲಾಲರು ಮಹಾನ್‌ ತಪಸ್ವಿ. ಅವರ ಬದುಕಿನ ಚಿತ್ರಣ ಅಥೈರ್‍ಸಿಕೊಂಡಾಗ ಜೀವನದಲ್ಲಿ ಬದಲಾವಣೆ ಕಂಡುಕೊಳ್ಳಲು ಸಾಧ್ಯ ಎಂದರು.

ಡಾ.ರಾಜಾ ನಾಯಕ ಉಪನ್ಯಾಸ ನೀಡಿದರು. ಲಂಬಾಣಿ ಗುರು ಪೀಠದ ತಿಪ್ಪೇಶ್ವರ ಸ್ವಾಮೀಜಿ, ಲಿಂಗಸೂರಿನ ಸಿದ್ಧಲಿಂಗ ಸ್ವಾಮೀಜಿ ಸಾನಿಧ್ಯವಹಿಸಿ ಆಶೀರ್ವಚನ ನೀಡಿದರು. ಸರಿಗಮಪ ಗಾಯಕ ಹನುಮಂತ ಲಮಾಣಿ, ಪುರಸಭೆ ಅಧ್ಯಕ್ಷ ಶಿವಪ್ರಸಾದ ಸುರಗೀಮಠ, ಎಪಿಎಂಸಿ ಅಧ್ಯಕ್ಷೆ ಪ್ರೇಮಾ ಪಾಟೀಲ, ಸಮಾಜದ ತಾಲೂಕು ಅಧ್ಯಕ್ಷ ದ್ಯಾಮಲಪ್ಪ ರಾಠೋಡ, ಹರ್ಜಪ್ಪ ಲಮಾಣಿ, ಡಾ.ಲಕ್ಷ ್ಮಣ ನಾಯಕ್‌, ತಾಪಂ. ಸದಸ್ಯೆ ಸೋಮವ್ವ ರಾಠೋಡ, ತಾರಾಬಾಯಿ ಲಮಾಣಿ, ಸುಭಾಸ ಚವ್ಹಾಣ, ಸುಧೀರ ಲಮಾಣಿ, ಪರಮೇಶ ಲಮಾಣಿ, ಅಶೋಕ ರಾಠೋಡ, ಸೇರಿದಂತೆ ಬಂಜಾರಾ ಸಮಾಜದ ಮುಖಂಡರು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ