ಆ್ಯಪ್ನಗರ

ಪ್ರಕೃತಿ ಪ್ರಕ್ಷ ಬ್ಧ: ಎಚ್ಚರಿಕೆ ಅಗತ್ಯ

ಹಾನಗಲ್ಲ: ನೀರಿನ ಮಿತ ಬಳಕೆಯ ಜಾಗೃತಿ ಬೇಕು. ಮಳೆ ನೀರು ಸಂಗ್ರಹಣೆಗೆ ಆಸಕ್ತಿ ವಹಿಸಬೇಕು. ಕೆರೆಗಳ ದುರಸ್ತಿ, ಮಳೆ ಕೊಯ್ಲು, ಇಂಗುಗುಂಡಿ ಮಹತ್ವವನ್ನು ಸಮುದಾಯದಲ್ಲಿ ಪ್ರಚುರಪಡಿಸಬೇಕಾಗಿದೆ ಎಂದು ರತಾಪೂರ ಗ್ರಾಮದ ಜಲತಜ್ಞ ತಿಪ್ಪೇಸ್ವಾಮಿ ಕೊಪ್ಪದ ಸಲಹೆ ನೀಡಿದರು.

Vijaya Karnataka 5 Jul 2019, 5:00 am
ಹಾನಗಲ್ಲ: ನೀರಿನ ಮಿತ ಬಳಕೆಯ ಜಾಗೃತಿ ಬೇಕು. ಮಳೆ ನೀರು ಸಂಗ್ರಹಣೆಗೆ ಆಸಕ್ತಿ ವಹಿಸಬೇಕು. ಕೆರೆಗಳ ದುರಸ್ತಿ, ಮಳೆ ಕೊಯ್ಲು, ಇಂಗುಗುಂಡಿ ಮಹತ್ವವನ್ನು ಸಮುದಾಯದಲ್ಲಿ ಪ್ರಚುರಪಡಿಸಬೇಕಾಗಿದೆ ಎಂದು ರತಾಪೂರ ಗ್ರಾಮದ ಜಲತಜ್ಞ ತಿಪ್ಪೇಸ್ವಾಮಿ ಕೊಪ್ಪದ ಸಲಹೆ ನೀಡಿದರು.
Vijaya Karnataka Web HVR-04HGL2


ಇಲ್ಲಿನ ರೋಶನಿ ಸಮಾಜ ಸೇವಾ ಸಂಸ್ಥೆಯಲ್ಲಿ ತಾಲೂಕಿನ ಲೋಕ್‌ಮಂಚ್‌ ಮುಖಂಡರಿಗೆ ನೀರು ಮತ್ತು ಪರಿಸರ ಸಂರಕ್ಷ ಣೆ ಕುರಿತು ನಡೆದ ತರಬೇತಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

ಅಧ್ಯಕ್ಷ ತೆ ವಹಿಸಿದ್ದ ರೋಶನಿ ಸಂಸ್ಥೆಯ ಪ್ರಾಂತೀಯ ಅಧಿಕಾರಿ ಸಿಸ್ಟರ್‌ ಅಂಜಲಿನ್‌ ಸಿಕ್ವೇರಾ ಮಾತನಾಡಿ, ದುರಾಸೆ, ವಿಲಾಸಿ ಜೀವನ ಶೈಲಿ, ಪರಿಸರ ವಿರೋಧಿ ನಡತೆಯಿಂದ ಪ್ರಕೃತಿ ಪ್ರಕ್ಷ ುಬ್ಧಗೊಳ್ಳುತ್ತಿದೆ. ಮಳೆ ಅಭಾವ ಸೃಷ್ಠಿಯಾಗುತ್ತಿದೆ. ಈಗಲೇ ಎಚ್ಚೆತ್ತುಕೊಂಡು ಮುಂದಿನ ಪೀಳಿಗೆಗೆ ಸ್ವಚ್ಚಂದ ಪರಿಸರ ಉಳಿಸುವ ಸಂಕಲ್ಪ ನಮ್ಮದಾಗಬೇಕು ಎಂದರು.

ಸ್ಥಳೀಯ ಕುಮಾರೇಶ್ವರ ಕಲಾ ವಾಣಿಜ್ಯ ಮಹಾವಿದ್ಯಾಲಯದ ಭೂಗೋಳಶಾಸ್ತ್ರ ಉಪನ್ಯಾಸಕ ಡಾ.ಪ್ರಕಾಶ ಹೊಳೇರ ಉಪನ್ಯಾಸ ನೀಡಿದರು. ಜಾಗತಿಕ ತಾಪಮಾನ, ಹಸಿರುಮನೆ, ಮರಗಳು ಬಿಡುವ ಇಂಗಾಲ, ಪ್ಲಾಸ್ಟಿಕ್‌ ಬಳಕೆ ಅಪಾಯಗಳ ಕುರಿತು ಮನವರಿಕೆ ಮಾಡಿಕೊಟ್ಟರು.

ತರಬೇತಿಯಲ್ಲಿ ಭಾಗವಹಿಸಿದ್ದ ಲೋಕ್‌ಮಂಚ್‌ ಮುಖಂಡರಿಗೆ ತಾಲೂಕಿನ ಮೂಡೂರ ಗ್ರಾಮದ ಚಂದ್ರಪ್ಪ ತಿಪ್ಪಗೊಂಡರ ಅವರು 100 ಸಸಿಗಳನ್ನು ವಿತರಿಸಿದರು. ಹಳ್ಳಿ ಅಭಿವೃದ್ಧಿ ಸಮಿತಿಯ ಗುಡ್ಡಪ್ಪ ಕಾಮನಹಳ್ಳಿ, ರೂಪಾ ಸಾಂವಕ್ಕನವರ, ಲಕ್ಷ ್ಮವ್ವ ಲಮಾಣಿ ಹಾಜರಿದ್ದರು


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ